23.1 C
Bengaluru
Monday, October 7, 2024

8000 ರೂ. ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಕೇಸ್ ವರ್ಕರ್

#8000 Rs. #Loka # case worker # fell #trap while #accepting # bribe

ಬೆಂಗಳೂರು;ಹಾವೇರಿ ಜಿಲ್ಲೆಯ ಶಿಗ್ಗಾಂವಿಯ (Shiggov) ಪುರಸಭೆಯ ಕೇಸ್ ವರ್ಕರ್, 8 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ( Lokayukta) ಬಲೆಗೆ ಬಿದ್ದಿದ್ದಾರೆ.ಶಿಗ್ಗಾವಿ ಪುರಸಭೆ ಕೇಸ್ ವರ್ಕರ್ ಸತೀಶ ತಳವಾರ ಬಂಧಿತ ವ್ಯಕ್ತಿ ಆಸ್ತಿಯೊಂದರ ಉತಾರಗಳನ್ನು 1983 ರಿಂದ 2000 ನೇ ಇಸವಿಯವರೆಗೆ ಕೊಡಲು ಲಂಚಕ್ಕೆ(Bribe) ಬೇಡಿಕೆ ಇಟ್ಟು ಹಣ ಸ್ವೀಕರಿಸೋ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ. ಶಿಗ್ಗಾವಿ ಪುರಸಭೆ ವ್ಯಾಪ್ತಿಯ ಮೌಲಾಲಿನಗರದ ದೂರುದಾರ ಅಬ್ದುಲ್‌ ರಶೀದ್ ತಂದೆ ಅಬ್ದುಲ್‌ಗಸಿ ದಿವಾನದಾರ ಸದರಿ ಉತಾರ ಪೂರೈಸಲು ಫೆ.19ರಂದು ಅರ್ಜಿ ಸಲ್ಲಿಸಿದ್ದರು. ಅಬ್ದುಲರಶೀದ್ ಎಂಬುವರಿಂದ 8000 ಹಣ ಪಡೆಯುತ್ತಿದ್ದ ವೇಳೆ ಕೇಸ್ ವರ್ಕರ್ ರೆಡ್​​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ(DYSP) ಬಿ.ಪಿ ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿ ಆಂಜನೇಯ ಎನ್ ಎಚ್. ಹಾಗೂ ಸಿಬ್ಬಂದಿ ಎಮ್ ಕೆ ನದಾಫ, ಎಮ್ ಕೆ ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್‌.ಎನ್. ಕಡಕೋಳ, ಎಮ್. ಸಿ. ಅರಸೀಕೆರಿ, ಬಿ.ಎಸ್. ಸಂಕಣ್ಣನವರ, ಎ.ಜಿ. ಶೆಟ್ಟರ್, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸದರಿ ಆರೋಪಿತರನ್ನು ಶಿಗ್ಗಾಂವ ಪುರಸಭೆಯ ಕಚೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.

Related News

spot_img

Revenue Alerts

spot_img

News

spot_img