22.6 C
Bengaluru
Saturday, July 27, 2024

32 ಶಾಸಕರಿಗೆ ನಿಗಮ-ಮಂಡಳಿ ಸ್ಥಾನಮಾನ ನೀಡಿ ಆದೇಶ

#32 MLAs #ordered # corporation-board #status

ಬೆಂಗಳೂರು;ಕಳೆದ ಹಲವು ದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಜ್ಯದ ಹಲವು ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಿಸಿ ರಾಜ್ಯ ಸರ್ಕಾರ ಕೊನೆಗೂ ಆದೇಶಿಸಿದೆ. ಒಟ್ಟು 32 ಶಾಸಕರಿಗೆ ನಿಗಮ-ಮಂಡಳಿ ಸ್ಥಾನಮಾನ ನೀಡಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿದೆ. ಇದರೊಂದಿಗೆ ಕೆಲ ಹಿರಿಯ ಶಾಸಕರು ಸಚಿವ ಸ್ಥಾನ ಸಿಗದಿದ್ದರೂ ನಿಟ್ಟುಸಿರು ಬಿಟ್ಟಿದ್ದಾರೆ.ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶಾಸಕರನ್ನು ಅವರ ಹೆಸರಿನ ಮುಂದೆ ನಮೂದಿಸಲಾಗಿರುವ ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ (Cabinet Level Position) ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿದೆ.ಈಗ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಅಧಿಕಾರದ ಅವಧಿ 2 ವರ್ಷ ಎಂದು ಉಲ್ಲೇಖ ಮಾಡಲಾಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಇನ್ನೂ ಅನೇಕ ಆಕಾಂಕ್ಷಿಗಳು ಇದ್ದಾರೆ. ಅವರೆಲ್ಲರಿಗೂ ಈಗ 2 ವರ್ಷದ ಬಳಿಕ ಅವಕಾಶವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಲಾಗಿದೆ.

ನಿಗಮ-ಮಂಡಳಿಗಳ ನೂತನ ಅಧ್ಯಕ್ಷರ ಪಟ್ಟಿ 

ಹಂಪನಗೌಡ ಬಾದರ್ಲಿ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ

ಅಪ್ಪಾಜಿ ಸಿ.ಎಸ್.ನಾಡಗೌಡ: ಕೆಎಸ್​ಡಿಎಲ್

ರಾಜು ಕಾಗೆ: ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ)

ಹೆಚ್.ವೈ.ಮೇಟಿ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ

ಎಸ್.ಆರ್.ಶ್ರೀನಿವಾಸ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಬಸವರಾಜ ನೀಲಪ್ಪ ಶಿವಣ್ಣನವರ್: ಅರಣ್ಯ ಅಭಿವೃದ್ಧಿ ನಿಗಮ

ಬಿ.ಜಿ.ಗೋವಿಂದಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಹೆಚ್.ಸಿ.ಬಾಲಕೃಷ್ಣ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

ಜಿ.ಎಸ್.ಪಾಟೀಲ್: ಖನಿಜ ಅಭಿವೃದ್ಧಿ ನಿಗಮ ನಿಯಮಿತ

ಎನ್.ಎ.ಹ್ಯಾರಿಸ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಕೌಜಲಗಿ ಮಹಾಂತೇಶ್ ಶಿವಾನಂದ: ಹಣಕಾಸು ಸಂಸ್ಥೆ

ಸಿ.ಪುಟ್ಟರಂಗಶೆಟ್ಟಿ: ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್

ಬೀಳಗಿ ಶಾಸಕ ಜೆ.ಟಿ.ಪಾಟೀಲ್: ಹಟ್ಟಿ ಚಿನ್ನದ ಗಣಿ

ರಾಜಾ ವೆಂಕಟಪ್ಪ ನಾಯಕ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ: ಲ್ಯಾಂಡ್ ಆರ್ಮಿ

ಕೆ.ಎಂ.ಶಿವಲಿಂಗೇಗೌಡ: ಕರ್ನಾಟಕ ಗೃಹ ಮಂಡಳಿ

ಅಬ್ಬಯ್ಯ ಪ್ರಸಾದ್: ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ

ಬೇಳೂರು ಗೋಪಾಲಕೃಷ್ಣ: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ

ಎಸ್.ಎನ್.ನಾರಾಯಣಸ್ವಾಮಿ: ಕೆಯುಡಿಐಸಿ ಮತ್ತು ಎಫ್​ಸಿ

ಪಿ.ಎಂ.ನರೇಂದ್ರಸ್ವಾಮಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಟಿ.ರಘುಮೂರ್ತಿ: ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ

ರಮೇಶ್ ಬಾಬು ಬಂಡಿಸಿದ್ದೇಗೌಡ: ಚೆಸ್ಕಾಂ

ಬಿ.ಶಿವಣ್ಣ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಎಸ್.ಎನ್.ಸುಬ್ಬಾರೆಡ್ಡಿ: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ

ವಿನಯ ಕುಲಕರ್ಣಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು: ಜಂಗಲ್ ಲಾಡ್ಜಸ್

ಬಸನಗೌಡ ದದ್ದಲ್: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

ಖನೀಜ್ ಫಾತಿಮಾ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ

ವಿಜಯಾನಂದ ಕಾಶಪ್ಪನರ್: ಕರ್ನಾಟಕ ಕ್ರೀಡಾ ಪ್ರಾಧಿಕಾರ

ಶ್ರೀನಿವಾಸ ಮಾನೆ: ಡಿಸಿಎಂ ರಾಜಕೀಯ ಸಲಹೆಗಾರ

ಟಿ.ಡಿ.ರಾಜೇಗೌಡ: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ

ಎಂ.ರೂಪಕಲಾ: ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ

Related News

spot_img

Revenue Alerts

spot_img

News

spot_img