ಬೆಂಗಳೂರು, ಮೇ. 11 : ಬಾಡಿಗೆ ಮನೆಗೆ ಹೋಗಲು ಕೂಡ ವಾಸ್ತುವನ್ನು ನೋಡಲೇಬೇಕು. ವಾಸ್ತು ಯಾವಾಗಲೂ ಮನುಷ್ಯರಿಗಿಂತ ಕಟ್ಟಡಕ್ಕೆ ಅನ್ವಯಿಸುತ್ತದೆ. ಕಟ್ಟಡ, ಸ್ಥಳಕ್ಕೆ ವಾಸ್ತುವನ್ನು ಬಾಡಿಗೆ ಮನೆ ಆಗಲೀ ಸ್ವಂತ ಮನೆ ಆಗಲೀ ವಾಸ್ತುವನ್ನು ನೋಡಲೇ ಬೇಕಾಗುತ್ತದೆ. ಇನ್ನು ಬಾಡಿಗೆ ಮನೆಯಲ್ಲಿದ್ದು, ಓನರ್ ಕೂಡ ಅಲ್ಲೇ ಇದ್ದರೆ, ನಮಗೇನು ಸಮಸ್ಯೆ ಆಗುತ್ತದೆ. ಮಾಲೀಕರಿಗೇನು ಸಮಸ್ಯೆ ಆಗುತ್ತದೆ ಎಂದು ಕೇಳುತ್ತಾರೆ. ಆದರೆ ವಾಸ್ತು ಹಾಗಿಲ್ಲ. ಸುಮಾರು ಲೇಔಟ್ ಪ್ಲಾನ್ ಗಳ ಬಗ್ಗೆ ಎಡವಟ್ಟಾಗಿರುತ್ತದೆ.
ಲೇಔಟ್ ಗಳನ್ನು ಪ್ಲಾನ್ ಮಾಡಲು ಹೋದಾಗ ಸುಮಾರು ಜನ ಹೇಳುವುದು ಏನೆಂದರೆ, ಅದು ಬಾಡಿಗೆಗೆ ಕೊಡುವುದು ಅಷ್ಟೆಲ್ಲಾ ಆಳವಾಗಿ ನೋಡುವುದು ಬೇಡ ಎಂದು ಹೇಳುತ್ತಾರೆ. ಹೀಗೆ ಹೇಳಿಯೇ ವಾಸ್ತುವನ್ನು ನೋಡುತ್ತಾರೆ. ಇನ್ನು ವಾಸ್ತು ನೋಡಿ ಸರಿಯಾಗಿ ಕಟ್ಟಿಕೊಟ್ಟರೆ ಮಾತ್ರವೇ ಬಾಡಿಗೆ ಮನೆಯಲ್ಲಿ ಇರುವವರಿಗೆ ಶುಭವನ್ನು ಕೊಡುತ್ತದೆ. ಇಲ್ಲದೇ ಹೋದರೆ, ಮಾಲೀಕರಿರಲೀ, ಅಥವಾ ಬಾಡಿಗೆದಾರರಿರಲಿ ಅವರಿಗೆ ತೊಂದರೆಯನ್ನು ಕೊಡುತ್ತದೆ. ಹಾಗಾಗಿ ವಾಸ್ತುವನ್ನು ಎಲ್ಲರಿಗೂ ನೋಡಬೇಕು.
ಇನ್ನು ಭೂಮಿಗೆ ಸಂಬಂಧಪಟ್ಟಂತಹ ದೋಷಗಳಿದ್ದರೆ, ಮಾಲೀಕರಿಗೆ ತೊಂದರೆ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಮನೆಯೊಳಗೆ ವಾಸ್ತು ಪ್ರಕಾರ ನಿರ್ಮಾಣ ಮಾಡಿಲ್ಲ ಎಂದಾದರೆ, ಅಲ್ಲಿ ಎಲ್ಲರಿಗೂ ಸಮಸ್ಯೆ ಆಗುತ್ತದೆ. ವಾಸ ಮಾಡುವವರಿಗೂ ಸಮಸ್ಯೆ ಆಗುತ್ತದೆ. ಹಾಗಾಗಿ ಬಾಡಿಗೆ ಮನೆಗಳಿಗೆ ಹೋಗುವಾಗ ವಾಸ್ತುವನ್ನು ನೋಡುವುದು ಬಹಳ ಮುಖ್ಯವಾಗಿದೆ. ಇಲ್ಲದೇ ಹೋದರೆ, ವಾಸ್ತು ಸರಿಯಾಗಿಲ್ಲದ ಮನೆಗೆ ಯಾರೇ ಬಾಡಿಗೆದಾರರು ಹೋದರೂ ಅವರಿಗೆ ಸಮಸ್ಯೆಗಳು ಇದ್ದೇ ಇರುತ್ತವೆ.