21.1 C
Bengaluru
Monday, December 23, 2024

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್​ಐ

ಬೆಂಗಳೂರು;ಬೆಂಗಳೂರಿನ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಪಿಎಸ್​ಐ (PSI), ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಪೂರ್ವ ವಿಭಾಗ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಸವಿತಾ ಲೋಕಾಯುಕ್ತ ಬಲೆ ಬಿದ್ದ ಪಿಎಸ್​ಐ ಆಗಿದ್ದಾರೆ.

ಆನಂದ್ ಕುಮಾರ್ ಎಂಬ ಆರೋಪಿಯ ಜಾಮೀನು ಅಂಗೀಕಾರ ಮಾಡಲು 50 ಸಾವಿರ ರೂಪಾಯಿಗೆ ಪಿಎಸ್​​ಐ ಸವಿತಾ ಬೇಡಿಕೆ ಇಟ್ಟಿದ್ದರಂತೆ. ಆದರೆ ಆತ 50 ಸಾವಿರ ಕೊಡಲು ಆಗುವದಿಲ್ಲ ಅಂತ ಹೇಳಿದಾಗ 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರಂತೆ.ಇದರಿಂದ ಆತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ರೆಡ್​ಹ್ಯಾಂಡ್​ ಆಗಿ ಪಿಎಸ್​ಐ ಅವರನ್ನು ಬಲೆಗೆ ಕೆಡವಿದ್ದಾರೆ. ಈ ಹಿನ್ನೆಲೆ ಬುಧವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಪಿಎಸ್​ಐ ಸವಿತಾ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Related News

spot_img

Revenue Alerts

spot_img

News

spot_img