20.4 C
Bengaluru
Saturday, November 23, 2024

ಜಗತ್ತಿನ ಅತಿ ದುಬಾರಿ ನಗರಗಳ ಪಟ್ಟಿ ರಿಲೀಸ್

ಬೆಂಗಳೂರು, ಮಾ. 23 : 2022 ರಲ್ಲಿ ನ್ಯೂಯಾರ್ಕ್ ವಿಶ್ವದ ಅತ್ಯಂತ ದುಬಾರಿ ವ್ಯಾಪಾರ ಪ್ರವಾಸ ತಾಣವಾಗಿದೆ. ಕನ್ಸಲ್ಟಿಂಗ್ ಫರ್ಮ್ ಇಸಿಎ ಇಂಟರ್‌ನ್ಯಾಶನಲ್ ಪ್ರಕಾರ, ಬಿಗ್ ಆಪಲ್ ತನ್ನ ಸಮೀಕ್ಷೆಯ ಭಾಗವಾಗಿ ಈ ವಿಚಾರ ಬಹಿರಂಗವಾಗಿದೆ. ಬಿಗ್‌ ಆಪಲ್‌ ಜಗತ್ತಿನ ಪ್ರಮುಖ ನಗರಗಳಲ್ಲಿ ನಾಲ್ಕು-ಸ್ಟಾರ್ ಹೋಟೆಲ್‌ಗಳು, ಊಟಗಳು, ಟ್ಯಾಕ್ಸಿಗಳು, ಪಾನೀಯಗಳು ಮತ್ತು ಸಾಂದರ್ಭಿಕ ಸಂಗತಿಗಳ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಅತ್ಯಂತ ದುಬಾರಿ ನಗರವಾಗಿ ನ್ಯೂಯಾರ್ಕ್‌ ಎಂಬುದು ಬಹಿರಂಗವಾಗಿದೆ.

ಸಮೀಕ್ಷೆಯಲ್ಲಿ ಅಮೇರಿಕವೇ ಮೇಲುಗೈ ಸಾಧಿಸಿದೆ. ನ್ಯೂಯಾರ್ಕ್‌ ನಲ್ಲಿ ವ್ಯಾಪಾರ, ಪ್ರಯಾಣ ಹಾಗೂ ಪ್ರವಾಸೋದ್ಯಮ ಕಳೆದ ವರ್ಷಕ್ಕಿಂತ ಶೇ. 8 ರಷ್ಟು ವೆಚ್ಚ ಹೆಚ್ಚಾಗಿದೆ. ದಿನಕ್ಕೆ $796 ದರ ಪ್ರಯಾಣಿಕರಿಂದ ವ್ಯಾಪಾರವಾಗುತ್ತಿದೆ. ಈನ್ನು ಅಮೇರಿಕದ ವಾಷಿಂಗ್ಟನ್ ಡಿಸಿ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ಎರಡೂ ನಗರಗಳು ಕೂಡ ನಂತರದ ಸ್ಥಾನವನ್ನು ಪಡೆದಿದೆ. ಅಗ್ರ ಐದು ಸ್ಥಾನಗಳನ್ನು ಈ ಮೂರು ನಗರಗಳು ಸ್ಥಾನ ಪಡೆದಿವೆ. ಈ ಮೂರು ನಗರಗಳ ಬಳಿಕ ಸ್ವಿಟ್ಜರ್ಲೆಂಡ್ ನ ಜಿನೀವಾ ಹಾಗೂ ಜುರಿಚ್‌ ನಗರಗಳು ಸೇರಿಕೊಂಡಿವೆ.

ಇನ್ನು ಏಷ್ಯಾದಲ್ಲೇ ಅತ್ಯಂತ ದುಬಾರಿ ತಾಣವಾಗಿ ಹಾಂಗ್ ಕಾಂಗ್ ಹೊರಹೊಮ್ಮಿದೆ. ಹಾಂಗ್‌ ಕಾಂಗ್‌ ನಲ್ಲಿ ಸರಾಸರಿ ದೈನಂದಿನ ವೆಚ್ಚ $520. ಹಣಕಾಸಿನ ಹಬ್ ಪ್ರತಿಸ್ಪರ್ಧಿ ಸಿಂಗಾಪುರಕ್ಕಿಂತ ಕೇವಲ $5 ಅಧಿಕವಿದೆ. ಲಂಡನ್ ಹಾಗೂ ಪ್ಯಾರಿಸ್ ತಮ್ಮ ಮೊದಲ ಹತ್ತು ಸ್ಥಾನಗಳನ್ನು ಉಳಿಸಿಕೊಂಡಿವೆ. ಇನ್ನು ಅಂಗೋಲಾದ ಲುವಾಂಡಾ ಆಫ್ರಿಕಾದಲ್ಲಿ ಅತ್ಯಂತ ದುಬಾರಿಯ ಸ್ಥಳವಾಗಿದೆ.

ಜನತ್ತಿನಲ್ಲಿ ಇತ್ತೀಚೆಗೆ ಏರುತ್ತಿರುವ ಹಣದುಬ್ಬರ ದರಗಳು ಪ್ರಯಾಣದ ವೆಚ್ಚಗಳ ಹೆಚ್ಚಳದಲ್ಲಿ ಪ್ರಮುಖ ಅಂಶವಾಗಿದೆ. ಆದರೆ ಬೇಡಿಕೆಯಲ್ಲಿನ ಸಾಂಕ್ರಾಮಿಕ ರೋಗ, ಇಂಧನ ಕುಸಿತ, ಚೀನಾದಂತಹ ಸ್ಥಳಗಳಲ್ಲಿ ಹೆಚ್ಚು ಕೈಗೆಟುಕುವ ದರಗಳಿಗೆ ಕಾರಣವಾಯಿತು.

Related News

spot_img

Revenue Alerts

spot_img

News

spot_img