21.2 C
Bengaluru
Tuesday, December 3, 2024

ಕೃಷಿಕರಿಗೆ ಪ್ರತಿ ಎಕರೆಗೆ 10,000 ರೂ. ಸರ್ಕಾರದಿಂದ ಆರ್ಥಿಕ ನೆರವು;ಅರ್ಹತೆಯ ಮಾನದಂಡಗಳೇನು

#10,000 per acre # farmers #Financial assistance # Govt #eligibility# criteria

ಬೆಂಗಳೂರು;ರೈತರನ್ನು ಉತ್ತೇಜಿಸಲು ಮತ್ತು ರಾಜ್ಯದಲ್ಲಿ ಸಾವಯವ ಮತ್ತು ರಾಗಿ ಕೃಷಿಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ರೈತ ಸಿರಿ ಯೋಜನೆಯನ್ನು(Raitha Siri scheeme) ಪ್ರಾರಂಭಿಸಿದೆ.ರಾಜ್ಯ ಸರ್ಕಾರ ರೈತರ ಏಳಿಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ರೈತ ಸಿರಿ ಯೋಜನೆ ಸಹ ಒಂದು. ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಸಿರಿಧಾನ್ಯ(Cereal) ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10,000 ಪ್ರೋತ್ಸಾಹ ಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಮೊದಲ ಕಂತಿನಲ್ಲಿ ₹6,000, 2ನೇ ಕಂತಿನಲ್ಲಿ ₹4,000 ಹಣ ನಿಮ್ಮ ಖಾತೆಗೆ ಜಮೆ ಆಗಲಿದೆ.ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10,000 ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು.ರೈತ ಸಿರಿ ಯೋಜನೆಯ ಹಣ ಪಡೆಯಬೇಕಾದರೆ, ನೀವು ಕರ್ನಾಟಕದ ನಿವಾಸಿಗಳಾಗಿರಬೇಕು. ಸಿರಿ ಧಾನ್ಯ ಬೆಳೆಯುವ ರೈತರಿಗೆ ಮಾತ್ರ ಈ ಹಣ ಸಿಗಲಿದೆ.

ಅರ್ಹತೆಯ ಮಾನದಂಡ:

*ಅರ್ಜಿದಾರರು ಕರ್ನಾಟಕದ ಖಾಯಂ ನಾಗರಿಕರಾಗಿರಬೇಕು.

*ಅರ್ಜಿದಾರರು ವೃತ್ತಿಯಲ್ಲಿ ರೈತರಾಗಿರಬೇಕು.

*ರಾಗಿ ಬೆಳೆಯುವ ಪ್ರಾಥಮಿಕ ಬೆಳೆಗಾರರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗಲಿದೆ.

*ಈ ಯೋಜನೆಗೆ ಅರ್ಹತೆ ಪಡೆಯಲು ಕನಿಷ್ಠ ಒಂದು ಹೆಕ್ಟೇರ್ ಕೃಷಿ ಆಸ್ತಿ ಅಗತ್ಯವಿದೆ.

 ಈ ಕೆಳಗಿನ ದಾಖಲೆಗಳು ಅರ್ಜಿ ಸಲ್ಲಿಸಲು ಅಗತ್ಯ

ಆಧಾರ್ ಕಾರ್ಡ್ ಅಥವಾ ಗುರುತಿನ ಪುರಾವೆ.

ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು.

ಶಾಶ್ವತ ನಿವಾಸಿ ಪ್ರಮಾಣಪತ್ರ.

ವಿಳಾಸ ಪುರಾವೆ.

ಪಡಿತರ ಚೀಟಿ.

ಬ್ಯಾಂಕ್ ಖಾತೆ ವಿವರಗಳು.

ಮೊಬೈಲ್ ನಂಬರ.

ಭೂ ದಾಖಲೆ ವಿವರಗಳು.

ಪಾಸ್ಪೋರ್ಟ್ ಗಾತ್ರದ ಫೋಟೋಗಳು

Related News

spot_img

Revenue Alerts

spot_img

News

spot_img