22.8 C
Bengaluru
Thursday, June 20, 2024

ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಪ್ಲ್ಯಾಟ್ ನಲ್ಲಿ 42 ಕೋಟಿ ರು ಸೀಜ್ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು

#42 Crores #seized #IncomeTax #Department #officials #former #corporator’s #plot #Bangalore

ಬೆಂಗಳೂರು;ಬೆಂಗಳೂರಿನಲ್ಲಿ ತಡರಾತ್ರಿ IT ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. BBMP ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ R.ಗಣೇಶ ಬ್ಲಾಕ್​ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.ಅವರ ಸುಲ್ತಾನ್ ಪಾಳ್ಯದ ಮನೆಯಲ್ಲಿ 23 ಬಾಕ್ಸ್‌ಗಳಲ್ಲಿದ್ದ 42 ಕೋಟಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಹಣವನ್ನು ಬೆಡ್‌ರೂಂನ ಮಂಚದ ಕೆಳಗೆ ಇಟ್ಟಿದ್ದರು. ಒಂದೊಂದು ಬಾಕ್ಸ್‌ನಲ್ಲಿ 1 ಕೋಟಿ 65 ಲಕ್ಷ ಹಣ ಇಡಲಾಗಿತ್ತು. ಇನ್ನೂ, ಇತ್ತೀಚಿಗೆ ಅಂಬಿಕಾಪತಿ ಬಿಲ್ ಬಾಕಿ ಪಾವತಿಗಾಗಿ ಸಿಎಂ ಭೇಟಿಯಾಗಿದ್ದರು.

ಪ್ಲಾಟ್ ಒಂದರಲ್ಲಿ 500 ಮುಖಬೆಲೆಯ 42 ಕೋಟಿ ರು ಹಣವನ್ನು ಕಂಡು ಐಟಿ(Incometax) ಅಧಿಕಾರಿಗಳು ದಂಗಾಗಿದ್ದಾರೆ.ಬೆಂಗಳೂರಿನ ಆರ್​ಟಿ ನಗರದ(RT nagar) ಎರಡು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್​ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಮಾಜಿ ಕಾರ್ಪೋರೇಟರ್(Corporator) ಅಶ್ವತ್ಥಮ್ಮನ ಗಂಡ ಅಂಬಿಕಾಪತಿಗೆ ಸೇರಿದ ಹಣ ಎಂದು ಹೇಳಲಾಗಿದೆ.ಈ ಪ್ರಮಾಣದ ಹಣವನ್ನು ಕಾರಿನಲ್ಲಿ ಸಾಗಾಟ ಮಾಡಲು ತಯಾರಿ ನಡೆದಿತ್ತು. ಪ್ಲಾಟ್​ನಲ್ಲಿ ಕೋಟಿ ಕೋಟಿ ಹಣದ ಬಾಕ್ಸ್​ಗಳು ಪತ್ತೆಯಾದ ಹಿನ್ನಲೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಇಷ್ಟೊಂದು ಹಣ ಯಾರಿಗೆ ಸೇರಿದ್ದು? ಆ ಫ್ಲಾಟ್ ಯಾರದ್ದು ಎಂಬ ಬಗ್ಗೆ ಐಟಿ ಅಧಿಕಾರಿಗಳು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.ಒಂದು ವರದಿಗಳ ಪ್ರಕಾರ, ಅಷ್ಟೊಂದು ಹಣವನ್ನು ಕಾರಿನ ಮೂಲಕ ತಮಿಳುನಾಡು ಕಡೆಗೆ ಸಾಗಿಸಲು ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ.

Related News

spot_img

Revenue Alerts

spot_img

News

spot_img