ಬೆಂಗಳೂರು, ಜು. 08 : ಈಗ ಎಲ್ಲರೂ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುತ್ತಾರೆ. ಬೇಕೆಂದಾಗ ಡ್ರಾ ಮಾಡುತ್ತಾರೆ. ಆದರೆ, ಕೆಲ ಸಂದರ್ಭದಲ್ಲಿ ಹಣವನ್ನು ಎಟಿಎಂ ನಲ್ಲಿ ವಿತ್ ಡ್ರಾ ಮಾಡಿದಾಗ ಹಣ ಬರುವುದಿಲ್ಲ. ಬ್ಯಾಂಕ್ ನಲ್ಲಿ ಲಾಕ್ ಆಗಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ ನಿಮಗೆ ಏನು ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಭಯ ಪಡಬೇಡಿ ನಿಮ್ಮ ಹಣವನ್ನು ಬ್ಯಾಂಕ್ 12ದಿನದೊಳಗೆ ರಿಟರ್ನ್ ಮಾಡುತ್ತದೆ. ಅಕಸ್ಮಾತ್ ಕೊಡದಿದ್ದಲ್ಲಿ ದಂಡವನ್ನೂ ಸೇರಿಸಿ ನಿಮಗೆ ಪರಿಹಾರದ ಮೊತ್ತವನ್ನು ಕೊಡುತ್ತದೆ.
ಎಟಿಎಂ ನಿಂದ ಹಣ ಬಾರದಿದ್ದಾಗ ನೀವು ಆರ್ಬಿಐ ಒಂಬುಡ್ಸ್ಮನ್ಗೆ ದೂರು ಸಲ್ಲಿಸಿ. ಆರ್ಬಿಐ ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ಗೆ ಸೂಚಿಸುತ್ತದೆ. ಬ್ಯಾಮಕ್ ನಿಮಗೆ 12 ದಿನದೊಳಗೆ ಹಣ ನೀಡದಿದ್ದರೆ, ಕಾನೂನಿನ ಪ್ರಕಾರ ದಿನದ ಲೆಕ್ಕದಲ್ಲಿ ದಂಡವನ್ನು ಬ್ಯಾಂಕ್ ಕಟ್ಟಿ ಕೊಡುತ್ತದೆ. ಗ್ರಾಹಕರಿಗೆ ಪ್ರತಿ ದಿನ 100 ರೂ. ಎಂಬಂತೆ ಪರಿಹಾರವನ್ನು ಕೊಡಬೇಕು. ಇದು ಹಣ ವರ್ಗಾವಣೆ ಮಾಡಿದಾಗ ಸಮಸ್ಯೆ ಆದರೂ ಕೂಡ ಇಂಥಹ ಪರಿಹಾರಗಳು ಸಿಗುತ್ತವೆ.
ಆದರೆ, ಯಾವ ಬ್ಯಾಂಕ್ ಕೂಡ ಈ ಬಗ್ಗೆ ಮಾಹಿತಿಯನ್ನು ತಿಳಿಸುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಹಣ ವರ್ಗಾವಣೆ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅಕಸ್ಮಾತ್ ಆಗಿ ತಪ್ಪಾದ ಅಕೌಂಟ್ ಗೆ ಹಣ ವರ್ಗಾವಣೆ ಆದರೆ, ಆ ಖಾತೆಯನ್ನು ಹೊಂದಿರುವ ವ್ಯಕ್ತಿಯ ಒಪ್ಪಿಗೆ ಇಲ್ಲದೇ ಅವರ ಖಾತೆಯಿಂದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ಹಣವನ್ನು ಹಿಂದಿರುಗಿಸಲು ಒಪ್ಪಿಗೆ ಕೊಟ್ಟರೆ, ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಇಲ್ಲವೇ ಆ ವ್ಯಕ್ತಿ ಹಣವನ್ನು ಹಿಂದಿರುಗಿಸಲು ಒಪ್ಪದೇ ಇದ್ದರೆ, ನೀವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಹಣ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಬೇಕು.