18.5 C
Bengaluru
Friday, November 22, 2024

ದುಡಿಯಲು ಸಮರ್ಥಳಿರುವ ಪತ್ನಿ ಜೀವನಾಂಶ ನೀಡಲೇಬೇಕು: ಹೈಕೋರ್ಟ್

ಬೆಂಗಳೂರು: ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ, ಪತ್ನಿ ಉದ್ಯೋಗ ಮಾಡಲು ಸಮರ್ಥಂಗರೂ ಮಾಡುತ್ತಿಲ್ಲ. ಹಾಗಾಗಿ ಆಕೆಗೆ ಜೀವನಾಂಶ ನೀಡಲಾಗದು ಎಂಬ ಗಂಡನ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್(Highcourt) ಆಕೆಗೆ ಜೀವನಾಂಶ(sustenance) ನೀಡಲೇಬೇಕು ಎಂದು ಸೂಚಿಸಿದೆ.ಕೌಟುಂಬಿಕ ನ್ಯಾಯಾಲಯ(Family Court) ನಿಗದಿಪಡಿಸಿದ್ದ 18 ಸಾವಿರ ರೂ ಜೀವನಾಂಶವನ್ನು 36 ಸಾವಿರಕ್ಕೆ ಹೆಚ್ಚಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ,ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣವಧಿ ಕೆಲಸ, ಎಂದು ಅಭಿಪ್ರಾಯಪಟ್ಟಿದೆ.ಪತಿಯಾದವರು ಕೇಂದ್ರ ಸರಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜ‌ರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದು ಖಾಸಗಿ ಉದ್ಯೋಗಗಳಂತೆ ಯಾವಾಗ ಬೇಕಾದರೂ ತೆಗೆದುಹಾಕುವಂತಹ ಉದ್ಯೋಗವಲ್ಲ.ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗವಾಗಿದೆ. ಅವರು ಸದ್ಯ ಸುಮಾರು 90 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಹಾಗಾಗಿ ಅವರು ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ಜೀವನಾಂಶ ನೀಡಬೇಕು ಎಂದು ಪೀಠ ತಿಳಿಸಿದೆ.ಪ್ರತಿವಾದಿ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಯೂ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಜೀವನಾಂಶ ನೀಡಲೇಬೇಕು. ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು,” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

Related News

spot_img

Revenue Alerts

spot_img

News

spot_img