20.5 C
Bengaluru
Tuesday, July 9, 2024

ಡಿಸೆಂಬರ್‌ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ

#Winter #Session #Parliment #December

ದೆಹಲಿ;ಡಿಸೆಂಬರ್ ಎರಡನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಆ ತರುವಾಯ ಆರಂಭವಾಗಲಿರುವ ಸಂಸತ್ತಿನ ಮುಂದಿನ ಅಧಿವೇಶನ, ಕ್ರಿಸ್‌ಮಸ್‌ಗೂ ಮೊದಲೇ ಮುಗಿಯಲಿದೆ. ಈ ಸಭೆಗಳಲ್ಲಿ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಬದಲಿಗೆ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.ಭಾರತೀಯ ದ೦ಡ ಸಂಹಿತೆ(IPC), ಅಪರಾಧ ಪ್ರಕ್ರಿಯಾ ಸಂಹಿತೆ(CRC) ಮತ್ತು ಭಾರತೀಯ ಅಧಿನಿಯಮ(Indian Evidence Act) ಆಮೂಲಾಗ್ರ ಬದಲಾವಣೆಗೊಳ್ಳಲಿವೆ. ಇದಕ್ಕೆ ಸಂಬಂಧಿಸಿ 3 ಪ್ರಮುಖ ವಿಧೇಯಕಗಳನ್ನು ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಲಿದ್ದಾರೆ. ಗೃಹ ಇಲಾಖೆ ಸಾಯಿ ಸಮಿತಿ ಆದಾಗಲೇ 3 ವಿಧೇಯಕಗಳ ಸಂಬಂಧ ವರದಿಗಳನ್ನು ಇತ್ತೀಚೆಗೆ ಅಂಗೀಕರಿಸಿದೆ. ಸಂಸತ್ತಿನಲ್ಲಿ ಬಾಕಿ ಉಳಿದಿರುವ ಮತ್ತೊಂದು ಪ್ರಮುಖ ವಿಧೇಯಕವೆಂದರೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ್ದಾಗಿದೆ. ಆ ವಿಧೇಯಕವನ್ನೂ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸುವ ಸಾಧ್ಯತೆ ಇದೆ.

Related News

spot_img

Revenue Alerts

spot_img

News

spot_img