ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು (Hanur) ಕ್ಷೇತ್ರ ಶಿಕ್ಷಣಾಧಿಕಾರಿ(BEO) ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರು(Lokayukta) ಬೀಸಿದ ಬಲೆಗೆ ಬಿದ್ದಿದ್ದಾರೆ.ನಿವೃತ್ತ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ ಮಂಜೂರು ಮಾಡಲು 15 ಸಾವಿರ ಲಂಚ(Bribe) ಪಡೆಯುತ್ತಿದ್ದ ಸ ಹನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್‌ಪಿ(CRP) ಮುನಿರಾಜು ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ.ತೋಮಿಯಾರ್ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ 139 ದಿನದ ಮೂರು ಲಕ್ಷ ಹಣವನ್ನು ಸರ್ಕಾರದಿಂದ ಮಂಜೂರಾಗಬೇಕಿತ್ತು ಈ ಹಣವನ್ನು ಮಂಜೂರು ಮಾಡಿಕೊಡಲು ಬಿಇಓ ಶಿವರಾಜ್ ಸಿ.ಆರ್ ಪಿ ಮುನಿರಾಜ್ ಮೂಲಕ 15,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ನಿವೃತ್ತ ಶಿಕ್ಷಕರಾದ ವಿಜಯ್ ಕುಮಾರ್ ಲಂಚ ಕೊಡಲು ಒಪ್ಪದೇ ಭ್ರಷ್ಟಾಚಾರ ತಡೆಗೆಟ್ಟುವ ಸಲುವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಬುಧವಾರ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನೂ ಬಂಧಿಸಿ, 15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.ಲೋಕಾಯುಕ್ತ ಎಸ್‌ಪಿ ಸಜಿತ್ ಮತ್ತು ಡಿವೈಎಸ್‌ಪಿ ಮಾಥ್ಯೂಸ್ ಥೋಮಸ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಲೋಹಿತ್ ಕುಮಾರ್, ಶಶಿಕುಮಾರ್ ಸಿಬ್ಬಂದಿ ಮಹದೇವಸ್ವಾಮಿ, ಕುಮಾರ್ ಆರಾಧ್ಯ,ಮಹಾಲಿಂಗಸ್ವಾಮಿ, ಶ್ರೀನಿವಾಸ್, ಗುರು, ಗೌತಮ್, ಐಸಾಕ್ ಮತ್ತು ನಾಗೇಂದ್ರ ಕಾರ್ಯಾಚರಣೆ ನಡೆಸಿದ್ದರು