ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಬಿಗ್ ಬಾಸ್ ಮನೆಗೆ ಬಂದಾಗಿಂದಲು ಸಹ ನಾನು ನಾನಾಗಿಯೇ ಉಳಿಯಲು ಇಷ್ಟ ಅಂತ ಮೊದಲಿನಿಂದಲೂ ಸಹ ಹೇಳುತ್ತಿದ್ದರು. ಇನ್ನು ಮೈಕೆಲ್ ತನಗೆ ಭಾವನೆ ಇಲ್ಲ ನಾನು ಏನೇ ಆದ್ರೂ ಒಂದೇ ರೀತಿ ಇರೋದು ಅನ್ನೋ ಹಾಗೆ ಇರ್ತಿದ್ರು…ಅವರ ಮಾತು ಹಾಗೂ ನಡತೆ ಕೂಡ ಹಾಗೇ ಗಡಸಾಗಿಯೇ ಇರುತ್ತೆ. ಮೈಕೆಲ್ ಗಟ್ಟಿ ಮನಸ್ಸಿನವನು ಅವನು ಸಹ ಅತ್ತಿದ್ದಾನೆ ಅಂದ್ರೆ ಇನ್ನೆಷ್ಟು ಮನಸ್ಸಿಗೆ ಘಾಸಿಯಾಗಿರ್ಬೇಡ ಅನ್ನೊ ಪ್ರಶ್ನೆ ಹಲವರಲ್ಲಿ ಮೂಡಿದೆ.. ಮೈಕೆಲ್ ಅಳೋದನ್ನ ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ನಗುತ್ತಿದ್ದಾರೆ. ವರ್ತೂರ್ ಸಂತೋಷ್ ಮತ್ತು ತುಕಾಲಿ ಸಂತೋಷ್ ಮಲಗುವ ಕೋಣೆಗೆ ಹೋಗಿ ಬೆಡ್ ಹತ್ತಿರ ಮಲಗುತ್ತಿರುವಾಗ ಮೈಕಲ್ ಅಳ್ತಿರೋದು ಗೋಚರವಾಗಿದೆ..
ಯಾಕೆ ನೀನು ಅಳ್ತಾ ಇದ್ದೀಯ ಮೈಕೆಲ್ ಇದನ್ನ ನಮ್ ಕೈಯ್ಯಲ್ಲಿ ನಂಬೋದಿಕ್ಕೆ ಆಗಲ್ಲ ಅಂತ ಇಬ್ಬರು ಸಂತೈಸಿದ್ದಾರೆ..
ಇನ್ನು ಅಲ್ಲೆ ಇದ್ದ ವಿನಯ್ ಯಾಕೆ ಅಳ್ತಾ ಇದ್ದೀಯ? ಅಂತ ಕೇಳಿದಾಗ ಆ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಅವರು ಮಾತನಾಡುತ್ತಾರೆ. ಅವಿನಾಶ್ ನನ್ ಹತ್ರ ಮಾತು ಕೂಡ ಆಡದೆ ಹೋಗಿ ಬಿಟ್ರು ಆ ಪ್ರಕ್ರಿಯೆ ಇರೋದೆ ಹಾಗಲ್ವ ಮೈಕಿ ಏನ್ ಮಾಡೋಕಾಗುತ್ತೆ ಅಂತ ಅಲ್ಲಿ ಇರುವವರೆಲ್ಲಾ ಸಮಾಧಾನ ಮಾಡ್ತಾರೆ. ಕೊನೆಯಲ್ಲಿ ಎಲ್ಲರಿಗೂ ಹೀಗೇ ಆಗೋದು ಎಂದಿದ್ದಾರೆ. ಕೊನೆಯಲ್ಲಿ ಆಗೋದು ಅಷ್ಟೇ ಕಣೋ ಇದ್ದಾಗ ಚೆನ್ನಾಗಿರಬೇಕು ಅಂತ ಅವರೆಲ್ಲ ಮಾತನಾಡಿಕೊಳ್ಳುತ್ತಾರೆ ಮೈಕಲ್ ಅಂದ್ರೆ ಯಾವುದಕ್ಕೂ ಕೇರ್ ಮಾಡಲ್ಲ ಅಂತಿದ್ದವರು ಕೂಡ ದಿಗ್ಭ್ರಾಂತಿಗೊಂಡಿದ್ದಾರೆ…
ಮೈಕಲ್ ಯಾವಾಗಲೂ ನೆಮ್ಮದಿಯಾಗಿರ್ತಾನೆ. ಅವನಿಗೆ ಹೆಚ್ಚಾಗಿ ಖುಷಿಪಡಲ್ಲ. ಬೇಸರವೂ ಆಗುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ರು ಆದರೆ ಬಿಗ್ ಬಾಸ್ ಮನೆಯಲ್ಲಿರುವ ಸಹ ಮನುಷ್ಯರೇ ಅಂತ ಪ್ರೇಕ್ಷಕರು ಮಾತನಾಡಿಕೊಂಡಿದ್ದಾರೆ..
ಮೈಕಲ್ ಮನೆಯಿಂದ ಯಾರು ಬರಬಹುದು.?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಸಂತಸದ ಘಳಿಗೆಗಳನ್ನ ವರದಾನವಾಗಿ ನೀಡಿದೆ. ಪ್ರತಿ ಸೀಸನ್ ಕೊನೆಯಲ್ಲಿ ಉಳಿದ ಕೆಲವು ಸ್ವರ್ಧಿಗಳ ತಂದೆ ತಾಯಿ ಅಥವಾ ಹತ್ತಿರದ ಇನ್ಯಾರಾದರೂ ಮನೆಗೆ ಬರಬಹುದು. ಅದೇ ರೀತಿ ಈ ಸೀಸನಲ್ಲಿ ಕೂಡ ಸ್ಪರ್ಧಿಗಳು ಕಾತುರದಿಂದ ಕಾಯುತ್ತಿದ್ದರು. ನಮ್ರತಾ ಕ್ಯಾಪ್ಟನ್ ಅಗಿರೋದ್ರಿಂದ ಅವರ ಮನೆಯಿಂದ ಅವರ ತಾಯಿ ಬಂದಿದ್ದಾರೆ. ಮೈಕಲ್ ಮನೆಯಿಂದ ಯಾರು ಬರುತ್ತಾರೆ ಕಾದು ನೋಡಬೇಕಿದೆ.