ಬಿಗ್ ಬಾಸ್ ಮನೆಯಲ್ಲಿ ವಿನಯ್ , ಕಾರ್ತಿಕ್ ಒಂದಾದರೆ ಏನಾಗುತ್ತದೆ? ಇವರಿಬ್ಬರು ಜೊತೆಗೂಡಿ ಆಟವಾಡಿದ್ರೆ ಏನಾಗುತ್ತೆ ಅಥವಾ ಏನಾಗಬಹುದು ಎಂಬ ಪ್ರಶ್ನೆ ಕೆಲವರಿಗೆ ಇದೆ. ಇದಕ್ಕೆ ಸಂಗೀತಾ ಬಳಿ ಬೇರೆಯದ್ದೇ ಆದ ಉತ್ತರ ಇದೆ. ಕಾರ್ತಿಕ್, ವಿನಯ್ ಒಂದಾದ್ರೆ ಏನಾಗುತ್ತೆ ಅಂತ ಸಂಗೀತಾಗೆ ಚೆನ್ನಾಗಿ ಅರಿವಾದಂತಿದೆ. ಇದನ್ನೆ ಸಂಗೀತಾ ಸಾಕಷ್ಟು ಬಾರಿ ಡ್ರೋನ್ ಪ್ರತಾಪ್ ಬಳಿ ನಿವೇದಿಸಿದ್ದರು. ಈ ವಿಷಯ ವೀಕ್ಷಕರಿಗೆ ಗೊತ್ತಾಗ್ತಿದೆ. ಹಾಗಂತ ಸಂಗೀತಾ ಪೊಸೆಸಿವ್ ಆಗಿರೋದು ಕೂಡ ಪಕ್ಕಾ. ತನಗೆ ಆದ್ಯತೆ ಕೊಡಬೇಕು, ತನ್ನ ಜೊತೆ ಚೆನ್ನಾಗಿರಬೇಕು, ಎಲ್ಲರೂ ನನ್ನ ಹೇಳಿದಂತೆ ಕೇಳಬೇಕು ಎನ್ನುವ ಹಂಬಲ ಸಂಗೀತಾಗೆ ಬಹಳಷ್ಟಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಕಾರ್ತಿಕ್ ಅವರಿಗೆ ಸದ್ಯಕ್ಕೆ ಏನಾಗಿದೆ..?
ಇಷ್ಟು ವಾರಗಳ ಕಾಲ ವಿನಯ್ ಮತ್ತೆ ಕಾರ್ತಿಕ್ ಬೇರೆ ಬೇರೆ ತಂಡದಲ್ಲಿ ಆಟ ಆಡಿದ್ದರು. ವಿನಯ್ ಎದುರಾಳಿಯಾಗಿದ್ದಾಗ ಕಾರ್ತಿಕ್ ಆಟ ಮತ್ತು ತಂತ್ರ ಸಾಕಷ್ಟು ಅಗ್ರೆಸ್ಸಿವ್ ಆಗಿ ಕಾಣುತ್ತಿತ್ತು. ಇವಾಗ ವಿನಯ್ ಟೀಂನಲ್ಲಿ ಕಾರ್ತಿಕ್ ಇದ್ದರೆ ಅವರ ಅಗ್ರೆಸ್ಸಿವ್ ನಲ್ಲಿಯೇ ಕಾರ್ತಿಕ್ ಸುಮ್ಮನಾಗುವ ಸಂಭವವಿರುತ್ತೆ. ಆದ್ರೆ ವಿನಯ್ ತಂಡದಲ್ಲಿ ಇರುವವರು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆ ಖಾಲಿ ಮಾಡ್ತಿದ್ದಾರೆ. ಹೀಗಾಗಿ ವಿನಯ್ ಅವರು ತಂಡ ಕಟ್ಕೊಂಡು ಆಟ ಆಡುತ್ತಿದ್ದಾರೆ ಎನ್ನೋದು ಸಂಗೀತಾ ದೂರು ಆಗಿದೆ.
ವೈಯಕ್ತಿಕ ಆಟವಾಡಲೇಬೇಕಾದ ಅಗತ್ಯತೆ ಬಿದ್ದಿದೆ..!
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಇದ್ದಾರೆ ಅಂತ ಜನಗಳಿಗೆ ತೋರಿಸಬೇಕಾದ ಅವಶ್ಯಕತೆ ಇದೆ ಹಾಗಾದಲ್ಲಿ ಮಾತ್ರ ಜನರಿಂದ ವೋಟ್ಸ್ ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಎಲಿಮಿನೇಟದ ಆಗೋದು ಪಕ್ಕಾ. ಮನೆಯಕಲ್ಲಿ ಏರುಧ್ವನಿ , ಕೊಟ್ಟ ಟಾಸ್ಕ್ ಅನ್ನ ಸರಿಯಾದ ರೀತಿಯಲ್ಲಿ ಆಟಡಿ ಜನತೆಯ ಮನ ಗೆದ್ದಾಗ ಮಾತ್ರ ಬಿಗ್ ಬಾಸ್ ನಲ್ಲಿ ಫೈನಲ್ ಗೆ ಹೋಗಬಹುದು ಎನ್ನೋದು ಪ್ರೇಕ್ಷಕರ ಮನದ ಮಾತುಗಳು..!
ವಿನಯ್ ತಂಡದ ವಿರುದ್ಧ ಆಡಲು ಸಂಗೀತಾ ಜೊತೆಗೂಡಿದ ನಮ್ರತಾ..!
ವಿನಯ್ತಂಡಕ್ಕೆ ಹೋದರೆ ಕಾರ್ತಿಕ್ ಅವರು ಸ್ಪರ್ಧಿಯಾಗಿ ಆಟ ಆಡುತ್ತಾರೆ. ಅಲ್ಲಿ ಕಾರ್ತಿಕ್ ಎದ್ದು ಕಾಣುತ್ತಾರೆ, ನಮ್ರತಾ ಆಟ ಕಾಣಿಸೋದಿಲ್ಲ ಹೀಗಾಗಿ ನಮ್ರತಾ ಸಂಗೀತಾ ತಂಡ ಸೇರಿಕೊಂಡಿದ್ದಾರೆ. ವಿನಯ್ ಟೀಂನಲ್ಲಿದ್ದಾಗ ನನ್ನ ಬಲ, ಸಾಮರ್ಥ್ಯ ಏನು ಅಂತ ಗೊತ್ತಾಗಿಲ್ಲ ಅಂತ ನಮ್ರತಾ ಗೌಡ ಅವರೇ ಹೇಳಿದ್ದಾರೆ. ವಿನಯ್ ವಿರುದ್ಧವಾಗಿ ಆಡಿದ ವಾರವೇ ನಮ್ರತಾ ಅವರು ಉತ್ತಮ ಮತ್ತು ಕಿಚ್ಚನ ಚಪ್ಪಾಳೆ ಪಡೆದಿದ್ರು ಹೀಗಾಗಿಯೇ ವಿನಯ್ ವಿರುದ್ಧ ಆಡಲು ನಮ್ರತಾ ಕಣಕ್ಕಿಳಿದಿದ್ದಾರೆ.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು