30.2 C
Bengaluru
Sunday, February 25, 2024

Anna Bhagya: ಅನ್ನಭಾಗ್ಯ ಹಣ ವರ್ಗಾವಣೆಯಾಗಿದೆಯೇ,ಪರಿಶೀಲಿಸುವುದು ಹೇಗೆ?

ಬೆಂಗಳೂರು, ಜುಲೈ 12:ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಗೆ ಕರ್ನಾಟಕದಲ್ಲಿ 128 ಮಿಲಿಯನ್ ರೇಷನ್ ಕಾರ್ಡ್ ದಾರರು ಅರ್ಹರಾಗಿದ್ದಾರೆ.ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸುತ್ತದೆ.ಹಣವನ್ನು ಬಿಪಿಎಲ್ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ,ಹಣವು ಖಾತೆಗೆ ವರ್ಗಾವಣೆಯಾಗಿದೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳು ಆಹಾರ ಇಲಾಖೆ ವೆಬ್‌ಸೈಟ್‌ ಲಿಂಕ್‌ ಬಿಡುಗಡೆ ಮಾಡಿದೆ.

ಅನ್ನಭಾಗ್ಯ ಯೋಜನೆಯಡಿ 5ಕೆ.ಜಿ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ಮುಂದಾಗಿದೆ. ಇದೀಗ ಕೆಲ ಜಿಲ್ಲೆಗಳ ಪಡಿತರ ಕಾರ್ಡ್ ದಾರರಿಗೆ ಹಣ ಜಮಾ ಆಗಿದೆ. ಈಗ ನಿಮ್ಮ ಅಕೌಂಟ್‌ಗೆ ಹಣ ಬಂದಿದೆಯೇ? ಎಂದು ತಿಳಿಯಲು ಈ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ,ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ  ,https://ahara.kar.nic.in/status1/status_of_dbt.aspx ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಕಾರ್ಡ್ ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು. ಇನ್ನು ಹಣ ಜಮೆಯಾದ ಕೂಡಲೇ ಬ್ಯಾಂಕ್‌ನಿಂದ ಸಂದೇಶ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಇಲ್ವಾ ಅಂತ ಗೊತ್ತಾಗೋದು ಹೇಗೆ,

– ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ (https://ahara.kar.nic.in/status1/status_of_dbt.aspx)

– ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಅನ್ನುವ ಲಿಂಕ್ ಕಾಣಿಸಲಿದೆ ಇದರ ಮೇಲೆ ಕ್ಲಿಕ್ ಮಾಡಿ.

– ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಗೋಚರಿಸುತ್ತದೆ, ಅದನ್ನು ಆಯ್ಕೆ ಮಾಡಿ.

– ಮುಂದಿನ ಪುಟದಲ್ಲಿ ನಿಗದಿತ ಕಾಲಂನಲ್ಲಿ ರೇಷನ್ ಕಾರ್ಡ್ ನ ನಂಬರ್ ಅಂದ್ರೆ ಆರ್ ಸಿ ನಂಬರ್‌ನ್ನು ಭರ್ತಿಮಾಡಬೇಕು.

– ನಿಮ್ಮ ರೇಷನ್ ಕಾರ್ಡ್ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಆರಿಸಿ.

– ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್‌ಗೆ ದುಡ್ಡು ಜಮೆ ಆಗಿದ್ಯಾ, ಒಂದು ವೇಳೆ ಖಾತೆಗೆ ಹಣ ಕ್ರೆಡಿಟ್ ಆಗದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಲಿದೆ.

Related News

spot_img

Revenue Alerts

spot_img

News

spot_img