24.2 C
Bengaluru
Friday, September 20, 2024

ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ ರಚನೆಗೆ 9 ಸದಸ್ಯರ ಸಮಿತಿ

ನವದೆಹಲಿ;ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT) 3ರಿಂದ 12ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಹೊಸ ಸಮಿತಿಯನ್ನು ರಚಿಸಿದೆ.ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್‌ಸಿಇಆರ್‌ಟಿಯ 19 ಸದಸ್ಯರ ಸಮಿತಿಗೆ ಸುಧಾ ಮೂರ್ತಿ, ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.ನೂತನ ಸಮಿತಿಯಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಗಾಯಕ ಶಂಕರ್ ಮಹಾದೇವನ್,ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಸೇರಿದಂತೆ 16 ಮಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ(NSTC) ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ(NIEPA) ಕುಲಪತಿ MC ಪಂತ್ ನೇತೃತ್ವ ವಹಿಸುತ್ತದೆ ಮತ್ತು 3 ರಿಂದ 12 ನೇ ತರಗತಿಗಳಿಗೆ ಪಠ್ಯಪುಸ್ತಕಗಳನ್ನು ರಚಿಸಲಿದೆ.

Related News

spot_img

Revenue Alerts

spot_img

News

spot_img