20.4 C
Bengaluru
Saturday, November 23, 2024

ಶಾಂಘೈ ಸಭೆ :ಆಕ್ರಮಿತ ಕಾಶ್ಮೀರ ಯಾವಾಗ ಖಾಲಿ ಮಾಡುತ್ತೀರಿ ಎಂದು ಪಾಕ್‌ಗೆ ಜೈಶಂಕರ್ ನೇರ ಪಶ್ನೆ!

ಇಂದು SCO (ಶಾಂಘೈ ಸಹಕಾರ ಸಂಸ್ಥೆ) ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ‌ ಪಾಕಿಸ್ತಾನದ ವಿರುದ್ಧ ಟೀಕಾಪ್ರಹಾರ ನಡೆಸಿದರು.ಪಾಕಿಸ್ತಾನ ಜಿ 20 ಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಾನು ಹಿಂದೆಯೇ ಹೇಳಿದ್ದೇನೆ.

ಅವರಿಗೂ ಶ್ರೀನಗರಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳುತ್ತೇನೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜೊತೆ ಚರ್ಚಿಸಲು ಒಂದೇ ಒಂದು ವಿಷಯ ಬಾಕಿ ಇದೆ. ಅದೇನೆಂದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಅಕ್ರಮ ಪ್ರವೇಶವನ್ನು ಯಾವಾಗ ಖಾಲಿ ಮಾಡುತ್ತದೆ ಅನ್ನೋದೊಂದೇ’ ಎಂದು ಜೈಶಂಕರ್ ‌ ಗುಡುಗಿದ್ದಾರೆ.

ತನ್ನ ಮಾತು ಮುಂದುವರಿಸಿದ ಎಸ್‌.ಜೈಶಂಕರ್ ‌, ಎಸ್‌ಸಿಓ ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ, ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಬೇರೆಯವರನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ನೋಡಿಕೊಳ್ಳುತ್ತೇವೆ. ಪಾಕಿಸ್ತಾನದ ಆಧಾರಸ್ತಂಭವಾಗಿರುವ ಭಯೋತ್ಪಾದನಾ ಉದ್ಯಮದ ಪ್ರವರ್ತಕ, ಸಮರ್ಥಕ ಮತ್ತು ವಕ್ತಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. ಆದರೆ, ಅವರು ಇರುವ ಹುದ್ದೆಯನ್ನು ನೋಡಿ ಎಸ್‌ಸಿಒ ಸಭೆಗೆ ಕರೆಯಲಾಯಿತು ಎಂದ ಹೇಳಿದ್ದಾರೆ.

ಈ ವೇಳೆ ಅಲ್ಲಿಯೇ ಕುಳಿತಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ‌ ಭುಟ್ಟೋ ಜರ್ದಾರಿ ಫುಲ್ ಸೈಲೆಂಟ್ ಆಗಿದ್ದರು.ತಾವು ಭಯೋತ್ಪಾದನೆಯಿಂದ ತೊಂದರೆಗೆ ಒಳಗಾದವರು ಭಯೋತ್ಪಾದನೆ ಮಾಡುವ ವ್ಯಕ್ತಿಗಳ ಜೊತೆ ಭಯೋತ್ಪಾದನೆಯ ಬಗ್ಗೆ ಚರ್ಚಿಸಲು ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ. ಭಯೋತ್ಪಾದನೆಯಿಂದ ಹಾನಿಗೆ ಒಳಗಾದವರು ಅವರನ್ನು ರಕ್ಷಣೆ ಮಾಡಿಕೊಳ್ಳಲು ಸಮರ್ಥರಿದ್ದಾರೆ. ಇಲ್ಲಿಗೆ ಬಂದು, ನಾವೂ ಕೂಡ ನಿಮ್ಮಂಥೆ ಒಂದೇ ದೋಣಿಯಲ್ಲಿದ್ದೇವೆ ಎಂದು ಕಪಟ ಪದಗಳನ್ನು ಬೋಧಿಸಲು ಬರಬಾರದು ಎಂದು ಹೇಳಿದರು. ಇಲ್ಲಿಯೇ ಮತ್ತೊಮ್ಮ ಸ್ಪಷ್ಟವಾಗಿ ಹೇಳಿ ಬಿಡುತ್ತೇನೆ, ಜಮ್ಮು ಕಾಶ್ಮೀರ ಹಿಂದೆಯೂ ಭಾರತದ ಭಾಗವಾಗಿತ್ತು. ಮುಂದೆಯೂ ಭಾರತದ ಭಾಗವಾಗಿಯೇ ಇರಲಿದೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದರು.

‘ಅವರು (ಪಾಕ್) ಭಯೋತ್ಪಾದನಾ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂದು ಏನಾಯಿತು ಎಂಬುದರ ಕುರಿತು ನಾನು ಗುಂಡು ಹಾರಿಸಿಲು ಬಯಸೋದಿಲ್ಲ. ಆದರೆ ಈ ವಿಷಯದಲ್ಲಿ ನಾವೆಲ್ಲರೂ ಸಮಾನವಾಗಿ ಆಕ್ರೋಶಗೊಂಡಿದ್ದೇವೆ. ಭಯೋತ್ಪಾದನೆಯ ವಿಷಯದಲ್ಲಿ, ಪಾಕಿಸ್ತಾನದ ವಿಶ್ವಾಸಾರ್ಹತೆ ಅದರ ವಿದೇಶೀ ವಿನಿಮಯ ಮೀಸಲುಗಿಂತಲೂ ವೇಗವಾಗಿ ಕುಸಿಯುತ್ತಿದೆ ಎಂದು ಜೈಶಂಕರ್ ‌ ಕಿಡಿಕಾರಿದರು.
ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹಲವು ವರ್ಷಗಳಿಂದ ಗೊಂದಲದಲ್ಲಿದೆ.

ಯಾವುದೇ ಮಾತುಕತೆಗಾಗಿ ಇಸ್ಲಾಮಾಬಾದ್ ಹಿಂದಿನ ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಲು ಪ್ರಯತ್ನ ಮಾಡುತ್ತಿದೆ. ಆದರೆ, ನೀವು ಎದ್ದು ಈಗ ಕಾಫಿ ಕುಡಿಯಿರಿ. ಯಾಕೆಂದರೆ, ಅದು ಮತ್ತೊಂದು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆ ಅನ್ನೋದು ಸಾಮಾನ್ಯ ವಿಚಾರ ಎನ್ನುವ ಯೋಚನೆಯನ್ನೇ ಮಾಡಬೇಡಿ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.

Related News

spot_img

Revenue Alerts

spot_img

News

spot_img