21 C
Bengaluru
Tuesday, December 3, 2024

ಮನೆಯಲ್ಲಿ ಹೋಮ್ ಥಿಯೇಟರ್ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು

ಬೆಂಗಳೂರು, ಏ. 06 : ಹೋಮ್ ಥಿಯೇಟರ್ ಎಂದರೆ, 30/40 ನಿವೇಶನದಲ್ಲಿ ಕಟ್ಟಿಕೊಳ್ಳುವುದಕ್ಕೆ ಆಗುವುದಿಲ್ಲ. ಎರಡು ಮೂರು ಫ್ಲೋರ್ ಕಟ್ಟಿದಾಗ ಆಗ ಮೇಲಿನ ಫ್ಲೋರ್ ನಲ್ಲಿ ಹೋಮ್ ಥಿಯೇಟರ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ. ಹೋಮ್ ಮನರಂಜನೆ ಎಂದು ಬಂದಾಗ, ಆಗ್ನೇಯ ಕೋಣೆಯನಲ್ಲಿ ಇಟ್ಟುಕೊಳ್ಳಬಹುದು. ಇದು ಶುಕ್ರದ ದಿಕ್ಕಾಗಿರುವುದರಿಂದ ಇಲ್ಲೇ ಸೂಕ್ತ. ಇನ್ನು ಸ್ಕ್ರೀನ್ ಅನ್ನು ಪೂರ್ವಾಭಿ ಮುಖವಾಗಿ ಇಲ್ಲವೇ ಉತ್ತರಾಭಿಮುಖವಾಗಿ ಇಟ್ಟುಕೊಳ್ಳಬೇಕು. ಪೂರ್ವದಲ್ಲಿ ಸ್ಕ್ರೀನ್ ಇದ್ದರೆ, ಪಶ್ಚಿಮದ ಕಡೆಗೆ ಆಸನಗಳನ್ನು ಮಾಡಿಕೊಳ್ಳಬಹುದು.

ಹಿಂದಿನ ಸೀಟ್ ಗಳನ್ನು ಎತ್ತರಿಸಿಕೊಳ್ಳಲು ಈ ದಿಕ್ಕಿನಲ್ಲಿ ಸೂಕ್ತವಾಗಿರುತ್ತದೆ. ಅಕಸ್ಮಾತ್ ಉತ್ತರದ ಕಡೆಗೆ ಸ್ಕ್ರೀನ್ ಇದ್ದರೆ, ದಕ್ಷಿಣದ ಕಡೆಗೆ ಸೀಟ್ ಗಳನ್ನು ಎತ್ತರಿಸುತ್ತಾ ಹೋಗಬಹುದು. ಆಗ ವೈಟ್ ಫಾರ್ಮುಲ ಕೂಡ ಇಲ್ಲಿ ಅಳವಡಿಸಿದಂತೆ ಆಗುತ್ತದೆ. ಇನ್ನು ಥಿಯೇಟರ್ ರೂಮ್ ನಲ್ಲಿ ಲೈಟ್ ಗಳು, ಸ್ಪೀಕರ್ಸ್ ಗಳನ್ನು ಹಾಕಿಕೊಳ್ಳಬಹುದು. ಇವೆಲ್ಲವನ್ನು ಆಗ್ನೇಯದಲ್ಲಿ ಹಾಕಿಕೊಳ್ಳುವುದು ಉತ್ತಮ. ಎಲೆಕ್ಟ್ರಿಕ್ ಅಪ್ಲಯನ್ಸಸ್ ಅನ್ನು ಆದಷ್ಟು ಆಗ್ನೇಯ ಹಾಗೂ ವಾಯುವ್ಯದಲ್ಲಿ ಇಟ್ಟುಕೊಳ್ಳುವುದು ಶುಭ.

ಇನ್ನು ಲೈಟಿಂಗ್ ಗಳು ಎಂದು ಬಂದಾಗ, ಸಾಕಷ್ಟು ಬಗೆಯ ಲೈಟ್ಸ್ ಗಳು ಬಂದಿವೆ. ಥಿಯೇಟರ್ ಗೆ ಸೂಕ್ತವಾಗುವಂತಹ ಲೈಟ್ಸ್ ಗಳನ್ನು ಅಳವಡಿಸಿಕೊಳ್ಳಬಹುದು. ಇನ್ನು ಬಹಳ ಮುಖ್ಯವಾಗಿ ಹೋಮ್ ಥಿಯೇಟರ್ ಇರಬೇಕಾದ ದಿಕ್ಕು, ಸ್ಕ್ರೀನ್ ಮತ್ತು ಸಿಟ್ಟಿಂಗ್ ಅರೇಂಜ್ ಮೆಂಟ್ಸ್ ಗಳ ಬಗ್ಗೆ ವಾಸ್ತುವನ್ನು ನೋಡಿದರೆ ಆಯ್ತು. ಅದು ಹೊರತು ಪಡಿಸಿ ಮಿಕ್ಕವನ್ನು ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ಈಗಂತೂ ಯಾರೇ ಮನೆ ಕಟ್ಟಿಸಿಕೊಳ್ಳಲಿ ಆದಷ್ಟು ಹೋಮ್ ಥಿಯೇಟರ್ ಇರಲಿ ಎಂದು ಬಯಸುತ್ತಾರೆ. ವೀಕೆಂಡ್ ಗಳಲ್ಲಿ ಹೋಮ್ ಥಿಯೇಟರ್ ನಲ್ಲಿ ಮನೆಯವರೆಲ್ಲಾ ಕುಳಿತು ಸಿನಿಮಾವನ್ನು ನೋಡುವುದಕ್ಕೆ ಇಷ್ಟಪಡುತ್ತಾರೆ. ಹಾಗಾಗಿ ಮನೆ ಕಟ್ಟಿಸುವಾಗ ಹೋಮ್ ಥಿಯೇಟರ್ ಗೆಂದು ಸ್ಥಳ ನಿಗಧಿ ಮಾಡುತ್ತಾರೆ.

Related News

spot_img

Revenue Alerts

spot_img

News

spot_img