ಬೆಂಗಳೂರು, ಮಾ. 25 : ಕಾರ್ ಪಾರ್ಕಿಂಗ್ ಯುಟಿಲಿಟಿ ಕೂಡ ಮನೆ ಕಟ್ಟುವಾಗಲೇ ನಿರ್ಮಾಣ ಮಾಡಬೇಕಾಗುತ್ತದೆ. ಮನೆಗೆ ವಾಸ್ತುವನ್ನು ನೋಡಿದಂತೆಯೇ ಪಾರ್ಕಿಂಗ್ ಸ್ಥಳಕ್ಕೂ ವಾಸ್ತು ನೋಡಬೇಕಾಗುತ್ತದೆ. ಮನೆ ಕಟ್ಟುವ ಮುನ್ನವೇ ವಾಸ್ತು ತಜ್ಞರನ್ನು ನೋಡಿ ಪಾರ್ಕಿಂಗ್ ಸ್ಥಳವನ್ನು ಎಲ್ಲಿ ಕಟ್ಟಬೇಕು ಎಂದು ತಿಳಿಯಬೇಕಾಗುತ್ತದೆ. ವಾಯುವ್ಯದಲ್ಲಿ ಹಾಗೂ ಆಗ್ನೇಯದಲ್ಲಿ ಕಟ್ಟುತ್ತಾರೆ. ಆದರೆ, ಪಾರ್ಕಿಂಗ್ ಜಾಗವನ್ನು ಕಟ್ಟುವಾಗ ಕಾಂಪೌಂಡ್ ಗೋಡೆಗೆ ಅಟ್ಯಾಚ್ಡ್ ಆಗಿ ಕಟ್ಟಿರುತ್ತಾರೆ. ಇದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಸರಿಯಾದ ಸ್ಥಳದಲ್ಲೇ ಇದ್ದರೂ ಕೂಡ ನಿರ್ಮಾಣ ಮಾಡುವಾಗ ಆಗುವ ತಪ್ಪಿನಿಂದ ಹೀಗಾಗುತ್ತದೆ.
ವಾಯುವ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿ ಕಾರು ಪಾರ್ಕಿಂಗ್ ಅನ್ನು ಕಟ್ಟುವುದು ಸರಿ. ಆದರೆ, ಮೂಲೆ ಮುಚ್ಚುವಂತೆ ಕಟ್ಟುವುದು ಸಮಸ್ಯೆ ಆಗುತ್ತದೆ. ಈ ಎರಡು ದಿಕ್ಕಿನಲ್ಲಿ ನಮಗೆ ಎಲ್ಲಿ ಸೂಕ್ತವಾಗುತ್ತದೆಯೋ ಅಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು. ಈ ಹಿಂದೆ ಮನೆಯನ್ನು ಕಟ್ಟುವಾಗ ಪಾರ್ಕಿಂಗ್ ಗೆ ಎಂದು ಒಂದು ಕಾರನ್ನು ನಿಲ್ಲಿಸಿಕೊಳ್ಳಲು ಈ ಎಡರು ದಿಕ್ಕಿನಲ್ಲಿ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಈಗ ಮನೆಯಲ್ಲಿ ಎರಡು ಮೂರು ಕಾರುಗಳನ್ನು ಇರುವುದರಿಂದ ಪಾರ್ಕಿಂಗ್ ಗೆ ದೊಡ್ಡ ಸ್ಥಳ ಬೇಕಾಗುತ್ತದೆ.
ಈಗ ಮಾಡ್ರನ್ ಯುಗದಲ್ಲಿ ವಾಯುವ್ಯ ಹಾಗೂ ಆಗ್ನೇಯ ದಿಕ್ಕಿನಲ್ಲೇ ಸ್ವಲ್ಪ ಹೆಚ್ಚಿಗೆ ಜಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದಾಗ ಈಶಾನ್ಯ ಹಾಗೂ ನೈರುತ್ಯ ಜಾಗವೂ ಕೂಡ ಸೇರಿಕೊಳ್ಳುತ್ತದೆ. ಇದರಿಂದಲೂ ಸಮಸ್ಯೆ ಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಕಾರ್ ಗ್ಯಾರೇಜ್ ನನ್ನು ಕಟ್ಟುವಾಗ ವಾಸ್ತುವಿನಲ್ಲಿ ಹೇಳಿದಂತೆಯೇ ಕಟ್ಟಬೇಕು. ರಸ್ತೆಯಿಂದ ನೇರವಾಗಿ ಗ್ಯಾರೇಜ್ ಗೆ ಕಾರ್ ಪಾರ್ಕ್ ಮಾಡಬೇಕು ಎಂದು ಗೇಟ್ ಅನ್ನು ಕೂಡ ತಪ್ಪಾಗಿ ನಿರ್ಮಾಣ ಮಾಡಿರಲಾಗುತ್ತದೆ. ಆದರೆ, ಇದೆಲ್ಲವೂ ಸಮಸ್ಯೆಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ಪಾರ್ಕ್ ಪಾರ್ಕಿಂಗ್ ಗ್ಯಾರೇಜ್ ಅನ್ನು ವಾಯುವ್ಯದಲ್ಲೋ ಇಲ್ಲವೇ ದಕ್ಷಿಣ ಆಗ್ನೇಯದಲ್ಲೋ ನಿರ್ಮಾಣ ಮಾಡಲಾಗುತ್ತದೆ.