#yuvanidhi jojane #november#implemented
YuvaNidhi Yojane: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ಪೈಕಿ ಕರ್ನಾಟಕ ಯುವನಿಧಿ ಯೋಜನೆ ಕೂಡ ಒಂದು.ಗ್ಯಾರೆಂಟಿ ಯೋಜನೆ ಗಳ ಪೈಕಿ ಐದನೆಯದು ಕರ್ನಾಟಕ ಯುವನಿಧಿ ಯೋಜನೆ ಯುವನಿಧಿ ಯೋಜನೆಗೆ ನವೆಂಬರ್ ಕೊನೆಯ ವಾರದಲ್ಲಿ ಮೈಸೂರು ನಗರದಲ್ಲಿ ನೀಡುವ ಬಗ್ಗೆ ಚರ್ಚಿಸಲಾಗಿದೆ.ಡಿಪ್ಲೋಮಾ, ಪದವೀಧರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ನವೆಂಬರ್ ಕೊನೆ ವಾರದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ.2022- 23ನೇ ಸಾಲಿನಲ್ಲಿಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ, ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ.
ಯುವ ನಿಧಿ ಯೋಜನೆ ದಾಖಲೆಗಳು
* ಕರ್ನಾಟಕದ ನಿವಾಸಿ ಪುರಾವೆ
* ಆಧಾರ್ ಕಾರ್ಡ್
*10 ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
* 12 ನೇ (ದ್ವಿತೀಯ ಪಿಯುಸಿ) ಅಂಕಪಟ್ಟಿ ಮತ್ತು ಪ್ರಮಾಣಪತ್ರ.
* ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
* ಡಿಪ್ಲೊಮಾ ಪ್ರಮಾಣಪತ್ರ.
* ಜಾತಿ ಪ್ರಮಾಣ ಪತ್ರ.
* ಆದಾಯ ಪ್ರಮಾಣಪತ್ರ.
* ಮೊಬೈಲ್ ನಂಬರ್
* ಬ್ಯಾಂಕ್ ಖಾತೆ ವಿವರಗಳು.
* ಸೆಲ್ಫ್ ಡಿಕ್ಲೆರೇಷನ್ ಪ್ರತಿ