World’s Smallest house:ಜಗತ್ತಿನ ಅತಿ ಚಿಕ್ಕ ಮನೆ ಎಲ್ಲಿದೆ ? ಅದರ ಬಗ್ಗೆ ಎಷ್ಟು ಗೊತ್ತು ?
ಬೆಂಗಳೂರು, ಜ. 06 : ಎಲ್ಲರೂ ತಾವು ವಾಸಿಸುವ ಮನೆ ಆದಷ್ಟು ದೊಡ್ಡದಾಗಿರಬೇಕು ಎಂದು ಬಯಸುತ್ತಾರೆ. ಏಕೆಂದರೆ, ಮನೆ ವಿಶಾಲವಾಗಿರಬೇಕು. ಹೊರಗಿನಿಂದ ಬಂದಾಗ ಮನೆ ಚಿಕ್ಕದಾಗಿದ್ದರೆ, ಹಿಂಸೆಯಾಗುತ್ತದೆ. ಹಾಗಾಗಿ ಮನೆ ವಿಶಾಲವಾಗಿದ್ದರೆ, ಮನೆಯಲ್ಲಿ ಎಷ್ಟು ಜನರಿದ್ದರೂ ತೊಂದರೆ ಆಗುವುದಿಲ್ಲ ಎಂಬುದು ಹಲವರ ಆಲೋಚನೆ. ಆದರೆ ನಾವೀಗ ಹೇಳುವುದಕ್ಕೆ ಹೊರಟಿರುವುದು ಡಿಫರೆಂಟ್ ಕಥೆಯನ್ನು. ಇಲ್ಲೊಬ್ಬ ವ್ಯಕ್ತಿ ತನ್ನ ಎತ್ತರಕ್ಕಿಂತಲೂ ಅರ್ಧದಷ್ಟು ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾನೆ. ಜಗತ್ತಿನ ಅತೀ ಚಿಕ್ಕ ಮನೆ ಇದಗಿದ್ದು, ಈ ಮನೆ ವ್ಯಾನ್ ಒಳಗೆ ತೂರುತ್ತದೆ. ಬನ್ನಿ ಹಾಗಿದ್ದರೆ ಅಷ್ಟು ಚಿಕ್ಕಮನೆಯಲ್ಲಿ ಏನಿದೆ.? ಏನಿಲ್ಲ.? ಅಲ್ಲಿ ವಾಸಿಸುತ್ತಿರುವವರು ಯಾರು ಎಂಬುದನ್ನೆಲ್ಲಾ ನೋಡೋಣ.
ಈ ಮನೆ ಎಷ್ಟು ಚಿಕ್ಕದಿದೆ ಎಂದರೆ ನೀವು ಊಹಿಸಲೂ ಸಾಧ್ಯವಿಲ್ಲ. ಕೇವಲ 25 ಚದರಡಿಯಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಈ ಮನೆಯನ್ನು ನಿರ್ಮಿಸಲು ಬರೋಬ್ಬರಿ ಎರಡು ವರ್ಷಗಳ ಕಾಲ ಸಮಯವನ್ನು ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ಒಬ್ಬ ವ್ಯಕ್ತಿ ವಾಸಿಸಲು ಬೇಕಾಗಿರುವ ಪ್ರತಿಯೊಂದು ವಸ್ತುಗಳೂ ಇವೆ. ವಾಶ್ ಬೇಸಿನ್, ಅಡುಗೆಗ ಬರ್ನರ್, ಸ್ನಾನಕ್ಕೆ ಶವರ್, ವೆಸ್ಟರ್ನ್ ಟಾಯ್ಲೆಟ್, ಸೊಪ್ಪು ಬೆಳೆಯಲು ಪಾಟ್ ಸೇರಿದಂತೆ ಎಲ್ಲವೂ ಇದೆ. ಈ ಮನೆಯನ್ನು ನೀವು ನೋಡಿದರೆ, ಇಲ್ಲಿ ವಾಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಬಹುದು ಆದರೆ, ಇಲ್ಲೂ ವಾಸ ಮಾಡಬಹುದು ಎಂದು ಗ್ಲೆನ್ ಬೆನ್ಸನ್ ತೋರಿಸಿಕೊಟ್ಟಿದ್ದಾರೆ.
ಈ ಮನೆಯನ್ನು ಎಲ್ಲೆಂದರಲ್ಲಿಗೆ ಕೊಂಡೊಯ್ಯಬಹುದು. ಆಫೀಸ್ ಬಳಿಯೇ ಈ ಮನೆಯನ್ನು ತೆಗೆದುಕೊಂಡು ಹೋದರೆ, ಕಚೇರಿಗೆ ರೆಡಿಯಾಗಿ ಹೋಗುವುದು ಲೇಟ್ ಸಹ ಆಗುವುದಿಲ್ಲ. ದೂರದ ಪ್ರಯಾಣ ಮಾಡಬೇಕು ಎಂದಾಗಲೂ ಈ ಮನೆಯನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗಬಹುದು. ಆಗ ಪ್ರವಾಸಕ್ಕಾಗಿ ಬಟ್ಟೆಗಳನ್ನು ಪ್ಯಾಕ್ ಮಾಡಬೇಖು ಎಂಬ ತಲೆ ನೋವು ಕೂಡ ಇರುವುದಿಲ್ಲ. ಈ ಮನೆಗೆ ವೀಲ್ ಗಳು ಕೂಡ ಇದೆ. ಹಾಗಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯಲು ಸಮಸ್ಯೆಯೂ ಆಗುವುದಿಲ್ಲ. ಸುಲಭವಾಗಿ ತನ್ನ ಜೊತೆಗೆ ಮನೆಯನ್ನೂ ತೆಗೆದುಕೊಂಡು ಹೋಗಬೇಕು.
ಈ ಮನೆಯನ್ನು ನಿರ್ಮಿಸಿದ್ದು ಜೆಫ್ ಸ್ಮಿತ್. ಈ ಮನೆಯ ವಿನ್ಯಾವನ್ನು ಮಾಡಿದ್ದು ಬಾಸ್ಟನ್ ಎಂಬ ಆರ್ಟಿಸ್ಟ್. ಈ ಮನೆಯ ನಿರ್ಮಾಣಕ್ಕೆ ಎರಡು ವರ್ಷಗಳ ಸಮಯವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಈ ಮನೆಗೆ ಬಳಸಿರುವ ವಸ್ತುಗಳೆಲ್ಲವೂ ರಿಸೈಕಲ್ ಮಾಡಿ. ಕೆಲ ಮರದ ತುಂಡುಗಳನ್ನು ಬಳಸಿ ಮನೆಯ ವಿನ್ಯಾಸ ಮಾಡಲಾಗಿದೆ. ಈ ಮನೆಯೊಳಗೆ ಚಿಕ್ಕದೊಂದು ವಾಶ್ ಬೇಸಿನ್ ಇದೆ. ಬರ್ನರ್ ಕೂಡ ಇದ್ದು, ಅಡುಗೆಯನ್ನೂ ಮಾಡಿಕೊಳ್ಳಬಹುದು. ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ಈ ಮನೆ ನಿರ್ಮಾಣ ಮಾಡುವಾಗ ಪ್ಲಾನ್ ಮಾಡಲಾಗಿದೆ. ಇನ್ನು ಈ ಮನೆಯಲ್ಲಿ ಗ್ಲೆನ್ ಬೆನ್ಸನ್ ವಾಸವಿದ್ದು, ಖುಷಿಯಿಂದ ಇದ್ದಾರೆ.
ಈ ಮನೆಯನ್ನು ನಿರ್ಮಿಸಿದ ಬಳಿಕ ಗ್ಲೆನ್ ಬೆನ್ಸನ್ ಅವರು ಎಲ್ಲೆಂದರಲ್ಲಿಗೆ ಕೊಂಡೊಯ್ಯುತ್ತಿದ್ದರಂತೆ. ಆದರೆ, ಪೊಲೀಸರು ಈ ಮನೆಯನ್ನು ಇಲ್ಲಿ ಪಾರ್ಕ್ ಮಾಡುವಂತಿಲ್ಲ ಎಂದು ಸ್ವಲ್ಪ ಕಿರಿಕಿರಿ ಮಾಡುತ್ತಿದ್ದರು ಬಿಟ್ಟರೆ, ಗ್ಲೆನ್ ಬೆನ್ಸನ್ ಅವರಿಗೆ ಯಾವುದೇ ಸಮಸ್ಯೆಗಳಾಗಲಿಲ್ಲವಂತೆ. ಚಿಕ್ಕ ಮನೆಯಲ್ಲಿ ವಾಸ ಮಾಡಲು ಮೊದಲು ಆತಂಕವಿದ್ದರೂ, ಈಗ ಅರಾಮಾವಾಗಿದೆ ಎಂದು ಗ್ಲೆನ್ ಹೇಳಿದ್ದಾರೆ. ಇನ್ನು ಈ ಮನೆ 500 ಪೌಂಡ್ಸ್ ಇದೆ. ಅಂದರೆ 228.8 ಕೆಜಿ ತೂಗುತ್ತದೆ. ಈ ಮನೆ 7.325 ಅಡಿ ಉದ್ದ, 3.675 ಅಡಿ ಅಗಲ ಹಾಗೂ 3 ಅಡಿ ಎತ್ತರವಿದೆ. ಈ ಮನೆಯ ಬಗ್ಗೆ ತಿಳಿದ ಮೇಲೆ ಹಲವರು ಆಶ್ಚರ್ಯ ಪಟ್ಟಿದ್ದೂ ಇದೆ.