26.3 C
Bengaluru
Friday, October 4, 2024

ಸರ್ಕಾರದ 6ನೇ ಗ್ಯಾರಂಟಿಯಾಗಿ ಫೆಬ್ರವರಿಯಲ್ಲಿ 36 ಸಾವಿರ ಮನೆಗಳ ಹಂಚಿಕೆ

#Allotment # 36 thousand #houses # February #6th guarantee #government

ಬೆಂಗಳೂರು;ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ(Karnataka Slum Development Board) ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಡಿ(Rajiv Gandhi Housing Corporation) ರಾಜ್ಯದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಪೈಕಿ 36 ಸಾವಿರ ಮನೆ ಮುಂದಿನ ತಿಂಗಳು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್(Zameer Ahmed Khan) ತಿಳಿಸಿದರು. ಸರ್ಕಾರದ ಆರನೇ ಗ್ಯಾರಂಟಿಯಾಗಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. 2.32 ಲಕ್ಷ ಮನೆಗಳನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿ ಹಂಚಿಕೆ ಮಾಡುವ ಗುರಿ ಹೊಂದಿದ್ದು ಮೊದಲ ಹಂತದಲ್ಲಿ 36 ಸಾವಿರ ಮನೆ ಫೆಬ್ರವರಿ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ 2013 ರಿಂದ ಇದುವರೆಗೆ 2.32 ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು ಬಡ ಕುಟುಂಬಗಳು ಫಲಾನುಭವಿಗಳ ಪಾಲಿನ ವಂತಿಗೆ 8,200 ಕೋಟಿ ರೂ.ಸರ್ಕಾರವೇ ಭರಿಸಲಿದ್ದು, ಮೊದಲ ಕಂತು 500 ಕೋಟಿ ರೂ. ಬಿಡುಗಡೆಯಾಗಿದ್ದು ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.ಸ್ಲಂ ಬೋರ್ಡ್(Slumboard) ಗೆ 7400 ಕೋಟಿ ರೂ., ರಾಜೀವ್ ಗಾಂಧಿ ವಸತಿ ನಿಗಮಕ್ಕೆ 1800 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಫೆಬ್ರವರಿ 24ರಂದು 36,000 ಮನೆಗಳ ಹಂಚಿಕೆ ಮಾಡಲಿದ್ದು, ಇನ್ನೊಂದು ವರ್ಷದಲ್ಲಿ ಎಲ್ಲಾ ಮನೆಗಳ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img