ಬೆಂಗಳೂರು, ಡಿ. 17: ಮೊದಲೆಲ್ಲಾ ಸಾಲ ಪಡೆಯಬೇಕೆಂದರೆ ತುಂಬಾ ಕಷ್ಟವಾಗುತ್ತಿತ್ತು. ಆದರೆ ಈಗ ಹಾಗಲ್ಲ. ಕೈ ಬೆರಳ ತುದಿಯಲ್ಲಿ ಸಾಲ ದೊರೆಯುತ್ತದೆ. ಆದರೆ, ಬ್ಯಾಂಕ್ ಗಳು ಪ್ರತಿಯೊಬ್ಬ ಗ್ರಾಹಕನ ಕ್ರೆಡಿಟ್ ಸ್ಕೋರ್ ಮೇಲೆ ಗಮನವಿಟ್ಟಿರುತ್ತದೆ. ಅಷ್ಟಕ್ಕೂ ಈ ಕ್ರೆಡಿಟ್ ಸ್ಕೋರ್ ಎಂದರೆ ಏನು..? ಕ್ರೆಡಿಟ್ ಸ್ಕೋರ್ ಎಷ್ಟು ಮುಖ್ಯ..? ಕ್ರೇಡಿಟ್ ಸ್ಕೂರ್ ಯಾಕೆ ಬೇಕು.? ಎಂಬ ಹಲವು ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಮೂಡಿರಬಹುದು. ಆದರೆ, ಇದಕ್ಕೆ ಸರಿಯಾದ ಉತ್ತರ ಸಿಕ್ಕಿರದೇ ಇರಬಹುದು ಕೂಡ. ಅಂತಹವರು ಈ ಲೇಖನವನ್ನು ಓದಿ, ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಿ..
ಕ್ರೆಡಿಟ್ ಸ್ಕೋರ್ ಒಬ್ಬ ವ್ಯಕ್ತಿ ಸಾಲ ಪಡೆಯಲು ಎಷ್ಟು ಅರ್ಹ ಎಂದು ತಿಳಿಯಲು ಸಹಾಯ ಮಾಡುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿ ಸಾಲ ಪಡೆಯಬೇಕೆಂದರು ಮೊದಲು ಆ ಸಂಸ್ಥೆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುತ್ತದೆ. 300 ರಿಂದ 900 ವರೆಗೂ ಕ್ರೆಡಿಟ್ ಸ್ಕೋರ್ ಇರುತ್ತದೆ. ಇದು ವ್ಯಕ್ತಿ ಸಾಲ ಪಡೆದರೆ ಅದನ್ನು ಹಿಂದಿರುಗಿಸುವ ಸಾಮರ್ಥ್ಯವಿದೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಸಾಲ ಪಡೆಯುವ ಗ್ರಾಹಕನ ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ, ಆತನ ಸಾಲದ ಅರ್ಜಿ ತಿರಸ್ಕಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.
ಗ್ರಾಹಕನ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಸಾಲದಾತ ತನ್ನ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಸಾಲಗಾರ, ತಪ್ಪದೇ ಹಣವನ್ನು ಹಿಂದಿರುಗಿಸುವ ನಂಬಿಕೆಯನ್ನು ಈ ಕ್ರೆಡಿಟ್ ಸ್ಕೋರ್ ನೀಡುತ್ತದೆ. ಪಡೆದ ಸಾಲನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸಿದರೆ, ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಆಗ ದೊಡ್ಡ ದೊಡ್ಡ ಬ್ಯಾಂಕ್ ಗಳಲ್ಲಿ ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಕೂಡ ಸಹಾಯವಾಗುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಮರುಪಾವತಿ ಬಗ್ಗೆ ಮಾಹಿತಿ ಇರುತ್ತದೆ. ವ್ಯಕ್ತಿ ಎಷ್ಟು ವರ್ಷದಿಂದ ಸಾಲವನ್ನು ಪಡೆಯುತ್ತಿದ್ದಾನೆ. ಅದನ್ನು ಹೇಗೆ ಮರುಪಾವತಿ ಮಾಡಿದ್ದಾನೆ. ಎಂಬುದರ ಬಗ್ಗೆ ಸಾಲ ನೀಡುವ ಬ್ಯಾಂಕ್ ಗಳು ಮಾಹಿತಿಯನ್ನು ಕಲೆ ಹಾಕುತ್ತವೆ.
ಇನ್ನು ಗೃಹಸಾಲ ಪಡೆಯಲು ಒಲ್ಳೆಯ ಕ್ರೆಡಿಟ್ ಸ್ಕೋರ್ ಇರಬೇಕು. 750ಕ್ಕೂ ಅಧಿಕ ಕ್ರೆಡಿಟ್ ಸ್ಕೋರ್ ಇದ್ದರೆ, ಉತ್ತಮವಾದ ಬ್ಯಾಂಕ್ ನಲ್ಲಿ ಗೃಹಸಾಲವನ್ನು ಪಡೆಯಬಹುದು. ಸಾಲ ನೀಡುವ ಮುನ್ನ ಎನ್ʼಬಿಎಫ್ʼಸಿಗಳು ಹಾಗೂ ಬ್ಯಾಕ್ ಸಾಲ ಕೊಡುವ ಮೊದಲು ಗ್ರಾಹಕನ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲನೆ ಮಾಡುತ್ತದೆ. ಆರ್ಥಿಕ ಪರೀಸ್ಥಿತಿ ಉತ್ತಮವಾಗಿದ್ದು, ಕ್ರೆಡಿಟ್ ಸ್ಕೋರ್ ಕೂಡ ಚೆನ್ನಾಗಿದ್ದರೆ, ಬ್ಯಾಂಕ್ ಗಳೇ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಲು ಮುಂದೆ ಬರುತ್ತವೆ. ದೊಡ್ಡ ಮೊತ್ತದ ಸಾಲವನ್ನು ದೀರ್ಘಾವಧಿಕಾಲಕ್ಕೆ ಸಾಲ ನೀಡಲು ಕೂಡ ಬ್ಯಾಂಕ್ ಗಳು ಮುಂದಾಗುತ್ತವೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ತ್ವರಿತವಾಗಿ ಸಾಲವನ್ನು ನೀಡಲು ಬ್ಯಾಂಕ್ ಗಳು ಮುಂದೆ ಬರುತ್ತವೆ. ಗ್ರಾಹಕನಿಂದ ಹಣ ಮರುಪಾವತಿ ಸುಲಭವಾಗುತ್ತದೆ ಎಂಬುದು ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತದೆ. ಅಲ್ಲದೇ, ಅತ್ಯತ್ತಮ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕನಿಗೆ ಸಾಲ ನೀಡುವಾಗ ಹಲವು ರಿಯಾಯಿತಿಗಳನ್ನು ಕೂಡ ನೀಡುತ್ತದೆ. ಹಾಗಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿಸಿಕೊಳ್ಳಿ. ಅಲ್ಲದೇ, ಸಾಲ ಪಡೆಯುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಇದು ನಿಮಗೆ ಸಹಾಯವಾಗುತ್ತದೆ.