ಬೆಂಗಳೂರು: ನಗರದಲ್ಲಿ ಏಪ್ರಿಲ್ 1 ರಿಂದ ಮೌಲ್ಯಾಧಾರಿತ ಆಸ್ತಿ ತೆರಿಗೆ(Value-based property tax) ಜಾರಿಗೆ ತರಲು ಬಿಬಿಎಂಪಿ(BBMP) ಮುಂದಾಗಿದ್ದು, ಈ ಹೊಸ ಆಸ್ತಿ ತೆರಿಗೆ ಜಾರಿಯಿಂದಾಗಿ ಮನೆ ಅಥವಾ ವಾಣಿಜ್ಯ ಸ್ಥಳವನ್ನು ಬಾಡಿಗೆಗೆ ನೀಡುವ ಮಾಲೀಕರಿಗೆ ತೆರಿಗೆಯು ಹೊರೆಯಾಗಿ ಪರಿಣಮಿಸಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಮನೆ, ಅಂಗಡಿ ಗಳನ್ನು ಬಾಡಿಗೆ ನೀಡುವ ಬಾಡಿಗೆದಾರರಿಗೆ ತೆರಿಗೆ ಹೆಚ್ಚಾಗಲಿದ್ದು, ಹೀಗಾಗಿ ಈ ತೆರಿಗೆಯನ್ನು ಸರಿದೂಗಿಸಲು ಬಾಡಿಗೆ ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ.ಆಸ್ತಿ ತೆರಿಗೆ ಮೌಲ್ಯದ ಹೆಚ್ಚಳದಿಂದಾಗಿ ಈಗಾಗಲೇ ವಾರ್ಷಿಕವಾಗಿ ಹೆಚ್ಚು ಬಾಡಿಗೆ ಪಾವತಿಸುತ್ತಿರುವ ಬಾಡಿಗೆದಾರರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಅಂದರೆ ಈ ಹೊಸ ವ್ಯವಸ್ಥೆಯಿಂದ ಸ್ವಯಂ-ಆಕ್ರಮಿತ ವಸತಿ ಆಸ್ತಿಗಳಿಗೆ (self occupied residential properties) ಸಂಬಂಧಪಟ್ಟಂತೆ ನೀಡಲಾಗುವ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚುವರಿ ಟ್ಯಾಕ್ಸ್(Tax) ಅನ್ನು ಬಾಡಿಗೆ ನೀಡುವ ಆಸ್ತಿಗಳ ಮೇಲೆ ವಿಧಿಸಲಾಗಿದೆ. ಹೊಸ ವ್ಯವಸ್ಥೆಯು ಬಾಡಿಗೆಗೆ ಪಡೆದ ಆಸ್ತಿಗಳು ಸ್ವಯಂ-ಆಕ್ರಮಿತ ವಸತಿ ಆಸ್ತಿಗಳು ನೀಡುವ ತೆರಿಗೆ ಮೊತ್ತವನ್ನು ಎರಡು ಪಟ್ಟು ಪಾವತಿಸಬೇಕಾಗುತ್ತದೆ, ಜತೆಗೆ ಇತರ ವರ್ಗದ ವಾಣಿಜ್ಯ ಕಟ್ಟಡಗಳಿಗೆ ಸುಂಕವನ್ನು 3ರಿಂದ 5 ಪಟ್ಟು ಹೆಚ್ಚಿಸಲಾಗಿದೆ. ಪಾಲಿಕೆಯ ಹೊಸ ಆಸ್ತಿ ತೆರಿಗೆ ನಿಯಮಗಳ ಪ್ರಕಾರ ಬಾಡಿಗೆ ವಸತಿ ಸ್ಥಳಗಳು ಮನೆಗಳಿಗಿಂತ ಶೇ. 100ರಷ್ಟು ಹೆಚ್ಚು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ವಾಣಿಜ್ಯೋದ್ದೇಶಕ್ಕಾಗಿ ಬಳಸಲಾಗುವ ಹೋಟೆಲ್, ಮಾಲ್‌ಗಳು, ಅಂಗಡಿ ಮುಂಗಟ್ಟುಗಳ ತೆರಿಗೆ 3 ರಿಂದ 5 ಪಟ್ಟು ಹೆಚ್ಚಾಗಿರುತ್ತದೆ.
ಏಪ್ರಿಲ್ 1 ರಿಂದ ಮೌಲ್ಯಾಧಾರಿತ ಆಸ್ತಿ ತೆರಿಗೆ ನಿಯಮ ಜಾರಿಗೆ ಬಾಡಿಗೆ ಮನೆಗಳ ಮೇಲಿನ ತೆರಿಗೆ 100% ಹೆಚ್ಚಳ?
by RF Desk