26.6 C
Bengaluru
Monday, November 18, 2024

ವಿದ್ಯುತ್‌ ಉಚಿತ ಎಂದು ಬೇಕಾಬಿಟ್ಟಿ ಬಳಸಿದರೆ ಜೋಕೆ! ಕಟ್ಟಬೇಕಾಗುತ್ತದೆ ದುಂದು ವೆಚ್ಚಕ್ಕೆ ಶುಲ್ಕ; ಬಾಡಿಗೆ ಮನೆಯವರಿಗೂ ಫ್ರೀ

ಬೆಂಗಳೂರು ಜೂನ್ 04:Conditions For Free Electricity : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ. ಉಚಿತ ಎಂದು ಬೇಕಾಬಿಟ್ಟಿ ಬಳಸುವುದಕ್ಕೆ ಮಿತಿ ಹಾಕಿದೆ. ಪ್ರಮುಖವಾಗಿ ಎಲ್ಲರಿಗೂ 200 ಯೂನಿಟ್‌ ವಿದ್ಯುತ್‌ ಉಚಿತವಲ್ಲ. ಸದ್ಯ ಸರಾಸರಿ ಬಳಕೆ ಮಾಡುತ್ತಿರುವ ವಿದ್ಯುತ್‌ ಅಂದಾಜಿಸಿ ಅದರ ಮೇಲೆ ಶೇ 10 ರಷ್ಟು ವಿದ್ಯುತ್‌ ಅನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ.

ಸರ್ಕಾರ ಉಚಿತ ವಿದ್ಯುತ್‌ ಕೊಡುತ್ತಿದೆ ಎಂದು ಅಳತೆ ಮೀರಿ ಬಳಸಿದರೆ ಆ ಹೆಚ್ಚುವರಿ ಹಣವನ್ನು ನೀವೇ ಪಾವತಿಸಬೇಕಾಗುತ್ತದೆ.ಬಡವರು, ಕೆಳ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನ ನಿರ್ವಹಣೆಯ ಪ್ರಯಾಸ ತಗ್ಗಿಸಲು ರಾಜ್ಯ ಸರಕಾರ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ.

12 ತಿಂಗಳ ಸರಾಸರಿ ಲೆಕ್ಕಹಾಕಿ, ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಬಳಕೆ ಅವಕಾಶ ನೀಡಿದೆ.ಸರ್ಕಾರ ಉಚಿತ ವಿದ್ಯುತ್‌ ಕೊಡುತ್ತಿದೆ ಎಂದು ಅಳತೆ ಮೀರಿ ಬಳಸಿ ದುಂದು ವೆಚ್ಚಕ್ಕೆ ಮುಂದಾದರೆ ಆ ಹೆಚ್ಚುವರಿ ಹಣವನ್ನು ನೀವೇ ಪಾವತಿಸಬೇಕಾಗುತ್ತದೆ ಎಚ್ಚರ! ಬಡವರು, ಕೆಳ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನ ನಿರ್ವಹಣೆಯ ಪ್ರಯಾಸ ತಗ್ಗಿಸಲು ರಾಜ್ಯ ಸರಕಾರ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಉಚಿತ ಯೋಜನೆಗಳು ದುಂದು ವೆಚ್ಚ ಹಾಗೂ ದುರುಪಯೋಗಕ್ಕೂ ದಾರಿ ಮಾಡಿಕೊಡುವ ಮುನ್ನೆಚ್ಚರಿಕೆಯಿಂದ ಸರಕಾರ ಎಚ್ಚರಿಕೆ ವಹಿಸಿದೆ.

ಬೇಕಾಬಿಟ್ಟಿ ಬಳಸಿದರೆ ಶುಲ್ಕ ಪಾವತಿಸಬೇಕು
‘ಗೃಹ ಜ್ಯೋತಿ’ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಬಳಕೆಗೆ ಬಿಲ್‌ ಪಾವತಿಸಬೇಕಿಲ್ಲ. ಆದರೆ, 200 ಯೂನಿಟ್‌ವರೆಗೆ ಫ್ರೀ ಎಂಬ ಕಾರಣಕ್ಕೆ ಗ್ರಾಹಕರು ಬೇಕಾಬಿಟ್ಟಿ ವಿದ್ಯುತ್‌ ಬಳಸಿ ದುರುಪಯೋಗಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಅದಕ್ಕಾಗಿ 12 ತಿಂಗಳ ಸರಾಸರಿ ಲೆಕ್ಕಹಾಕಿ, ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಬಳಕೆ ಅವಕಾಶ ನೀಡಿದೆ. ಪ್ರತಿ ಸಂಪರ್ಕದ ವಿದ್ಯುತ್‌ ಬಳಕೆ ಲೆಕ್ಕ ಹಾಕಿ ಇಷ್ಟು ಯುನಿಟ್‌ ಮಾತ್ರ ಉಚಿತ ಎಂದು ತಿಳಿಸಲಾಗುತ್ತದೆ. ಉಚಿತಕ್ಕೂ ಮಿತಿ ಹಾಕಿದೆ.

ಮನೆಯ ಉಚಿತ ವಿದ್ಯುತ್‌ ಲೆಕ್ಕಾಚಾರ ಹೇಗೆ?
ಉದಾಹರಣೆಯಾಗಿ ಒಂದು ಮನೆಯ ವಿದ್ಯುತ್‌ ಬಿಲ್‌ನ ವರ್ಷದ ಸರಾಸರಿ 60 ಯೂನಿಟ್‌ ಇದ್ದರೆ, ಹೆಚ್ಚುವರಿ ಆರು ಯೂನಿಟ್‌ ಸೇರಿಸಿ, ಬಳಕೆಯ ಪ್ರಮಾಣವನ್ನು 66 ಯೂನಿಟ್‌ ಎಂದು ನಿಗದಿಪಡಿಸಲಾಗುವುದು. ಆ ಮನೆಯವರು 66 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸಿದರೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಅದೇ ರೀತಿ ವಿದ್ಯುತ್‌ ಬಳಕೆ ವಾರ್ಷಿಕ ಸರಾಸರಿ 150 ಯೂನಿಟ್‌ ಇದ್ದವರು, 165 ಯೂನಿಟ್‌ವರೆಗಷ್ಟೇ ವಿದ್ಯುತ್‌ ಬಳಸಬಹುದು.

200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಘೋಷಣೆ: ಕರೆಂಟ್‌ ಬಿಲ್ ಸರಾಸರಿ ಲೆಕ್ಕಾಚಾರ ಹೇಗೆ?

ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ಗಳನ್ನು ಮೀರಿರಬಾರದು.

ಅರ್ಥ ಆಗಿಲ್ಲದವರಿಗೆ ಕೆಳಗೆ ಎರಡು ಉದಾಹರಣೆಯನ್ನು ನಮೂದಿಸಲಾಗಿದೆ.ಸಾಮಾನ್ಯ ಮಧ್ಯಮ ಕುಟುಂಬದ ಉದಾಹರಣೆ

ತಿಂಗಳು 1 – 180 ಯೂನಿಟ್
ತಿಂಗಳು 2 – 185 ಯೂನಿಟ್
ತಿಂಗಳು 3 – 185 ಯೂನಿಟ್
ತಿಂಗಳು 4 – 180 ಯೂನಿಟ್
ತಿಂಗಳು 5 – 185 ಯೂನಿಟ್
ತಿಂಗಳು 6 – 175 ಯೂನಿಟ್
ತಿಂಗಳು 7 – 180 ಯೂನಿಟ್
ತಿಂಗಳು 8 – 185 ಯೂನಿಟ್
ತಿಂಗಳು 9 – 185 ಯೂನಿಟ್
ತಿಂಗಳು 10 – 178 ಯೂನಿಟ್
ತಿಂಗಳು 11 – 180 ಯೂನಿಟ್
ತಿಂಗಳು 12 – 175 ಯೂನಿಟ್

ಒಟ್ಟು 2173 ಯೂನಿಟ್ಗಳು.

ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು.

ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..

ಬಡ ಕುಟುಂಬದ ಉದಾಹರಣೆ

ತಿಂಗಳು 1 – 70 ಯೂನಿಟ್
ತಿಂಗಳು 2 – 80 ಯೂನಿಟ್
ತಿಂಗಳು 3 – 60 ಯೂನಿಟ್
ತಿಂಗಳು 4 – 55 ಯೂನಿಟ್
ತಿಂಗಳು 5 – 65 ಯೂನಿಟ್
ತಿಂಗಳು 6 – 70 ಯೂನಿಟ್
ತಿಂಗಳು 7 – 85 ಯೂನಿಟ್
ತಿಂಗಳು 8 – 55 ಯೂನಿಟ್
ತಿಂಗಳು 9 – 70 ಯೂನಿಟ್
ತಿಂಗಳು 10 – 75 ಯೂನಿಟ್
ತಿಂಗಳು 11 – 80 ಯೂನಿಟ್
ತಿಂಗಳು 12 – 55 ಯೂನಿಟ್

ಒಟ್ಟು 820 ಯೂನಿಟ್ಗಳು.

ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು.

ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು.

ಬಾಡಿಗೆ ಮನೆಯವರಿಗೂ ಸೌಲಭ್ಯ ಉಂಟು
ಪ್ರತಿ ಮೀಟರ್‌ ಸಂಪರ್ಕಕ್ಕೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಮಾನದಂಡ ಅನ್ವಯವಾಗಲಿದೆ. ಮೀಟರ್‌ ಮಾಲೀಕರ ಹೆಸರಿನಲ್ಲಿದ್ದರೂ, ರೆವಿನ್ಯೂ ರಿಜಿಸ್ಟರ್‌ ನಂಬರ್‌ (ಆರ್‌.ಆರ್‌) ಆಧರಿಸಿ ಬಾಡಿಗೆ ಮನೆಯವರಿಗೂ ಈ ಫ್ರೀ ವಿದ್ಯುತ್‌ ಸೌಲಭ್ಯ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Related News

spot_img

Revenue Alerts

spot_img

News

spot_img