ಬೆಂಗಳೂರು, ಫೆ. 14 : ಮರಕ್ಕಿಂತ ಮರ ದೊಡ್ಡದು ಎಂಬ ಮಾತನ್ನು ಕೇಳಿದ್ದೇವೆ. ಹಾಗೆಯೇ ಮನೆಗಿಂತ ಮನೆ ದೊಡ್ಡದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಜಗತ್ತಿನ ಅತೀ ದುಬಾರಿ ಮನೆಗಳು ಯಾವುವು ಎಂದು ನೋಡೋಣ ಬನ್ನಿ..
ಲಂಡನ್ ನಲ್ಲಿ ಅತೀ ದುಬಾರಿ ಮನೆ ಇದೆ. ಇದು ಬ್ರಿಟೀಷರ ರಾಜ ಮನೆತನದ ಆಸ್ತಿ. ಲಂಡನ್ ನ ಬುಕಿಂಗ್ ಹ್ಯಾಮ್ ನಲ್ಲಿ ಈ ಅರಮನೆ ಇದ್ದು, ಇದೆ ಬೆಲೆ 6.7 ಶತಕೋಟಿ ಡಾಲರ್. ಈ ಮನೆಯಲ್ಲಿ ಒಟ್ಟು 775 ಕೊಠಡಿಗಳಿದ್ದು, ಈ ಮನೆಯಲ್ಲಿ ಒಟ್ಟು 78 ಬಾತ್ ರೂಮ್ ಇದೆ. 52 ಬೆಡ್ ರೂಮ್ ಗಳಿದ್ದು, 92 ಕಚೇರಿಗಳಿವೆ. ಇನ್ನು 19 ಜನರಲ್ ರೂಮ್ ಗಳಿವೆಯಂತೆ.
ಇನ್ನು ಫ್ರಾನ್ಸ್ ನಲ್ಲೂ ದುಬಾರಿ ಮನೆ ಇದ್ದು, ಇದರ ಬೆಲೆ ಬರೋಬ್ಬರಿ 750 ಮಿಲಿಯನ್ ಡಾಲರ್ ಆಗಿದೆ. ಇದರ ಹೆಸರು ವಿಲ್ಲಾ ಲಿಯೋಪೋಲ್ಡಾ ಎಂದು ಕರೆಯಲಾಗುತ್ತದೆ.
ಇನ್ನು ಫ್ರಾನ್ಸ್ ನಲ್ಲೆ ಮತ್ತೊಂದು ದುಬಾರಿ ಮನೆ ಇದೆ. ಅದರ ಹೆಸರು ವಿಲ್ಲಾ ಲೆಸ್ ಸೆಡ್ರೆಸ್ ಎಂದು. ಇದರ ಬೆಲೆ 430 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಇದನ್ನು 1830ರಲ್ಲಿ ಬೆಲ್ಜಿಯಂ ನಿರ್ಮಾಣ ಮಾಡಿದ್ದಾಗಿದೆ. ಇದರಲ್ಲಿ 14 ಮಲಗುವ ಕೋಣೆಗಳಿವೆ. ಜೊತೆ ಲೈಬ್ರರಿ, ಸ್ವಿಮ್ಮಿಂಗ್ ಪೂಲ್ ಕೂಡ ಇದೆ.
ಫ್ರಾನ್ಸ್ ನಲ್ಲಿ 385 ಮಿಲಿಯನ್ ಡಾಲರ್ ಬೆಲೆ ಬಾಳುವ ಮನೆ ಇದೆ. ಇದು ಫ್ರಾನ್ಸ್ ನ ಕ್ಯಾನೆಸ್ ನಲ್ಲಿರುವ ಪಲೈಸ್ ಬುಲ್ಸ್. ಇದನ್ನು ಲೆಸ್ ಪಲೈಸ್ ಬಬಲ್ಸ್ ಎಂದೂ ಕರೆಯಲಾಗುತ್ತದೆ. ಇದು ಸಮುದ್ರದ ದಡದಲ್ಲಿದ್ದು, ವ್ಯೂವ್ ಚೆನ್ನಗಿದೆ. ಇನ್ನು ಇದನ್ನು ಮೇಲಿಂದ ನೋಡಲು ಬಬಲ್ ನಂತೆ ಕಾಣುತ್ತದೆ.
ಇನ್ನು ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಾರ್ ಫೇರ್ ಫೀಲ್ಡ್ ಪಾಂಡ್ ಇದೆ. ಇದು 248 ಮಿಲಿಯನ್ ಡಾಲರ್ ಬೆಲೆ ಬಾಳುತ್ತದೆ. ಇದು 63 ಎಕರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮನೆಯಲ್ಲಿ ಒಮ್ಮೆಗೆ 105 ಜನ ಒಟ್ಟಿಗೆ ಕುಲೀತು ಊಟ ಮಾಡಬಹುದಾಗಿದೆ.
ಫ್ಲೋರಿಡಾದಲ್ಲಿ ಆಲಿಸನ್ ಅವರ ಎಸ್ಟೇಟ್ ಇದ್ದು, ಇದು ಬರೋಬ್ಬರಿ 200 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಮಾನವ ನಿರ್ಮಿತ ಸರೋವರವಿದೆ. ಅಲ್ಲದೇ, ಜಗತ್ತಿನ ಅತ್ಯಂತ ದುಬಾರಿ ಹೂವುಗಳು ಮತ್ತು ಮರಗಳು ಈ ಎಸ್ಟೇಟ್ ನಲ್ಲಿವೆ.
ಕ್ಯಾಲಿಫೋರ್ನಿಯಾದಲ್ಲಿ ಬೆವರ್ಲಿ ಹಿಲ್ಸ್ ಇದೆ. ಈ ಹಿಲ್ಸ್ ನಲ್ಲಿ ಪಲಾಝೋ ಡಿ ಅಮೋರ್ ಎಂಬ ಮನೆ ಇದೆ. ಇದು 195 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಈ ಮನೆಯಲ್ಲಿ ಥಿಯೇಟರ್ ಗಳು, ಸ್ವಿಮ್ಮಿಂಗ್ ಪೂಲ್ ಕೂಡ ಇದೆ. ಇದನ್ನು ನೋಡಿದರೆ ರೆಸಾರ್ಟ್ ನಂತೆ ಕಾಣಿಸುತ್ತದೆ.
ಮೊನಾಕೋದ ಡಬಲ್ ಗಗನಚುಂಬಿ ಕಟ್ಟಡವಿದೆ. ಓಡಿಯನ್ ಟವರ್ ಸ್ಕೈ ಪೆಂಟ್ ಹೌಸ್ ಕೂಡ ದುಬಾರಿಯದ್ದಾಗಿದೆ. ಇದರ ಬೆಲೆ 330 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಈ ಪೆಂಟ್ ಹೌಸ್ ಡುಪ್ಲೆಕ್ಸ್ ಆಗಿದ್ದು, ಐಷಾರಾಮಿ ಮನೆ ಇದಾಗಿದೆ. ಈ ಪೆಂಟ್ ಹೌಸ್ ಒಟ್ಟು 5 ಮಹಡಿಗಳನ್ನು ಹೊಂದಿದೆ. ಇದನ್ನು 2015 ರಲ್ಲಿ ನಿರ್ಮಿಸಲಾಗಿದೆ. ಈ ಟವರ್ ನಲ್ಲಿರುವ ಪ್ರತಿ ಮನೆಯೂ ಐಷಾರಾಮಿಯದ್ದಾಗಿದೆ.