20.8 C
Bengaluru
Thursday, December 5, 2024

ವಾಸ್ತು ಪ್ರಕಾರ ಭಾರತೀಯರು ದಕ್ಷಿಣ ದಿಕ್ಕಿತಲೆ ಇಟ್ಟು ಮಲಗಬೇಕು ಯಾಕೆ..?

ಬೆಂಗಳೂರು, ಫೆ. 11 : ಭಾರತೀಯರು ಸಾಕ್ಷಟು ಸಂಸಕೃತಿಗಳು, ಶಾಸ್ತ್ರಗಳನ್ನು ಪೂರ್ವ ಕಾಲದಿಂದಲೂ ಪಾಲಿಸಿಕೊಂಡು ಬಂದಿದ್ದೇವೆ. ಬೆಳಗೆದ್ದ ಕೂಡಲೆ, ದೇವರಿಗೆ ನಮಿಸಬೇಕು. ದೊಡ್ಡವರಿಗೆ ಗೌರವಿಸಬೇಕು ಎಂಬ ಸಂಸ್ಕೃತಿ ಹುಟ್ಟಿನಿಂದಲೇ ಪ್ರತಿಯೊಬ್ಬರಲ್ಲೂ ಬರುತ್ತದೆ. ಇನ್ನು ಶಾಸ್ತ್ರಗಳನ್ನು ಪಾಲಿಸುವ ನಾವು, ಯಾವ ದಿಕ್ಕಿಗೆ ಏಲಬೇಖು, ಮನೆಯ ಬಾಗಿಲ ದಿಕ್ಕು ಯಾವುದಿರಬೇಕು, ಪೂಜಾ ಕೊಠಡಿ ವಾಸ್ತು ಪ್ರಕಾರ ಹೇಗಿರಬೇಕು ಎಂಬುದನ್ನೆಲ್ಲಾ ಪಾಲಿಸುವುದರ ಜೊತೆಗೆ ಕೆಲ ಶಾಸ್ತ್ರ ಹಾಗೂ ನಿಯಮಗಳನ್ನು ನಂಬುತ್ತೇವೆ. ಇನ್ನು ಭಾರತೀಯರ ಶಾಸ್ತ್ರಗಳ ಬಗ್ಗೆ ಈಗಾಗಲೇ ವಿಜ್ಞಾನಿಗಳು ಕೂಡ ಅಚ್ಚರಿ ಪಟ್ಟಿದ್ದಾರೆ.

ಭಾರತೀಯರ ಸಂಸ್ಕೃತಿ ಹಾಗೂ ಅವರು ಪಾಲಿಸುವ ಕೆಲ ರೀತಿ-ನೀತಿಗಳಿಗೆ ಬಹಳ ಅರ್ಥವಿದೆ ಎಂಬುದನ್ನು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ ಭಾರತೀಯರು ಗ್ರಹಣ ಹಿಡಿದಾಗ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹಾಗೆಯೇ ಗರ್ಭಿಣಿಯರು ಹಾಗೂ ಮಕ್ಕಳು ಮನೆಯ ಹೊರಗೆ ಬಂದು ನೇರವಾಗಿ ಸೂರ್ಯನ ಕಿರಣಗಳಿಗೆ ಕಾಣಿಸುಕೊಳ್ಳುವುದಿಲ್ಲ. ಹಾಗೆ ಮಾಡುವುದರಿಂದ ಸಮಸ್ಯೆ ಆಗುತ್ತದ ಎಂಬುದನ್ನು ವಿಜ್ಞಾನವೂ ಹೇಳುತ್ತದೆ. ಈಗ ನಾವು ರಾತ್ರಿ ಹೊತ್ತುನಲ್ಲಿ ಮಲಗುವಾಗ ಸಾಮಾನ್ಯವಾಗಿ ದಕ್ಷಿಣ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗುತ್ತೇವೆ. ಇದಕ್ಕೆ ಕಾರಣವೇನು..? ಅದರಲ್ಲೂ ಭಾರತೀಯರು ದಕ್ಷಿಣಕ್ಕೆ ತಲೆ ಹಾಕಿ ಮಲಗಬೇಕು ಯಾಕೆ ಎಂಬುದಕ್ಕೆ ಉತ್ತರ ಕಂಡುಕೊಳ್ಳೋಣ ಬನ್ನಿ.

ಅಗತ್ಯವಾಗಿ ಬೆಳದಿರುವಂತಹ ವ್ಯಕ್ತಿಗಳು ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಖು. ಇನ್ನು ಓದುವ ಮಕ್ಕಳು, ಅಂದರೆ, ಮದುವೆಯಾಗುವವರೆಗೂ ಪೂರ್ವದಲ್ಲಿ ತಲೆ ಇಟ್ಟು ಮಲಗಿದರೂ ಪರವಾಗಿಲ್ಲ ಎನ್ನುತ್ತಾರೆ. ಪಶ್ಚಿಮದಲ್ಲಿ ತಲೆ ಇಟ್ಟು ಮಲಗಿದರೆ, ಕೋಣೆಯಲ್ಲಿ ಶನಿಪ್ರಭಾವ ಇರುವುದರಿಂದ ನಿದ್ದೆ ಸರಿಯಾಗುವುದಿಲ್ಲ. ಅನವಶ್ಯಕ ಅಥವಾ ಬೇಡದ ಕನಸುಗಳು ಬರುತ್ತವೆ ಎಂದು ಹೇಳಲಾಗಿದೆ. ಈ ರೀತಿ ಕನಸು ಬೀಳುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ನಿದ್ರೆ ಸರಿಯಾಗಿ ಆಗದಿದ್ದರೆ, ಬೆಳಗ್ಗೆ ಎದ್ದಾಗ ಫ್ರೆಶ್ನೆಸ್ ಇರುವುದಿಲ್ಲ. ಇದರಿಂದ ಇಡೀ ದಿನ ಸಮಾಧಾನವಾಗಿ ಇರುವುದಿಲ್ಲ. ಹಾಗಾಗಿ ಪಶ್ಚಿಮದಲ್ಲಿ ತಲೆ ಇಟ್ಟು ಮಲಗಿದರೆ, ಅಶುಭವಾಗುತ್ತೆ ಎಂಬುದು ಇದೇ ಕಾರಣಕ್ಕಾಗಿಯೇ.

ಇನ್ನು ಉತ್ತರದಲ್ಲಿ ಯಾಕೆ ತಲೆಯನ್ನು ಇಟ್ಟು ಮಲಗಬಾರದು ಎಂದರೆ, ಭಾರತೀಯ ಸಂಸ್ಕೃತಿಯಲ್ಲಿ ಮಹಾಭಾರತದಲ್ಲಿ ಭೀಷನನ್ನು ಅರ್ಜುನ ಕೊಂದಾಗ ಅಅವರು ತಮ್ಮ ಸಾವನ್ನ ಉತ್ತರಾಯಣಕ್ಕಾಗಿ ಕಾಯುತ್ತಿದ್ದರು. ಇನ್ನು ಇದರೊಂದಿಗೆ ಜೀವಂತವಾಗಿ ಇರುವಾಗ ಮರಣವನ್ನು ಅಪೇಕ್ಷಿಸಿದರೆ, ಆತನಿಗೆ ಚರ್ಮ ಶ್ಲೋಕವನ್ನು ಆತನ ಎದುರಿಗೆ ಹೇಳುತ್ತೇವೆ. ಅದನ್ನು ಮಾಡಿದರೆ, ಆತನಿಗೆ ಮರಣ ಬರುತ್ತೆ ಎನ್ನಲಾಗಿದೆ. ಹಾಗೆ ಸಾವನ್ನು ಅಪೇಕ್ಷಿಸುವವನು ಉತ್ತರಕ್ಕೆ ತಲೆ ಹಾಕಿ ಮಲಗಿಕೊಂಡು ಚರ್ಮ ಶ್ಲೋಕವನ್ನು ಕೇಳಿದರೆ, ಮೃತ್ಯು ಬೇಗ ಆವರಿಸುತ್ತದೆ ಎಂದು ಹೇಳಲಾಗಿದೆ.

Related News

spot_img

Revenue Alerts

spot_img

News

spot_img