ಬೆಂಗಳೂರು, ಏ. 01 : ಮನೆಯನ್ನು ನಿರ್ಮಾಣ ಮಾಡುವಾಗ ಸುತ್ತಲೂ ಖಾಲಿ ಜಾಗವನ್ನು ಬಿಡಬೇಕಾಗುತ್ತದೆ. ಇದರಿಂದ ಗಾಳಿ ಬೆಳಕು ಮನೆಗೆ ಪ್ರವೇಶಿಸಲು ಸೂಕ್ತವಾಗಿರುತ್ತದೆ. ಮನೆಯ ಸುತ್ತಲೂ ಇರುವ ನೆಗೆಟಿವ್ ಎನರ್ಜಿಗಳನ್ನು ಮನೆಯೊಳಗೆ ಬಾರದಂತೆ ತಡೆಯುವ ಸಲುವಾಗಿ ದಿಗ್ಭಂಧನವನ್ನು ಮಾಡಿಸಬೇಕಾಗುತ್ತದೆ. ಗೃಹಪ್ರವೇಶ ಮಾಡುವಾಗ ಈ ದಿಗ್ಭಂಧನವನ್ನು ಮಾಡಿಸಲಾಗುತ್ತದೆ. ಹೀಗೆ ದಿಗ್ಭಂಧನ ಮಾಡಿಸದೇ ಇದ್ದರೆ, ನೆಗೆಟಿವ್ ಎನರ್ಜಿಗಳನ್ನು ಮನೆಯ ಸುತ್ತಲೂ ಸುತ್ತುತ್ತದೆ. ಇದರಿಂದ ಸಮಸ್ಯೆ ಆಗುತ್ತದೆ.
ಮನೆಯ ಸುತ್ತಲೂ ಖಾಲಿ ಜಾಗವನ್ನು ಬಿಟ್ಟರೆ, ನೆಗೆಟಿವ್ ಎನರ್ಜಿಗಳು ಮನೆಯ ಸುತ್ತ ಸುತ್ತಿ ಬೇರೆ ಕಡೆಗೆ ಹೋಗಲು ಅವಕಾಶವಿರುತ್ತದೆಯಂತೆ. ಅದೇ ಮನೆಯ ಸುತ್ತಲೂ ಖಾಲಿ ಜಾಗ ಬಿಡದೇ ಇದ್ದಾಗ ನೆಗೆಟಿವ್ ಎನರ್ಜಿಗಳು ಸುತ್ತು ಹಾಕುವಾಗ ಮನೆಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯನ್ನು ನಿರ್ಮಾಣ ಮಾಡುವಾಗ ಸುತ್ತಲೂ ಖಾಲಿ ಜಾಗವನ್ನು ಬಿಡಬೇಕು. ಅದರ ಜೊತೆಗೆ ದಿಗ್ಬಂಧನವನ್ನು ತಪ್ಪದೇ ಮಾಡಿಸಬೇಕು.
ನಗರಗಳಲ್ಲಿ ಎಲ್ಲರೂ ಮನೆಯನ್ನು ಕಟ್ಟುವಾಗ ಮಾಡುವ ತಪ್ಪೆಂದರೆ ಕಾಂಪೌಂಡ್ ಅನ್ನು ಹಾಕದೇ ಇರುವುದು. ಮನೆಯ ಎದು ಕಾಂಫೌಂಡ್ ಇರುತ್ತೆ. ಅದಕ್ಕೆ ಗೇಟ್ ಸಹ ಇರುತ್ತೆ. ಆದರೆ, ಮನೆಯ ಸುತ್ತಾ ಸರಿಯಾದ ಕಾಂಪೌಂಡ್ ಇರುವುದಿಲ್ಲ. ಎಲ್ಲರೂ ಪಕ್ಕದ ಮನೆಯ ಗೋಡೆಗಳಿಗೆ ಅಟ್ಯಾಚ್ಡ್ ಆಗಿ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಯಾವೆಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಮನೆಯ ಸುತ್ತಲೂ ಸಣ್ಣ ಮಟ್ಟಕ್ಕಾದರೂ ಸ್ಥವನ್ನು ಬಿಟ್ಟು ಮನೆ ಕಟ್ಟಬೇಕು.
ಮನೆಯ ಸುತ್ತಲೂ ವಾಸ್ತು ಪ್ರಕಾರ ಖಾಲಿ ಜಾಗವನ್ನು ಬಿಡಬೇಕು. ಆದರೆ, ಯಾರೂ ಬಿಡುವುದಿಲ್ಲ. ಇದು ಅಶುಭದ ಸಂಕೇತವಾಗಿದೆ. ಎನರ್ಜಿ ಮಾಡಿಫಿಕೇಶನ್ ಗಾಗಿ ಕಾಂಪೌಂಡ್ ಇರುವುದು ಬಹಳ ಮುಖ್ಯ. ಹಾಗೊಂದು ವೇಳೆ ಕಾಂಪೌಂಡ್ ಸುತ್ತಲೂ ಜಾಗ ಬಿಡದಿದ್ದರೆ, ನೆಗೆಟಿವ್ ಎನರ್ಜಿಗೆ ಆಹ್ವಾನ ನೀಡಿದಂತೆ. ಹಾಗಾಘಿ ಮನೆಯ ಸುತ್ತ ಖಾಲಿ ಜಾಗ ಬಿಡುವುದು ಹಾಗೂ ದಿಗ್ಬಂಧನ ಮಾಡಿಸುವುರು. ಇದೆರಡು ಕೂಡ ಬಹಳ ಮುಖ್ಯವಾದ ವಿಚಾರಗಳು.