ಬೆಂಗಳೂರು, ಡಿ. 23: ಪಿಂಕ್ ಟ್ಯಾಕ್ಸ್. ಇತ್ತೀಚೆಗೆ ನೀವು ಈ ಪದಗಳನ್ನು ಕೇಳಿರುತ್ತೀರಾ. ಇದು ಕೇವಲ ಮಹಿಳೆಯರು ಮಾತ್ರವೇ ಕಟ್ಟ ಬೇಖಿರುವ ತೆರಿಗೆ. ಪಿಂಕ್ ಟ್ಯಾಕ್ಸ್ ಮಹಿಳೆಯರಿಗಾಗಿ ತಯಾರಿಸುವ ವಸ್ತುಗಳ ಮೇಲೆ ಹೇರಲಾಗಿದೆ. ನಿರ್ದಿಷ್ಟವಾಗಿ ಮಹಿಳೆಯರಿಗೆ ಮಾರಾಟ ಮಾಡಲಾದ ಕೆಲವು ಉತ್ಪನ್ನಗಳು ಅಥವಾ ಸೇವೆಗಳಿಗೆ ವಿಧಿಸಲಾಗುವ ಹೆಚ್ಚುವರಿ ಹಣ. ಈ ಉತ್ಪನ್ನಗಳು ಮತ್ತು ಸೇವೆಗಳು ಬಟ್ಟೆಗಳು, ರೇಜರ್‌ಗಳು, ಸೋಪ್‌ಗಳು, ಲೋಷನ್‌ಗಳು, ಡಿಯೋಡರೆಂಟ್‌ಗಳು, ಹೇರ್‌ಕಟ್‌ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರಬಹುದು. ಪಿಂಕ್ ಟ್ಯಾಕ್ಸ್ ನಿರ್ದಿಷ್ಟವಾಗಿ ಮಹಿಳಾ ಗ್ರಾಹಕರ ಕಡೆಗೆ ಮಾರಾಟವಾಗುವ ಉತ್ಪನ್ನಗಳ ಸಾಮಾನ್ಯ ಪ್ರವೃತ್ತಿಯನ್ನು ಉಲ್ಲೇಖಿಸುತ್ತದೆ.
ಪಿಂಕ್ ಟ್ಯಾಕ್ಸ್ ಹೇಗೆ ಕೆಲಸ ಮಾಡುತ್ತದೆ?
ಪಿಂಕ್ ಟ್ಯಾಕ್ಸ್ ಎನ್ನುವುದು ನಿರ್ದಿಷ್ಟವಾಗಿ ಮಹಿಳಾ ಗ್ರಾಹಕರಿಗಾಗಿ ಮಾರಾಟ ಮಾಡಲಾದ ಕೆಲವು ಉತ್ಪನ್ನಗಳು ಅಥವಾ ಸೇವೆಗಳಿಗೆ ವಿಧಿಸಲಾಗುವ ಹೆಚ್ಚುವರಿ ಹಣ. ರೇಜರ್‌ಗಳು ಅಥವಾ ಡಿಯೋಡರೆಂಟ್‌ಗಳಂತಹ ಸಾಮಾನ್ಯ ಉತ್ಪನ್ನಗಳನ್ನು ಪುರುಷರು ಮತ್ತು ಮಹಿಳೆಯರು ಬಳಸಬಹುದು. ಆದರೆ ಮಹಿಳೆಯರಿಗೆ ಮಾರಾಟವಾಗುವ ವಸ್ತುಗಳು ಹೆಚ್ಚು ದುಬಾರಿಯಾಗಿದೆ. ಕಂಪನಿಯು ಉತ್ಪನ್ನವನ್ನು ತಯಾರಿಸಿದಾಗ ಅಥವಾ ಮಾರಾಟ ಮಾಡುವಾಗ, ಅದು ಮಹಿಳೆಯರಿಗೆ ಸ್ವಲ್ಪ ಹೆಚ್ಚಿನ ಬೆಲೆಯನ್ನು ಆಯ್ಕೆ ಮಾಡಬಹುದು. ಹೆಚ್ಚಿನ ಮಹಿಳೆಯರಿಗೆ ತಮ್ಮ ದೈನಂದಿನ ಜೀವನವನ್ನು ನಡೆಸಲು ಬೇಕಾದುದನ್ನು ಖರೀದಿಸಲು ಹೆಚ್ಚು ದುಬಾರಿಯಾಗಿದೆ.
ಉದಾಹರಣೆಗೆ, ಡ್ರಗ್‌ಸ್ಟೋರ್‌ನಲ್ಲಿ, ಸಾಬೂನು, ಲೋಷನ್, ಶಾಂಪೂ, ಡಿಯೋಡರೆಂಟ್, ಬಟ್ಟೆಗಳು, ಆಟಿಕೆಗಳು, ಪ್ರಯಾಣದ ಶೌಚಾಲಯಗಳು. ಪಿಂಕ್ ಟ್ಯಾಕ್ಸ್ ಕನಿಷ್ಟ 1990 ರ ದಶಕದ ಹಿಂದಿನದು. ಲಾಂಡ್ರಿಗಳಲ್ಲಿ ಪುರುಷರ ಬಟ್ಟೆಗಳಿಗಿಂತಲೂ ಮಹಿಳೆಯರ ಬಟ್ಟೆಯನ್ನು ವಾಶ್ ಮಾಡಿದ ಇಸ್ತ್ರಿ ಮಾಡುವುದಕ್ಕೆ ಹೆಚ್ಚಿನ ಹಣವನ್ನು ತೆಗೆದುಕೊಳ್ಳಲಾಗುತ್ತದೆ. ಈ ಪಿಂಕ್ ಟ್ಯಾಕ್ಸ್ ವಿರುದ್ಧ ಈಗಾಗಲೇ ಹಲವು ರಾಜ್ಯಗಳಲ್ಲಿ ಹೋರಾಟ ನಡೆಸಲಾಗಿದೆ. ಇದು ನಿಜವಾದ ತೆರೆಇಗೆ ಅಲ್ಲದಿದ್ದರೂ, ಮಹಿಳೆಯರಿಗೆ ತಯಾರಿಸುವ ಕಾಸ್ಮೆಟಿಕ್ಸ್ ಮತ್ತು ಬಟ್ಟೆಗಳ ಮೇಲೆ ಮೊದಲೇ ಹೆಚ್ಚಿನ ದರವನ್ನು ನಿಗದಿ ಪಡಿಸಿರಲಾಗಿರುತ್ತದೆ.
ಯಾಕೆ ಪಿಂಕ್ ಟ್ಯಾಕ್ಸ್..?
ಮಹಿಳೆಯರು ಬಳಸುವ ಬಟ್ಟೆ, ಸೌಂದರ್ಯವರ್ಧಕಗಳ ಮೇಲೆ ಈ ಪಿಂಕ್ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ. ಯಾಕೆಂದರೆ ಮಹಿಳೆಯರು ಧರಿಸುವ ಬಟ್ಟೆಗಳು, ಕಾಸ್ಮೆಟಿಕ್ಸ್ ಗಳನ್ನು ವೈವಿಧ್ಯಮವಾಗಿ ತಯಾರಿಸಲಾಗುತ್ತದೆ. ಇನ್ನ ಮಹಿಳೆಯರು ತಮಗಿಷ್ಟವಾದ ವಸ್ತುವನ್ನು ಖರೀದಿಸಲು, ಬೆಲೆಯ ಲೆಕ್ಕಾಚಾರವನ್ನು ಹಾಕುವುದಿಲ್ಲ. ತಮಗೆ ಇಷ್ಟವಾಗಿದ್ದನ್ನೂ ಎಷ್ಟೇ ಹೆಚ್ಚಿನ ಹಣವಾದರೂ ಖರೀದಿಸುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ಮಹಿಳಡಯರು ಬಳಸುವ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ಹಾಕಲಾಗುತ್ತದೆ.
ಕೆಲ ಪ್ರಾಡಕ್ಟ್ ಗಳ ಮೇಲೆ ಮಹಿಳೆಯರ ಚಿತ್ರವಿರುತ್ತದೆ. ಆದರೆ ಅದನ್ನು ಪುರುಷರು ಕೂಡ ಬಳಸುತ್ತಾರೆ. ಉದಾಹರಣೆಗೆ ರೇಜರ್, ಲಿಪ್ ಬಾಮ್. ಆದರೆ ಇವುಗಳಿಗೂ ಪಿಂಕ್ ಟ್ಯಾಕ್ಸ್ ಅನ್ನು ಹಾಕಲಾಗಿರುತ್ತದೆ. ಇನ್ನು ಪುರುಷರ ಸಲೂನ್ ಗಳಿಗಿಂತಲೂ ಮಹಿಳೆಯರ ಸಲೂನ್ ದುಬಾರಿ ಆಗಿದೆ. ಹೇರ್ ವಾಶ್, ಹೇರ್ ಕಟ್, ಪುರುಷರಿಗೆ ಕಡಿಮೆ ವೆಚ್ಚದ್ದಾಗಿದ್ದರೆ, ಮಹಿಳೆಯರು ಸಾವಿರಾರು ರೂಪಾಯಿ ನೀಡಬೇಕಅಗುತ್ತದೆ. ಇನ್ನು ಪಿಂಕ್ ಟ್ಯಾಕ್ಸ್ ನಿಂದಾಗಿ ಲಿಂಗ ತಾರತಮ್ಯ ಉಂಟಾಗುತ್ತದೆ ಎಂದು ಹಲವರು ವಾದಿಸಿದ್ದಾರೆ. ಕೆಲ ರಾಜ್ಯಗಳಲ್ಲಿ ಪಿಂಕ್ ಟ್ಯಾಕ್ಸ್ ಅನ್ನು ತೊಡೆದು ಹಾಕಲಾಗಿದೆ. ಆದರೆ, ಈ ಪಿಂಕ್ ಟ್ಯಾಕ್ಸ್ ವಿಚಾರ ಆಗಅಗ ಚರ್ಚೆಗೆ ಬರುತ್ತಿರುತ್ತದೆ.