ಬೆಂಗಳೂರು, ಫೆ. 02 : ಇಡೀ ಮನೆಯನ್ನು ವಾಸ್ತು ಪ್ರಕಾರ ಕಟ್ಟಲಾಗುತ್ತದೆ. ಆದರೂ ಕೆಲವೊಮ್ಮೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲೆ ಏನಾಗಿದೆ ಎಂಬುದನ್ನು ತಿಳಿಯುವುದೇ ಕಷ್ಟ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಸಾಲದು. ಅದರ ಜೊತೆಗೆ ಮನೆಯ ಯಾವ ಭಾಗದಲ್ಲಿ ಏನಿರಬೇಖು ಎಂಬುದನ್ನೂ ತಿಳಿದಿರಬೇಕು. ಇನ್ನು ಮನೆಯ ಬೆಡ್ ರೂಮ್ ನಲ್ಲಿ ವಾಸ್ತು ಕರೆಕ್ಟ್ ಆಗಿದ್ದರೆ, ನಿದ್ದೆಯೂ ಅರಾಮಾಗಿರುತ್ತದೆ. ಜೀಬನವೂ ಉತ್ತಮವಾಗಿರುತ್ತದೆ. ಹಾಗಾದರೆ ಬೆಡ್ ರೂಮ್ ನ ವಾಸ್ತು ಹೇಗಿರಬೇಕು..? ಬೆಡ್ ರೂಮ್ ನಲ್ಲಿ ಏನಿರಬೇಕು..? ಏನಿರಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಯೋಣ ಬನ್ನಿ.
ನಿಮ್ಮ ಮನೆಯಲ್ಲಿ ಬಾಕ್ಸ್ ಟೈಪ್ ಕಾರ್ಟ್ ಇದ್ಯಾ..? ಹಾಗಾದರೆ ಮೊದಲು ಅದನ್ನ ಬದಲಾಯಿಸಿ. ಇದರಿಂದ ಸಮಸ್ಯೆಗಳು ಉದ್ಭವಿಸುವುದು ಗ್ಯಾರೆಂಟಿ. ಬಾಕ್ಸ್ ಟೈಪ್ ಕಾರ್ಟ್ ಇದ್ದಾಗ ಅದರಲ್ಲಿ ಬೇಡದ ವಸ್ತುಗಳನ್ನು ಇಡುತ್ತಾರೆ. ಈ ಬೇಡದ ವಸ್ತುಗಳಿಂದ ನಕರಾತ್ಮಕ ಶಕ್ತಿ ಉಂಟಾಗುತ್ತದೆ. ಅದರ ಮೇಲೆಯೇ ನಿತ್ಯ ಮಲಗುವುದರಿಂದ ಮನೆಯಲ್ಲಿ ಸಂಬಂಧಗಳು ಕೆಡುತ್ತವೆ. ಈ ಬಗ್ಗೆ ವಾಸ್ತುವಿನಲ್ಲಿ ಹೇಳಲಾಗಿದೆ. ಗಂಡ ಹೆಂಡತಿಯ ನಡುವೆ ಹೊಂದಾಣಿಕೆಯೇ ಇರುವುದಿಲ್ಲ. ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಮನೆಯಲ್ಲಿ ಬಾಕ್ಸ್ ಟೈಪ್ ಕಾರ್ಟ್ ಗಳನ್ನು ಬಳಸುವುದು ಸೂಕ್ತವಲ್ಲ.
ಇನ್ನು ಬೆಡ್ ರೂಮ್ ನಲ್ಲಿ ದೇವರ ಫೋಟೋಗಳನ್ನು ತಂದು ಹಾಕಿಕೊಳ್ಳುವುದು ಸರಿಯಲ್ಲ. ಹಾಗೆಯೇ ಮನೆಯಲ್ಲಿ ಸತ್ತವರ ಫೋಟೋಗಳನ್ನು ಕೂಡ ಬೆಡ್ ರೂಮ್ ನಲ್ಲಿ ನೇತು ಹಾಕಬಾರದು. ಬೆಡ್ ರೂಮ್ ನಲ್ಲಿ ಗಂಡ-ಹೆಂಡತಿ ಇಬ್ಬರೂ ಸಂತಸದಿಂದ ಇರಬೇಕು ಎಂದರೆ, ಬೆಡ್ ರೂಮ್ ನಲ್ಲಿ ಜೋಡಿ ಹಕ್ಕಿ, ನಗುತ್ತಿರುವ ಮಗುವಿನ ಫೋಟೋವನ್ನು ಇಡಬೇಕು. ಇದರಿಂದ ಸಂಬಂಧದಲ್ಲಿ ಸಂತೋಷ ತುಂಬಿರುತ್ತದೆ. ಹೊಂದಾಣಿಕೆ ಮೂಡತ್ತದೆ. ಇಂತಹ ಪೋಸ್ಟರ್ ಅಥವಾ ಫೊಟೋಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಾಕಿಕೊಳ್ಳುವುದು ಒಳ್ಳೆಯದು.
ಇನ್ನೊಂದು ಏನೆಂದರೆ, ಸಾಮಾನ್ಯವಾಗಿ ಮಾಡುವ ತಪ್ಪುಗಳೆಂದರೆ, ಉಳಿದ ಕೆಲಸಗಳನ್ನು ಬೆಡ್ ರೂಮ್ ನಲ್ಲಿರುವ ಟೇಬಲ್ ಮೇಲೆ ಇಟ್ಟುಕೊಂಡು ನಿದ್ದೆ ಬರುವವರೆಗೂ ಕೆಲಸ ಮಾಡಿ ಮಲಗುವುದು ಕೆಟ್ಟ ಅಭ್ಯಾಸ. ಇದು ಯಾವುದಾದರೂ ಮುಗಿಯದೆ ಉಳಿದ ಕೆಲಸವನ್ನು ಹಾಗೆ ಇಡ ಕೂಡದು. ಬುಕ್, ಲ್ಯಾಪ್ ಟಾಪ್ ಯಾವುದೇ ಆಗಲಿ, ಹಾಗೆ ಪೆಂಡಿಂಗ್ ಇಡಬಾರದು. ಇನ್ನು ಡ್ರೆಸ್ಸಿಂಗ್ ಟೇಬಲ್ ಅನ್ನು ಬೆಡ್ ರೂಮ್ ನಲ್ಲಿ ಇಡುವುದನ್ನು ಯೋಚಿಸಬೇಕು. ಯಾಕೆಂದರೆ ಅದರ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದರೆ, ಕಾರ್ಟ್ ಎದುರುಗಡೆ ಇಡಬಾರದು. ಇನ್ನು ವಾಸ್ತು ಪ್ರಕಾರ ಆದಷ್ಟು ನೈರುತ್ಯದ ಕಡೆಗೆ ಹಾಕಿ, ತಲೆಯನ್ನು ದಕ್ಷಿಣಕ್ಕೆ ಹಾಕುವುದು ಉತ್ತಮ.