24.4 C
Bengaluru
Sunday, September 8, 2024

ಸದಸ್ಯರ ಹೆಸರು ಸೇರ್ಪಡೆ & ತಿದ್ದುಪಡಿಗಾಗಿ ಪ್ರತಿ ತಿಂಗಳ 1ರಿಂದ 10ನೇ ದಿನಾಂಕದವರೆಗೆ ಅವಕಾಶ; K.H.ಮುನಿಯಪ್ಪ

ಬೆಂಗಳೂರು;ಹೊಸದಾಗಿ ಬಿಪಿಎಲ್‌(BPL), ಎಪಿಎಲ್‌(APL) ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.‌ ಮುನಿಯಪ್ಪ ಸಿಹಿಸುದ್ದಿ ನೀಡಿದ್ದು, ಆದ್ಯತೆ ಮೇರೆಗೆ ಪಡಿತರ ಚೀಟಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.ಪಡಿತರ ಚೀಟಿಯಲ್ಲಿ(Rationcard) ಸದಸ್ಯರ ಹೆಸರು ಸೇರ್ಪಡೆ & ತಿದ್ದುಪಡಿಗಾಗಿ ಇನ್ಮುಂದೆ ಪ್ರತಿ ತಿಂಗಳ 1ರಿಂದ 10ನೇ ದಿನಾಂಕದವರೆಗೆ ಅವಕಾಶ ನೀಡಲಾಗುವುದೆಂದು ಸಚಿವ K.H.ಮುನಿಯಪ್ಪ ಹೇಳಿದ್ದಾರೆ. ಬೆಳಗಾವಿ(Belgum) ಸದನದಲ್ಲಿ ಮಾತನಾಡಿ, ಮೈಸೂರು, ಮಂಗಳೂರು ಸೇರಿ ರಾಜ್ಯದಲ್ಲಿ ಪ್ರತಿ ತಿಂಗಳು 10ನೇ ದಿನಾಂಕದವರೆಗೆ ಪಡಿತರ ಕಾರ್ಡ್ ತಿದ್ದುಪಡಿಗೆ ತಾರೀಖು ವಿಸ್ತರಿಸಲಾಗಿದೆ. 6 ತಿಂಗಳಲ್ಲಿ 16,79,604 ಅರ್ಜಿಗಳನ್ನು ತಿದ್ದುಪಡಿ ಮಾಡಲಾಗಿದ್ದು, ಉಳಿದಂತೆ ಹೆಚ್ಚಿನ ಅರ್ಜಿ ಸ್ವೀಕರಿಸಲು ಆಗುತ್ತಿಲ್ಲ ಎಂದಿದ್ದಾರೆ.

Related News

spot_img

Revenue Alerts

spot_img

News

spot_img