#Rationcard #karnataka #BPL #newrationcard #online application #government
ಬೆಂಗಳೂರು, ಆ. 09 :ಕರ್ನಾಟಕ ಪಡಿತರ ಚೀಟಿಯು ಕರ್ನಾಟಕ ರಾಜ್ಯ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಇಂಧನವನ್ನು ಪಡೆಯಲು ಅನುದಾನ ನೀಡುವ ಅಧಿಕೃತ ದಾಖಲೆಯಾಗಿದೆ. ಅಲ್ಲದೆ, ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ನಾಗರಿಕರಿಗೆ ಕರ್ನಾಟಕದಲ್ಲಿ ಪಡಿತರ ಚೀಟಿಯನ್ನು ನೀಡುತ್ತದೆ. ಬಿಪಿಎಲ್ ಕಾರ್ಡ್‌ಗಾಗಿ ಈಗಾಗಲೇ 2.94 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳ ಪರಿಶೀಲನೆ ಕೂಡ ಆರಂಭವಾಗಲಿದೆ. ಎರಡು ರೀತಿಯ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಮನೆಯೊಡತಿಗೆ 2,000ರೂ.ಗಳು ಹಾಗೂ ಬಿಪಿಎಲ್ ಕಾರ್ಡ್ ಇರುವ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಲಾಗಿದ್ದು, ಈ ಕಾರಣಕ್ಕಾಗಿ ಯಾರೆಲ್ಲಾ ಬಿಪಿಎಲ್ ಕಾರ್ಡ್ ಈವರೆಗೂ ಹೊಂದಿಲ್ಲವೋ ಅವರು ಹೊಸ ರೇಷನ್ ಕಾರ್ಡ್ ಪಡೆಯುವ ತವಕದಲ್ಲಿ ಇದ್ದಾರೆ
ಹೊಸ ರೇಷನ್ ಕಾರ್ಡ್ ಪಡೆಯಲು ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ಮನೆಯ ಸದಸ್ಯರ ಆಧಾರ್ ಕಾರ್ಡ್‌ಗಳು, ಸಂಯೋಜಿತ ಐಡಿ, ಬ್ಯಾಂಕ್ ಪಾಸ್ ಬುಕ್, ಆದಾಯ, ಜಾತಿ, ನಿವಾಸ ಪ್ರಮಾಣ ಪತ್ರ ಹಾಗೂ ಕುಟುಂಬ ಸದಸ್ಯರ ಫೋಟೊಗಳು, ಮೊಬೈಲ್ ಸಂಖ್ಯೆ, ಬಾಡಿಗೆದಾರರಿಗೆ ಒಪ್ಪಂದ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ.ಆರು ವರ್ಷದ ಒಳಗಿನ ಮಕ್ಕಳ ಹೆಸರು ಸೇರ್ಪಡೆ ಮಾಡಲು ಆಧಾರ್ ಸಂಖ್ಯೆ, ಅದಕ್ಕೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಮತ್ತು ಜನನ ಪತ್ರ ಕಡ್ಡಾಯವಾಗಿರುತ್ತದೆ.
ಹೊಸ ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
*ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್ (ahara.kar.nic.in) ಮೇಲೆ ಕ್ಲಿಕ್ ಮಾಡಿ ವೆಬ್‌ಸೈಟ್ ಓಪನ್ ಮಾಡಿಕೊಳ್ಳಬೇಕು.
* ಮುಖ್ಯ ಮೆನುವಿನಲ್ಲಿರುವ “ಇ-ಸೇವೆಗಳು” ವಿಭಾಗದಲ್ಲಿ ಕ್ಲಿಕ್ ಮಾಡಿ ಅಥವಾ ನೇರವಾಗಿ https://ahara.kar.nic.in/Home/EServices ಕ್ಲಿಕ್ ಮಾಡಿ
*ಇ-ರೇಷನ್ ಕಾರ್ಡ್‌ನಿಂದ ಹೊಸ ಪಡಿತರ ಚೀಟಿ ಆಯ್ಕೆ ಮಾಡಬೇಕು
*ನಂತರ 2 ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು (English or kannada)
*ಬಿಪಿಎಲ್ ಚೀಟಿಗಾಗಿ ಆದ್ಯತೆಯ ಮನೆ, ಎಪಿಎಲ್‌ಗೆ ಆದ್ಯತೆಯಲ್ಲದ ಕುಟುಂಬದ ಮೂಲಕ ಆಯ್ಕೆ ಮಾಡಬೇಕು
*ನಂತರ ಮೊದಲು ಬಿಪಿಎಲ್ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ ಅಥವಾ ಹೊಸ ಅರ್ಜಿಯೇ ಎಂಬುದಕ್ಕೆ ಉತ್ತರ ನೀಡಬೇಕು
*ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆ ಆಯ್ಕೆ ಮಾಡಿ, ಹೊಸ ನೋಂದಣಿ ಅರ್ಜಿ ಭರ್ತಿ ಮಾಡಲು ʼಗೋʼ ಆಯ್ಕೆ ಮಾಡಬೇಕು
*ನಂತರ ಬಿಪಿಎಲ್ ಅಥವಾ ಎಪಿಎಲ್‌ಗಾಗಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.