24.6 C
Bengaluru
Wednesday, December 18, 2024

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ,ಯಶಸ್ವಿನಿ ಕಾರ್ಡ್ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು

ಬೆಂಗಳೂರು;ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ.ಆರ್ಥಿಕವಾಗಿ ಅಸಮರ್ಥ ರೈತರು(Farmer) ಸರ್ಕಾರದಿಂದ ನೀಡಲಾಗುವ ವಿವಿಧ ಆರೋಗ್ಯ ಸೌಲಭ್ಯಗಳಿಂದ(Health benfits) ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಸಮಗ್ರವಾದ ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು 1 ಜೂನ್ 2003 ರಂದು ಯಶಸ್ವಿನಿ ಆರೋಗ್ಯ ವಿಮಾ ಯೋಜನೆ(Yashavini Health Insurance Scheme)ಯನ್ನು ಪ್ರಾರಂಭಿಸಿತು. ಅದರಲ್ಲಿ ಪ್ರಮುಖವಾಗಿ ಯಶಸ್ವಿನಿ ಕಾರ್ಡ್ ಅವುಗಳಲ್ಲಿ 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ (free treatment) ಪಡೆದುಕೊಳ್ಳುವಂತಹ ಯೋಜನೆ ಕೂಡ ಒಂದು. ಯೋಜನೆಯ ಪ್ರಯೋಜನ ನೀವು ಪಡೆದುಕೊಳ್ಳುವುದಿದ್ದರೆ ತಕ್ಷಣ ಈ ಒಂದು ಕಾರ್ಡ್ ಗೆ ಅಪ್ಲೈ ಮಾಡಿ.ಈ ಯೋಜನೆ 2018ರ ವರೆಗೂ ಜಾರಿಯಲ್ಲಿತ್ತು,ರಾಜ್ಯದಲ್ಲಿ ಅನೇಕ ಜನರ ನಿರಂತರ ಬೇಡಿಕೆಯಿಂದ 2022 -23ನೇ ಸಾಲಿನ ಬಜೆಟ್ಟಿನಲ್ಲಿ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಾಗಾಗಿ ಈ ಯೋಜನೆಗೆ 300 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಘೋಷಿಸಲಾಗಿದೆ.

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ

ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ. ಯಶಸ್ವಿನಿ ಕಾರ್ಡ್ ಪಡೆದ 15 ದಿನಗಳ ನಂತರ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಯಶಸ್ವಿನಿ ಯೋಜನೆಗೆ ಸಾಮಾನ್ಯ ನಗರವಾಸಿ 1000 ರೂಪಾಯಿಗಳು, ಗ್ರಾಮೀಣ ವಾಸಿ 500 ರೂಪಾಯಿಗಳನ್ನು ಪಾವತಿಸಬೇಕು ಹಾಗೂ ಪರಿಶಿಷ್ಟ ಜಾತಿಯವರಿಗೆ ಯಾವುದೇ ಶುಲ್ಕ ಇಲ್ಲ.

ಯಶಸ್ವಿನಿ ಕಾರ್ಡ್ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು

ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ.
ನಿಮ್ಮ ರೇಷನ್ ಕಾರ್ಡ್ ಚೀಟಿ.
ಇತ್ತೀಚೆಗೆನಾ ನಿಮ್ಮ ಭಾವಚಿತ್ರ.
ಜಾತಿಯ ಪ್ರಮಾಣ ಪತ್ರದ ಆರ್ ಟಿ ನಂಬರ್ ಸಲ್ಲಿಸಬೇಕು.

Related News

spot_img

Revenue Alerts

spot_img

News

spot_img