ನವದೆಹಲಿ :ಸಾಲದ ಸುಳಿಯಲ್ಲಿ ಸಿಲುಕಿರುವ ರಿಲಯನ್ಸ್ ಕ್ಯಾಪಿಟಲ್ನ ಪರಿಹಾರ ಯೋಜನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ(Friday) ಅನುಮೋದನೆ ನೀಡಿದೆ.ರಿಸರ್ವ್ ಬ್ಯಾಂಕ್’ನ ಇತ್ತೀಚಿನ ಕ್ರಮವು ಹಿಂದೂಜಾ ಗ್ರೂಪ್ ಕಂಪನಿ(Hinduja group Company) ಇಂಡಸ್ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್ (IIHL) ರಿಲಯನ್ಸ್ ಕ್ಯಾಪಿಟಲ್’ನ್ನ ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ, ರಿಲಯನ್ಸ್ ಕ್ಯಾಪಿಟಲ್ ಷೇರುಗಳು ಬಿಎಸ್ಇ ಸೂಚ್ಯಂಕದಲ್ಲಿ ವಹಿವಾಟಿಗೆ ಸೀಮಿತವಾಗಿವೆ.ಅನಿಲ್ ಅಂಬಾನಿ ಅವರ ರಿಲಯನ್ಸ್ ಕ್ಯಾಪಿಟಲ್(Reilence capital) ನವೆಂಬರ್ 17, 2023ರಂದು ಆಡಳಿತಾಧಿಕಾರಿಯಿಂದ ಪತ್ರದ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರೀನ್ ಸಿಗ್ನಲ್ ಪಡೆದ ಬಗ್ಗೆ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ರಿಲಯನ್ಸ್ ಕ್ಯಾಪಿಟಲ್ ತನ್ನ ನಿರ್ವಾಹಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ(RBI) ನೋ ಅಬ್ಜೆಕ್ಷನ್ ಸರ್ಟಿಫಿಕೇಟ್’ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯ ಪರಿಹಾರ ಯೋಜನೆಯನ್ನು ನವೆಂಬರ್ 17 ರಂದು ಆರ್ಬಿಐ(RBI) ಅನುಮೋದಿಸಿದೆ,ಸಾಲದ ಸುಳಿಯಲ್ಲಿ ಸಿಲುಕಿರುವ ಕಂಪನಿಯನ್ನ ಖರೀದಿಸಲು ಹಿಂದೂಜಾ ಗ್ರೂಪ್ 9,650 ಕೋಟಿ ರೂ.ಗಳ ಪ್ರಸ್ತಾಪದೊಂದಿಗೆ ಅತಿ ಹೆಚ್ಚು ಬಿಡ್ ದಾರನಾಗಿತ್ತು.ದೇಶದ ಮೂರನೇ ಅತಿದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಯಾದ ರಿಲಯನ್ಸ್ ಕ್ಯಾಪಿಟಲ್’ನ ವ್ಯವಹಾರವನ್ನ ಸ್ವಾಧೀನಪಡಿಸಿಕೊಳ್ಳಲು ಹಿಂದೂಜಾ ಗ್ರೂಪ್ ಹೆಜ್ಜೆ ಇಟ್ಟಿದೆ.