ಬೆಂಗಳೂರು, ಏ. 03 : ಟೆರೆಸ್ ಗಾರ್ಡನ್ ತುಂಬಾ ಒಳ್ಳೆಯ ಯೋಚನೆ. ಜಪಾನ್ ಹಾಗೂ ಚೀನಾಗಳ ಕಡೆಗಳಲ್ಲೆಲ್ಲಾ ಟೆರೆಸ್ ಮೇಲೆ ಬೆಳೆಗಳನ್ನು ಬೆಳೆಯುತ್ತಾರೆ. ಹೆಚ್ಚಾಗಿ ಜಪಾನ್ ನಲ್ಲಿ ಈ ಕಾನ್ಸೆಪ್ಟ್ ಇದೆ. ಜಪಾನ್ ನಲ್ಲಿ ಎಲ್ಲರ ಮನೆಯ ಮೇಲೂ ಗಾರ್ಡನ್ ಏರಿಯಾವನ್ನು ನಿರ್ಮಿಸಿದ್ದು, ಅಲ್ಲೇ ತರಕಾರಿ, ಹಣ್ಣುಗಳನ್ನು ಬೆಳೆದುಕೊಳ್ಳುತ್ತಾರೆ. ಇನ್ನು ಹಣ್ಣುಗಳನ್ನು ಬೆಳೆಯುವುದಕ್ಕಿಂತಲೂ, ಮನೆಯ ಪೂಜೆಗೆ ಬೇಕಾದಂತಹ ಹೂಗಳು ಮತ್ತು ಸಣ್ಣ-ಪುಟ್ಟ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಇನ್ನು ಈ ಗಿಡಗಳಿಂದ ಒಳ್ಳೆಯ ಗಾಳಿ ಬರುತ್ತದೆ. ನಾವೇ ಬೆಳೆದ ತರಾಕಾರಿಯನ್ನು ತಿನ್ನುವುದು ಕೂಡ ಒಳ್ಳೆಯದು.
ಹೀಗಿರುವಾಗ ಟೆರಸ್ ನಲ್ಲಿ ಗಾರ್ಡನ್ ಮಾಡುವುದಕ್ಕೆ ಮೊದಲನೇಯದಾಗಿ ಪೂರ್ವಕ್ಕಿಂತ ಪಶ್ಚಿಮದಲ್ಲಿ ಹಾಗೂ ಉತ್ತರಕ್ಕಿಂತ ದಕ್ಷಿಣದಲ್ಲಿ ಹೆಚ್ಚು ತೂಕ ಇರಬೇಕು. ಇದರ ಜೊತೆಗೆ ಮಧ್ಯ ಭಾಗದಲ್ಲಿ ಭಾರ ಇಡಬಾರದು. ಇದನ್ನೆಲ್ಲಾ ನೋಡಿಕೊಳ್ಳಬೇಕು. ಇನ್ನು ಸಣ್ಣ ಗಿಡಗಳನ್ನು ಪೂರ್ವದಲ್ಲಿ ಹಾಕಿಕೊಳ್ಳಬಹುದು. ಇನ್ನು ಎತ್ತರಕ್ಕೆ ಬೆಳೆಯುವಂತಹ ಗಿಡಗಳನ್ನು ಪಶ್ಚಿಮ ಹಾಗೂ ದಕ್ಷಿಣದಲ್ಲಿ ಹಾಕಿಕೊಳ್ಳಬಹುದಾಗಿದೆ. ಇನ್ನು ದೊಡ್ಡ ಮರಗಳನ್ನು ಟೆರೆಸ್ ಮೇಲೆ ಹಾಕಿಕೊಳ್ಳಲು ಸಾಧ್ಯವಿಲ್ಲ.
ಇನ್ನು ಮನೆಯಲ್ಲಿ ಬದನೆ ಕಾಯಿ ಗಿಡಿ, ಟೊಮೆಟೋ ಎಲ್ಲವನ್ನು ಬೆಳೆದುಕೊಳ್ಳಲು ಸ್ಟೆಪ್ಸ್ ಗಳನ್ನು ಇಟ್ಟುಕೊಂಡು ಬೆಲೆಸಬಹುದು. ನೀರು ಪಶ್ಚಿಮದಿಂದ ಪೂರ್ವಕ್ಕೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ ಹರಿಯುವಂತೆ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ನೀರು ಸೋರಿಕೆಯಾಗಿ, ರೂಫ್ ಸದಾ ತೇವವಾಗಿರುವಂತೆ ಮಾಡದೇ ಇರುವುದು ಬಹಳ ಮುಖ್ಯವಾಗುತ್ತದೆ. ಇಲ್ಲದೇ ಹೋದರೆ, ಇದರಿಂದಲೂ ಕುಟುಂಬದಲ್ಲಿ ತಿಳಿಯದಂತಹ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇರುತ್ತದೆ.
ಟೆರೆಸ್ ಮೇಲೆ ಓವರ್ ಹೆಡೆಡ್ ಟ್ಯಾಂಕ್, ಸೋಲಾರ್, ಬಟ್ಟೆ ಒಣಗಿಸಲು ಜಾಗ, ಇವೆಲ್ಲವನ್ನೂ ನೋಡಿಕೊಂಡಿ ಗಾರ್ಡನ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಹೂವಿನ ಗಿಡಗಳು, ಸಣ್ಣ-ಪುಟ್ಟ ತರಕಾರಿ, ಸೊಪ್ಪುಗಳನ್ನು ಬೆಳೆಯಬಹುದು. ವಾಸ್ತು ಪ್ರಕಾರ ತೂಕ ಹೆಚ್ಚಿಡುವ ಸ್ಥಳ, ಬ್ರಹ್ಮಸ್ಥಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಹರಿಸಿ, ಬಳಿಕ ಗಾರ್ಡನ್ ಅನ್ನು ನಿರ್ಮಿಸಿಕೊಳ್ಳಬಹುದು. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.