24.3 C
Bengaluru
Thursday, July 18, 2024

ಕರ್ನಾಟಕ ಬಜೆಟ್ ನಲ್ಲಿ ಒಟ್ಟಾರೆಯಾಗಿ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆಯಾಗಿದೆ ಗೊತ್ತಾ?

ಬೆಂಗಳೂರು ಜುಲೈ 07: ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24 ರ ಸಾಲಿನ ಮಧ್ಯಂತರ ಬಜೆಟ್​ ಅನ್ನು ಇಂದು ಮಂಡಿಸಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ನಡುವೆ ಹಲವು ಯೋಜನೆಗಳಿಗೆ ಒತ್ತು ನೀಡಿ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರವು ಬಜೆಟ್​ ಮಂಡನೆ ವೇಳೆ ಆರ್ಥಿಕತೆ ಸುಧಾರಿಸುವಲ್ಲಿ ಸೋತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಅದಲ್ಲದೆ ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೋವಿಡ್ ‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿದೆ ಎಂದು ದೂರಿದರು.

ಕಲ್ಯಾಣ ರಾಜ್ಯದ ಕನಸಿನ ಬಜೆಟ್ ಅನ್ನು ಮಂಡಿಸಿರುತ್ತಿರುವುದಾಗಿ ಹೇಳಿದ ಅವರು, 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದರು.

ಆದರೆ ಈ ಬಜೆಟ್​ನ ಗಾತ್ರ ಬಜೆಟ್​​ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂ ಆಗಿದೆ. ಇನ್ನು ಈ ಬಜೆಟ್​​ನಲ್ಲಿ ವಿವಿಧ ಕ್ಷೇತ್ರಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಮತ್ತು ರಾಜ್ಯಕ್ಕೆ ಆದಾಯಗಳ ನಿರೀಕ್ಷೆ ಏನು ಎಂಬ ಕುರಿತು ಮಾಹಿತಿ ಇಲ್ಲಿದೆ.

ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆಯಾಗಿದೆ ಗೊತ್ತಾ?

ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16. 638 ಕೋಟಿ ರೂ ವೆಚ್ಚ

ಕಂದಾಯ ಇಲಾಖೆಗೆ: 16167 ಕೋಟಿ ರೂ ಅನುದಾನ ಹಂಚಿಕೆ

ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14 950 ಕೋಟಿ ರೂ ವೆಚ್ಚ

ಸಮಾಜ ಕಲ್ಯಾಣ ಇಲಾಖೆ: 11.173 ಕೋಟಿ ರೂ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ: 10460 ಕೋಟಿ

ಲೋಕೋಪಯೋಗಿ ಇಲಾಖೆಗೆ: 10143 ಕೋಟಿ ರೂ

ಕೃಷಿ ಮತ್ತು ತೋಟಗಾರಿಕೆ ಇಲಾಖೆ: 5 860 ಕೋಟಿ ರೂ

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 324 ಕೋಟಿ ರೂ

ಶಿಕ್ಷಣ ಇಲಾಖೆ : 37597 ಕೋಟಿ ರೂ ಅನುದಾನ ಹಂಚಿಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ: 24166 ಕೋಟಿ ರೂ

ಇಂಧನ ಇಲಾಖೆ 22.773 ಕೋಟಿ ರೂ

ನಗರಾಭಿವೃದ್ಧಿ ಮತ್ತು ನೀರಾವರಿ ಇಲಾಖೆ: 19.44 ಕೋಟಿ ರೂ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ: 18 .38 ಕೋಟಿ ವೆಚ್ಚ

ಬಜೆಟ್​​ನಲ್ಲಿ ಸರ್ಕಾರ ಆದಾಯದ ನಿರೀಕ್ಷೆ ಇಟ್ಟಿರುವ ಇಲಾಖೆಗಳು:-

*ವಾಣಿಜ್ಯ ತೆರಿಗೆಗಳಿಂದ (ಜಿಎಸ್​ಟಿ ಸೇರಿ) 1.1000 ಕೋಟಿ ಆದಾಯ ನಿರೀಕ್ಷೆ
*ಅಬಕಾರಿ ಇಲಾಖೆಯಿಂದ 36.000 ಕೋಟಿ ರೂ
*ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ 25000 ಕೋಟಿ ರೂ
*ಮೋಟಾರು ವಾಹನ ತೆರಿಗೆಗಳಿಂದ 11.500 ಕೋಟಿ ರೂ
*ಇತರೆ ತೆರಿಗೆಯಿಂದ 2153 ಕೋಟಿ ರೂ
*ಗಣಿ ಮತ್ತು ಭೂ ವಿಜ್ಞಾನ; 9.000 ಕೋಟಿ ರೂ

ಒಟ್ಟು 2,38,410 ಕೋಟಿ ರೂ ರಾಜಸ್ವ ಜಮೆ. ಸ್ವಂತ ತೆರಿಗೆ, ಜಿಎಸ್​ಟಿ ಪರಿಹಾರ ಎಲ್ಲವನ್ನು ಒಳಗೊಂಡಂತೆ 1.75,653 ಕೋಟಿ ಸಂಗ್ರಹ. ತೆರಿಗೆಯೇತರ ರಾಜಸ್ವಗಳಿಂದ ಸಂಗ್ರಹ 12.500 ಕೋಟಿ ರೂ. ಆಗಿದೆ.

Related News

spot_img

Revenue Alerts

spot_img

News

spot_img