ನವದೆಹಲಿ;ಮಹಿಳಾ ನೌಕರರ ಪಿಂಚಣಿ(Pension) ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವೈವಾಹಿಕ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯು ತನ್ನ ಪತಿಗೆ ಬದಲಾಗಿ ತನ್ನ ಮಗುವನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ(Nomini) ಮಾಡಬಹುದು ಎಂದು ಕೇಂದ್ರ ಹೇಳಿದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ರ ನಿಯಮ 50 ಸರ್ಕಾರಿ ನೌಕರ ಅಥವಾ ನಿವೃತ್ತ ಸರ್ಕಾರಿ ನೌಕರನ ಮರಣದ ನಂತರ ಕುಟುಂಬ ಪಿಂಚಣಿ ಮಂಜೂರು ಮಾಡಲು ಅನುಮತಿಸುತ್ತದೆ ಎಂದು ತಿಳಿಸುತ್ತದೆ.ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ನಿಯಮ-2021ರ ನಿಯಮ 50ರ ಪ್ರಕಾರ ಸರಕಾರಿ ಉದ್ಯೋಗಿ ಅಥವಾ ನಿವೃತ್ತ ಸರಕಾರಿ ಉದ್ಯೋಗಿ ಮರಣದ ನಂತರ ಕುಟುಂಬದವರಿಗೆ ಪಿಂಚಣಿ ಹಣ ತಲುಪುವಂತೆ ನಾಮನಿರ್ದೇಶನ(Nomini) ಮಾಡಲು ಅವಕಾಶವಿದೆ.ವೈವಾಹಿಕ ಭಿನ್ನಾಭಿಪ್ರಾಯವು ವಿಚ್ಛೇದನ ಪ್ರಕ್ರಿಯೆಗಳಿಗೆ ಕಾರಣವಾಗುವ ಸಂದರ್ಭ ಅಥವಾ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ, ವರದಕ್ಷಿಣೆ ನಿಷೇಧ ಅಥವಾ ಭಾರತೀಯ ದಂಡ ಸಂಹಿತೆ ಕಾಯ್ದೆಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳನ್ನು ತಿದ್ದುಪಡಿಯು ತಿಳಿಸಿದೆ. ಸರಕಾರಿ ಉದ್ಯೋಗಿ ಮರಣ ಹೊಂದಿದರೆ ಪಿಂಚಣಿಯನ್ನು ಪತಿ ಅಥವಾ ಪತ್ನಿಗೆ ಪ್ರಸ್ತುತ ನಿಯಮದಂತೆ ನೀಡಲಾಗುತ್ತದೆ.ಆದರೆ ಈ ನಿಯಮಕ್ಕೆ ಈಗ ಬದಲಾವಣೆ ತರಲಾಗಿದೆ. ಸರಕಾರಿ ಉದ್ಯೋಗಿಯು ತನ್ನ ನಿಧನಾನಂತರ ಕುಟುಂಬ ಪಿಂಚಣಿ ಹಣ ಪಡೆಯಲು ಕುಟುಂಬದ ಇತರೆ ಸದಸ್ಯರೂ ಅರ್ಹರು ಎಂದು ಬದಲಿಸಲಾಗಿದೆ.ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ವೈವಾಹಿಕ ಭಿನ್ನಾಭಿಪ್ರಾಯ ಇದ್ದಲ್ಲಿ ಸರಕಾರಿ ಉದ್ಯೋಗಿಯಾದ ಮಹಿಳೆ ಪತಿಯ ಬದಲು ಮಕ್ಕಳ ಹೆಸರನ್ನು ಕುಟುಂಬ ಮಾಡಬಹುದಾಗಿದೆ. ಪಿಂಚಣಿಗೆ ನಾಮನಿರ್ದೇಶನ ಮಾಡಬಹುದಾಗಿದೆ,ಇದಕ್ಕಾಗಿ ಸಂಬಂಧಪಟ್ಟ ಕಛೇರಿಯ ಮುಖ್ಯಸ್ಥರಿಗೆ ಲಿಖಿತ ಮನವಿ ಸಲ್ಲಿಸಬಹುದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.