23 C
Bengaluru
Tuesday, November 12, 2024

“ಮಾಜಿ ಶಾಸಕ ಮಾಡಾಳ್ ವಿರೋಪಾಕ್ಷಪ್ಪಗೆ ಮತ್ತೊಂದು ಸಂಕಷ್ಟ: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಾಗುವು ಸಾಧ್ಯತೆ:

ಬೆಂಗಳೂರು: ಜೂನ್-05:ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಇಬ್ಬರ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ಲೋಕಾಯುಕ್ತ ದಾಳಿ ಬಳಿಕ ಪರಿಶೀಲನೆ ವೇಳೆ ಇಬ್ಬರ ಬಳಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇಬ್ಬರ ಬಳಿ ಬರೋಬ್ಬರಿ 550 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ತಿ ಮೌಲ್ಯಗಳ ದಾಖಲೆ ಸಿದ್ಧಪಡಿಸಿ ಆದಾಯಕ್ಕೂ ಮೀರಿ ಆಸ್ತಿ ದಾಖಲೆ ಕೇಸ್ ದಾಖಲಿಸಲು ಲೋಕಯುಕ್ತ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ತಂದೆ-ಮಗನ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ಕಳೆದ ಮಾರ್ಚ್ 2ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಶಾಂತ್ ಕಚೇರಿಯಲ್ಲಿ 2 ಕೋಟಿ ಮತ್ತು ಸಂಜಯನಗರದ ಮನೆಯಲ್ಲಿ 6 ಕೋಟಿ ಹಣ ಪತ್ತೆಯಾಗಿತ್ತು. ಟ್ರ್ಯಾಪ್ ಕಾರ್ಯಚಣೆ ವೇಳೆ ಲೋಕಾಯುಕ್ತ ಅಗತ್ಯ ಸಾಕ್ಷ್ಯಧಾರ ಸಂಗ್ರಹಿಸಿದ್ದು ಸದ್ಯದಲ್ಲೇ ಚಾರ್ಜ್​ಶೀಟ್ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಪ್ರಕರಣ ಸಂಬಂಧ ಪೋರೆನ್ಸಿಕ್ ಲ್ಯಾಬ್​ ನಿಂದ ವರದಿಗಾಗಿ ಲೋಕಯುಕ್ತ ಅಧಿಕಾರಿಗಳು ಕಾಯುತ್ತಿದ್ದಾರೆ.

Related News

spot_img

Revenue Alerts

spot_img

News

spot_img