19.9 C
Bengaluru
Friday, November 22, 2024

ದಸ್ತಾವೇಜು ಬರೆದುಕೊಟ್ಟವರು ಒಪ್ಪಿಗೆ ಸೂಚಿಸಲಿಕ್ಕೆ ನೋಂದಣಿ ಕಛೇರಿಗೆ ಬರಲು ನಿರಾಕರಿಸಿದರೆ ಏನು ಮಾಡಬೇಕು?

* ಇಂಥಾ ಪ್ರಸಂಗದಲ್ಲಿ ಉಪನೋಂದಣಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಉಪನೋಂದಣಾಧಿಕಾರಿಯವರು ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ ಅಥವಾ ಸರ್ಕಾರಿ ಸಾಕ್ಷಿಗಳಿಗೂ ಸಹಾ ನೋಟೀಸ್/ಸಮನ್ಸ್ ಜಾರಿಗೊಳಿಸಿ ಅವರನ್ನು ವಿಚಾರಣೆ ಮಾಡಿ ಅವರ ಹೇಳಿಕೆಗಳನ್ನು ದಾಖಲು ಮಾಡಬೇಕು. ಪತ್ರದಲ್ಲಿ ಹಣಕಾಸು ವಹಿವಾಟು ನಡೆದಬಗ್ಗೆ ಚೆಕ್,ನಗದು,ಡಿಡಿ ಇವುಗಳ ಪಡೆದಿರುವ ಬಗ್ಗೆ ವಿಚಾರಣೆ ಮಾಡಿ ನೋಂದಣಿ ಮಾಡುವ ಬಗ್ಗೆ ಪರಿಶೀಲಿಸಬಹುದು. ಅಥವಾ ಬರೆದು ಕೊಟ್ಟವರಿಗೆ ಹಾಜರಾಗಲು ನೋಟೀಸ್/ಸಮನ್ಸ್ ಜಾರಿಗೊಳಿಸುತ್ತಾರೆ ,ಅದರಂತೆ ಅವರು ಬಂದು ಒಪ್ಪಿಗೆ ನೀಡಲು ನಿರಾಕರಿಸಿದರೆ ಅಥವಾ ಬರದೇ ಇದ್ದರೆ , ಉಪನೋಂದಣಾಧಿಕಾರಿಯವರು ನೋಂದಣಿ ತಿರಸ್ಕರಿಸುತ್ತಾರೆ, ಈ ಆದೇಶವನ್ನು ಪ್ರಶ್ನಿಸಿ ಜಿಲ್ಲಾ ನೋಂದಣಾಧಿಕಾರಿಯವರಿಗೆ 30 ದಿನಗಳಲ್ಲಿ ಅರ್ಜಿ ಸಲ್ಲಿಸಬಹುದು.ಜಿಲ್ಲಾ ನೋಂದಣಿ ಅಧಿಕಾರಿಯವರ ಕಛೇರಿಯಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸುವಾಗ ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

* ಜಿಲ್ಲಾ ನೋಂದಣಿ ಅಧಿಕಾರಿಯವರೂ ಸಹ ದಸ್ತಾವೇಜು ಬರೆದುಕೊಡುವಾಗ ಪತ್ರದಲ್ಲಿ ಹಾಕಿರುವ ಸಾಕ್ಷಿಗಳಿಗೆ,ಪತ್ರ ಬರೆದವರಿಗೆ (ಪತ್ರ ಬರೆಯಲು ಪರವಾನಗೆ ಪಡೆದವರು),ಪತ್ರ ಬರೆದ ನ್ಯಾಯವಾದಿಗೆ,ಪತ್ರ ಬರೆಸಿಕೊಂಡವರಿಗೆ ,ಇನ್ನಿತರ ಸಂದರ್ಬಾನುಸಾರ ವ್ಯಕ್ತಿಗಳಿಗೆ ಅಥವಾ ಸರ್ಕಾರಿ ಸಾಕ್ಷಿಗಳಿಗೂ ಸಹಾ ನೋಟೀಸ್/ಸಮನ್ಸ್ ಜಾರಿಗೊಳಿಸಿ ಅವರನ್ನು ವಿಚಾರಣೆ ಮಾಡಿ ಅವರ ಹೇಳಿಕೆಗಳನ್ನು ದಾಖಲು ಮಾಡಬೇಕು. ಪತ್ರದಲ್ಲಿ ಹಣಕಾಸು ವಹಿವಾಟು ನಡೆದಬಗ್ಗೆ ಚೆಕ್,ನಗದು,ಡಿಡಿ ಇವುಗಳ ಪಡೆದಿರುವ ಬಗ್ಗೆ ವಿಚಾರಣೆ ಮಾಡಿ ನೋಂದಣಿ ಮಾಡುವ ಬಗ್ಗೆ ಆದೇಶಿಸಬಹುದು. ಅಥವಾ ಬರೆದು ಕೊಟ್ಟವರಿಗೆ ಹಾಜರಾಗಲು ನೋಟೀಸ್/ಸಮನ್ಸ್ ಜಾರಿಗೊಳಿಸುತ್ತಾರೆ ,ಅದರಂತೆ ಅವರು ಬಂದು ಒಪ್ಪಿಗೆ ನೀಡಲು ನಿರಾಕರಿಸಿದರೆ ಅಥವಾ ಬರದೇ ಇದ್ದರೆ , ಜಿಲ್ಲಾ ನೋಂದಣಾಧಿಕಾರಿಯವರು ನೋಂದಣಿ ತಿರಸ್ಕರಿಸುತ್ತಾರೆ, ನೋಂದಣಿ ಮಾಡಲು ತಿರಸ್ಕರಿಸಿ ಆದೇಶ ಮಾಡಿದಲ್ಲಿ ಈ ಆದೇಶವನ್ನು ಪ್ರಶ್ನಿಸಿ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು.

*ಸಿವಿಲ್ ನ್ಯಾಯಾಲಯದಲ್ಲಿ ಕೂಲಂಕುಶವಾಗಿ ವಿಚಾರಣೆ ಮಾಡಿ ಅಲ್ಲಿಯೂ ಸಹಾ ಪಾರ್ಟಿಗಳಿಗೆ , ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ನೋಂದಣಿ ಮಾಡಲು ಸೂಚಿಸಬಹುದು ಅಥವಾ ನ್ಯಾಯಾಲಯವೆ ಆ ವ್ಯಕ್ತಿಯ ಪರವಾಗಿ ಡಿಕ್ರಿ ಮಾಡಲು ಅವಕಾಶವಿರುತ್ತದೆ. ಹಾಗೂ ಇನ್ನಿತರ ಯಾವುದೇ ಕ್ರಮವನ್ನು ನ್ಯಾಯಾಲಯವು ಮಾಡಬಹುದಾಗಿದೆ.

Related News

spot_img

Revenue Alerts

spot_img

News

spot_img