26.7 C
Bengaluru
Sunday, December 22, 2024

ಜಗತ್ತಿನಲ್ಲಿ ವಾಸಿಸಬಹುದಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನವಿದೆ..?

ಬೆಂಗಳೂರು, ಜೂ. 23 : ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಬಗ್ಗೆ ತಿಳಿಯೋಣ. ಜಗತ್ತಿನ ಎಲ್ಲಾ ಪ್ರಮುಖ ನಗರಗಳಲ್ಲಿ ವಾಸಿಸಿಲು ಯೋಗ್ಯವಾದ ನಗರಗಳನ್ನು ಆರಿಸುವುದಾದರೆ ಯಾವೆಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲು ನೋಡೋಣ. ಜೀವನದ ಗುಣಮಟ್ಟ, ನಗರದ ಆರ್ಥಿಕ ಸಾಮರ್ಥ್ಯ ಮತ್ತು ಸುಸ್ಥಿರತೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಆಶ್ರಯ ಇತ್ಯಾದಿಗಳಂತಹ 13 ವರ್ಗಗಳ ಆಧಾರದ ಮೇಲೆ ಮಾನದಂಡಗಳನ್ನು ಪಟ್ಟಿ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಲಾಗುತ್ತದೆ.

173 ನಗರಗಳಲ್ಲಿ ಅತ್ಯಂತ ವಾಸಯೋಗ್ಯ ನಗರಗಳನ್ನು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಜಾಗತಿಕ ಲಿವೆಬಲಿಟಿ ಇಂಡೆಕ್ಸ್ ಪ್ರಕಾರ ಆಯ್ಕೆ ಮಾಡಲಾಗಿದೆ. ಈ ಶ್ರೇಯಾಂಕಗಳು ಜೀವನದ ಗುಣಮಟ್ಟ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ, ಶಿಕ್ಷಣ ಮತ್ತು ಇನ್ನೂ ಹೆಚ್ಚಿನದನ್ನು ಗಮನದಲ್ಲಿಟ್ಟುಕೊಂಡು ನಗರಗಳನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಒಟ್ಟು 5 ನಗರಗಳನ್ನು ವಾಸಿಸಲು ಯೋಗ್ಯವಾದ ನಗರಗಳು ಎಂದು ಗುರುತಿಸಲಾಗಿದೆ.

ಜಗತ್ತಿನಲ್ಲಿ ವಾಸಯೋಗ್ಯವಾಗಿರುವ ನಗರಗಳಲ್ಲಿ ಮೊದಲನೇ ಸ್ಥಾನವನ್ನು ವಿಯೆನ್ನಾ ಪಡೆದುಕೊಂಡಿದೆ. ಇನ್ನು ಭಾರತದಲ್ಲಿನ ಐದು ನಗರಗಳು ಬಹಳ ಹಿಂದೆ ಉಳಿದುಕೊಂಡಿದೆ. ದೆಹಲಿ ಮತ್ತು ಮುಂಬೈ ನಗರ 141ನೇ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ 144ನೇ ಸ್ಥಾನವನ್ನು ಪಡೆದು ಖುಷಿಪಟ್ಟಿದ್ದರೆ, ಅಹಮದಾಬಾದ್ ನಗರವು 147ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೆ, ಬೆಂಗಳೂರು ನಗರ 148ನೇ ಸ್ಥಾನವನ್ನು ಪಡೆದಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.

ಯಾಕೆಂದರೆ, ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ 2022 ಪ್ರಕಾರ ಭಾರತದಲ್ಲಿ ವಾಸಲು ಯೋಗ್ಯವಾದ ಪಟ್ಟಿಯಲ್ಲಿ ಬೆಂಗಳುರು ನಗರ ಮೊದಲನೇಯಸ್ಥಾನವನ್ನು ಪಡೆದುಕೊಂಡಿತ್ತು. ಭಾರತದಲ್ಲಿ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರು ಸದಾ ತನ್ನ ಸಂಪೂರ್ಣ ಪರಿಪೂರ್ಣತೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಆದರೆ, ಜಗತ್ತಿನಲ್ಲಿ ವಾಸಿಸಲು ಯೋಗ್ಯವಾದ ಸ್ಥಳದ ಪಟ್ಟಿಯಲ್ಲಿ 148ನೇ ಸ್ಥಾನವನ್ನು ಪಡೆದುಕೊಂಡಿದೆ.

Related News

spot_img

Revenue Alerts

spot_img

News

spot_img