ಬೆಂಗಳೂರು, ಮೇ. 18 : ವಂಶಾವಳಿ ಪ್ರಮಾಣ ಪತ್ರವನ್ನು ಪಡೆಯಲು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅನ್ನು ಹೊಂದಿರಬೇಕು. 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್ ಮೇಲೆ ಕ್ರಮಬದ್ಧವಾಗಿ ನೋಟರಿ ಮಾಡಿಸಿ ಹೇಳಿಕೆಯನ್ನು ದಾಖಲಿಸಬೇಕಾಗುತ್ತದೆ. ಇ- ಸ್ಟ್ಯಾಂಪ್ ಪೇಪರ್ ನಲ್ಲಿ ಏನೆಲ್ಲ ಮಾಹಿತಿ ಇರಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಮೊದಲಿಗೆ ನೀವು ವಿಷಯ ತಿಳಿಸಬೇಕು. ವಿಷಯ: ಕುಟುಂಬ ಸದಸ್ಯರ ವಂಶಾವಳಿ ಪ್ರಮಾಣ ಪತ್ರ ನೀಡುವ ಬಗ್ಗೆ ಎಂದು ಬರೆಯಬೇಕು. ನಂತರ ನಾನು ರಾಮಣ್ಣ ತಂದೆ ಮಾಚಯ್ಯ ವಯಸ್ಸು 65, ಉದ್ಯೋಗ ವ್ಯವಸಾಯ. ಮು|| ಕಲ್ಕೆರೆ ತಾ|| ತುರುವೇಕೆರೆ ಜಿ|| ತುಮಕೂರು ಇದ್ದು, ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳವದೆನೆಂದರೆ ನಮ್ಮ ಕುಟುಂಬ ವಂಶಾವಳಿ ಈ ಕೆಳಗಿನ ನಂತೆ ಇರುತ್ತದೆ.
ಕ್ರಮ ಸಂಖ್ಯೆ | ಕುಟುಂಬ ಸದಸ್ಯರ ಹೆಸರು | ವಯಸ್ಸು | ಅರ್ಜಿದಾರರಿಗೆ ಸಂಬಂಧ | ಮದುವೆ |
1 | ರಾಮಣ್ಣ | 65 | ಅರ್ಜಿದಾರ | ವಿವಾಹಿತ |
2 | ಸೋಮಣ್ಣ | 64 | ತಮ್ಮ | ವಿವಾಹಿತ |
3 | ಸಾಗರ್ | 25 | ತಮ್ಮನ ಮಗ | ಅವಿವಾಹಿತ |
4 | ನಾಗೇಶ್ | 26 | ಮಗ | ಅವಿವಾಹಿತ |
ಈ ರೀತಿಯಾಗಿ ನಮ್ಮ ಕುಟುಂಬ ವಂಶಾವಳಿ ಇರುತ್ತದೆ, ಕಾರಣ ತಾವು ನನಗೆ ಜಮಿನು ಪಾಲು ಮಾಡಿಕೊಳ್ಳಲು ವಂಶಾವಳಿ ಪ್ರಮಾಣ ಪತ್ರ ನಿಡಬೇಕಾಗಿ ವಿನಂತಿ, ಈ ಮೇಲಿನ ಎಲ್ಲಾ ಹೇಳಿಕೆಗಳು ಸತ್ಯದಿಂದ ಕೂಡಿರುತ್ತದೆಂದು ನಾನು ನ್ಯಾಯಾಲಯ ದೆವರ ಮುಂದೆ ಸಾಕ್ಷಿಯಾಗಿ ಪ್ರಮಾಣ ಕರಿಸಿದ್ದಾಗಿದ್ದು ನಿಜವಿರುತ್ತೇ, ಅದರಂತೆ ನನ್ನಿಂದ ವಂಶವೃಕ್ಷ ಕ್ಕಾಗಿ ನೀಡಿರುವ ಮೇಲಿನ ಅಂಶಗಳು ಸತ್ಯವಾಗಿದೆ, ಒಂದು ವೇಳೆ ತಪ್ಪೆಂದು ಕಂಡುಬಂದಲ್ಲಿ ನಾನು ಯಾವುದೇ ಕಾಯ್ದೆ ಅನ್ವಯ ಶಿಕ್ಷೆಗೆ ಅರ್ಹನಾಗಿರುತ್ತನೆಂದೆ ಪ್ರಮಾಣಿಕರಿಸಿದ್ದು ನಿಜವಿರುತ್ತೆ.!
ಸ್ಥಳ: ತುರುವೇಕೆರೆ ದಿನಾಂಕ: 16 ನವೆಂಬರ್ 2022
ಅರ್ಜಿದಾರರು
ವಂಶಾವಳಿ ಪ್ರಮಾಣ ಪತ್ರ ಬೇಕಾದ್ರೆ ಈ ರೀತಿ ಕುಟುಂಬದ ಮಾಹಿತಿ ಬರೆಯಬೇಕು. ನಂತರ ಈ ಸ್ಟ್ಯಾಂಪ್ ಪೇಪರ್ ಅರ್ಜಿದಾರರ ಹೆಸರಿರಬೇಕು. ಈ ರೀತಿಯಾಗಿ ವಂಶಾವಳಿ ಪತ್ರವನ್ನು ಮಾಡಿಸಬೇಕು. ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದೇ ಹೋದಲ್ಲಿ, ವೋಟರ್ ಐಡಿ, ಬೇರೆ ಯಾವುದೇ ಐಡೆಂಟಿಟಿ ಕಾರ್ಡ್ ಇದ್ದರೆ ಸಾಕು.
ಒಂದು ವೇಳೆ ನೀವೇನಾದರೂ ವಂಶಾವಳಿಯಲ್ಲಿ ಯಾರದ್ದಾದರೂ ಹೆಸರು ಬಿಟ್ಟರೆ, ಅದರಿಂದ ಸಮಸ್ಯೆ ಅನ್ನು ಎದುರಿಸಬೇಕಾಗುತ್ತದೆ. ಇನ್ನು ವಂಶಾವಳಿ ಪತ್ರವನ್ನು ಮಾಡಿಸುವಾಗ ಕಾರಣವನ್ನು ಕಡ್ಡಾಯವಾಗಿ ತಿಳಿಸಬೇಕು. ವಂಶಾವಳಿ ಪ್ರಮಾಣ ಪತ್ರವನ್ನು ಜಮೀನು ವಿವಾದ, ಜಮೀನು ವಿಭಾಗ ಹಾಗೂ ಅನುಕಂಪದ ಅಗತ್ಯವಿದ್ದಾಗ ವಂಶಾವಳಿ ಪ್ರಮಾಣ ಪತ್ರವನ್ನು ಮಾಡಿಸಬಹುದಾಗಿದೆ.