#Accident insurance # available # ATM #card holders
ಬೆಂಗಳೂರು;ಬ್ಯಾಂಕ್ ಖಾತೆ ಹೊಂದಿರುವ ಎಲ್ಲರ ಬಳಿ ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಾಗೆಯೇ ಎಟಿಎಂ ಕಾರ್ಡ್ ಪ್ರಯೋಜನದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದರೆ ಹಣಕ್ಕಾಗಿ ಈ ಹಿಂದಿನಂತೆ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಆನ್‌ಲೈನ್ ಶಾಪಿಂಗ್ ಮತ್ತು ನಗದು ಹಿಂಪಡೆಯುವಿಕೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಜೀವ ವಿಮಾ ಪ್ರಯೋಜನಗಳು ಸೇರಿವೆ. ಅನೇಕ ವಿಧದ ಡೆಬಿಟ್ ಕಾರ್ಡ್‌ಗಳಲ್ಲಿ ಉಚಿತ ವಿಮೆ ಲಭ್ಯವಿದೆ.ಎಟಿಎಂ (Debit) ಕಾರ್ಡ್ ಹೊಂದಿರುವ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳ ಗ್ರಾಹಕರಿಗೆ ಅಪಘಾತ ವಿಮೆ ಲಭ್ಯವಿದೆ. ನೀವು ಎಸ್‌ಬಿಐ(SBI) ಗೋಲ್ಡ್ (Mastercard/ Visa) ಕಾರ್ಡ್ ಹೊಂದಿದ್ದರೆ 2 ಲಕ್ಷ ರೂ. ಮತ್ತು ವೀಸಾ ಸಿಗ್ನಚರ್ ಕಾರ್ಡ್‌ನಲ್ಲಿ 10 ಲಕ್ಷ ರೂ.ವರೆಗೆ ವಿಮೆ ಪಡೆಯಬಹುದು. ಎಚ್‌ಡಿಎಫ್‌ಸಿ(HDFC) ಪ್ಲಾಟಿನಂ ಡೆಬಿಟ್ ಕಾರ್ಡ್‌ನಲ್ಲಿ 5 ಲಕ್ಷ ರೂ. ಮತ್ತು ಐಸಿಐಸಿಐ (ICICI)ಟೈಟಾನಿಯಂ ಕಾರ್ಡ್‌ನಲ್ಲಿ 10 ಲಕ್ಷ ರೂ. ವರೆಗೆ ವಿಮೆ ಪಡೆಯಬಹುದಾಗಿದ್ದು, ವ್ಯಕ್ತಿ ಮೃತಪಟ್ಟ 3 ತಿಂಗಳೊಳಗೆ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿದರೆ ವಿಮೆ ಹಣ ಸಿಗುತ್ತದೆ.ಡೆಬಿಟ್ ಕಾರ್ಡ್ ಹೊಂದಿರುವವರು ವಿಮಾ ಪ್ರಯೋಜನವನ್ನು ಪಡೆಯಲು ಅದನ್ನು ಬಳಸಬೇಕು. ಅಂದರೆ ಅಪಘಾತದ ಮೊದಲು 90 ದಿನಗಳೊಳಗೆ ಒಮ್ಮೆಯಾದರೂ ಕಾರ್ಡ್ ಅನ್ನು ಬಳಸಬೇಕು. ಆಗ ಮಾತ್ರ ಕುಟುಂಬದ ಸದಸ್ಯರಿಗೆ ಅಪಘಾತ ವಿಮೆ(Accident insurance) ಸಿಗುತ್ತದೆ.ಎಟಿಎಂ ಕಾರ್ಡ್(ATM card) ಹೊಂದಿರುವ ವ್ಯಕ್ತಿ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ವಿಮೆ ಕ್ಲೈಮ್ ಮಾಡಲು ಸಾಧ್ಯವಿದೆ. ಇದಕ್ಕಾಗಿ ನೀವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗೆಯೇ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ವೈದ್ಯಕೀಯ ವರದಿಗಳನ್ನು(reports) ಸಂಗ್ರಹಿಸಬೇಕು. ಒಂದು ವೇಳೆ ವ್ಯಕ್ತಿ ಸಾವನ್ನಪ್ಪಿದರೆ ಆತನ ಸಂಬಂಧಿಕರ ಬಳಿ ಪೋಸ್ಟ್ ಮಾರ್ಟ್ಂ ವರದಿ, ಪೊಲೀಸ್ ವರದಿ, ಮರಣ ಪ್ರಮಾಣಪತ್ರ ಹಾಗೂ ಮೃತ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಕಳೆದ 60 ದಿನಗಳಲ್ಲಿ ಕಾರ್ಡ್ ಹೊಂದಿರೋರು ಎಟಿಎಂ ಕಾರ್ಡ್ ಬಳಸಿ ನಡೆಸಿದ ಕೆಲವು ವಹಿವಾಟುಗಳ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡಬೇಕು.