28.2 C
Bengaluru
Friday, September 20, 2024

ಕರೆಂಟ್ ಕಳವು ಆರೋಪ:ಸಿಎಂ ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ , 68 ಸಾವಿರ ರೂ. ದಂಡ ಪಾವತಿಸಲು ಸೂಚನೆ

ಬೆಂಗಳೂರು;ದೀಪಾವಳಿಗೆ ಮನೆ ಅಲಂಕಾರಕ್ಕಾಗಿ ವಿದ್ಯುತ್(Power) ಅನ್ನು ಅಕ್ರಮವಾಗಿ ಪಡೆದಿರುವ ಆರೋಪದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿಗೆ 7 ದಿನದಲ್ಲಿ 68 ಸಾವಿರ ರೂಪಾಯಿ ದಂಡ(Fine) ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು, ಅಕ್ರಮವಾಗಿ (Illegally)ವಿದ್ಯುತ್ ಪಡೆದಿರುವುದನ್ನು ಪರಿಶೀಲಿಸಿ ನೋಟಿಸ್ ನೀಡಿದ್ದಾರೆ. ಅಲ್ಲದೆ, ಕರ್ನಾಟಕ ವಿದ್ಯುತ್ ಕಾಯ್ದೆಯಡಿ(Karnataka Electricity Act) ಜಯನಗರದ ಬೆಸ್ಕಾಂ ವಿಜಿಲೆನ್ಸ್(Vijilence) ಕಚೇರಿಯಲ್ಲಿ FIR ದಾಖಲಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ HDK, ಒಂದೆರಡು ದಿನದಲ್ಲಿ ದಂಡ ಪಾವತಿಸುವುದಾಗಿ ತಿಳಿಸಿದ್ದಾರೆ.ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಿಸಿದ ಬೆಸ್ಕಾಂ ಅಧಿಕಾರಿಗಳು ಏಳು ದಿನಗಳೊಳಗೆ 68,000 ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ದಂಡ ಪಾವತಿಸುವುದಾಗಿ ಮಾಜಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.ಅದರಂತೆ ಇದೀಗ ಬೆಸ್ಕಾಂ(Bescom) ಜಾಗೃತ ದಳದ ಡಿವೈಎಸ್ ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆಯ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ಲೆಕ್ಕ ಮಾಡಲಾಗಿದ್ದು, ಎರಡು ದಿನ ಅಕ್ರಮವಾಗಿ ಬಳಕೆಯಾದ ವಿದ್ಯುತ್ ಗೆ ದಂಡ ವಿಧಿಸಲಾಗಿದೆ.

Related News

spot_img

Revenue Alerts

spot_img

News

spot_img