ಅಲಹಾಬಾದ್: ವಾರಣಾಸಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಎಐಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.ಜ್ಞಾನವಾಪಿಯ ವ್ಯಾಸ್ ಜಿ ನೆಲಮಾಳಿಗೆಯಲ್ಲಿ ನಡೆದ ಪೂಜಾ ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಪರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯದ ಈ ತೀರ್ಪಿನ ನಂತರ, ಜ್ಞಾನವಾಪಿ ಮಸೀದಿಯ ವ್ಯಾಸ್ ಜಿ ನೆಲಮಾಳಿಗೆಯಲ್ಲಿ ಪೂಜೆ ಮುಂದುವರಿಯುತ್ತದೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ, ಮಸೀದಿ ಕೆಳಮಹಡಿಯಲ್ಲಿ ಪೂಜೆ ನಡೆಸುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿತ್ತು.ಪ್ರತಿದಿನ, 10,000 ಕ್ಕೂ ಹೆಚ್ಚು ಜನರು ಜ್ಞಾನವಾಪಿ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಮತ್ತು ದೂರದಿಂದ ತಮ್ಮ ದೇವರನ್ನು ನೋಡುತ್ತಾರೆ ಎಂದು ವ್ಯಾಸ್ ಹೇಳಿದ್ದಾರೆ. ನ್ಯಾಯಾಲಯದ ಆದೇಶದ ನಂತರ ಈ ಸಂಖ್ಯೆ ಹೆಚ್ಚುತ್ತಿದೆ. ಈ ಸ್ಥಳದಲ್ಲಿ ದೇವಾಲಯವನ್ನು ನೋಡಲು ಜನರು ತುಂಬಾ ಕಾತರದಿಂದ ಕಾಯುತ್ತಿದ್ದಾರೆ.ಈಗಾಗಲೇ 2 ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠ, ತೀರ್ಪನ್ನು ಇಂದಿಗೆ ಮುಂದೂಡಿತ್ತು. ಈ ಹಿಂದೆ ಅಲ್ಲಿ ಹಿಂದೂ ದೇಗುಲವಿತ್ತು ಎಂದು ASI ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿತ್ತು.ಜನವರಿ 31 ರಂದು ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಾದ ವ್ಯಾಸ್ ತೆಖಾನಾ’ದಲ್ಲಿ ಹಿಂದೂ ಕಡೆಯವರು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಾಮನಿರ್ದೇಶನ ಮಾಡಿದ ಪೂಜೆ ಮತ್ತು ಪೂಜಾರಿ ಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿರ್ದೇಶನ ನೀಡಿತ್ತು.