ಬೆಂಗಳೂರು, ಮೇ. 20 : ಕೃಷಿ ಭೂಮಿ ಖರೀದಿ ಮಾಡಲು ಪಹಣಿ ಸಿಗುವವರೆಗೂ ಏನೆಲ್ಲಾ ಮಾಡಬೇಖು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಜಮೀನು ಖರೀದಿ ಮಾಡುವಾಗ ಭೂಮಿ ಮಾರಾಟ ಮಾಡುವವರ ಬಳಿ ಏನು ಅಗ್ರಿಮೆಂಟ್ ಮಾಡಿಕೊಳ್ಳಬೇಕು ಹಾಗೂ ಭೂಮಿ ಸರ್ವೇ ಮಾಡಿಸುವುದು ಹೇಗೆ, ಯಾವ ದಾಕಲೆಗಳನ್ನು ಮಾರಾಟ ಮಾಡುವವರ ಬಳಿ ಪರಿಶೀಲನೆ ಮಾಡಬೇಕು ಮತ್ತು ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಹೇಗಿರುತ್ತೆ. ರಿಜಿಸ್ಟರ್ ಆದ ಮೇಲೆ ಮ್ಯೂಟೇಷನ್ ಅನ್ನು ಹೇಗೆ ಮಾಡುತ್ತಾರೆ ಎಂಬುವ ಬಗ್ಗೆ ತಿಳಿಯಿರಿ.
ಕೃಷಿ ಭೂಮಿಯನ್ನು ಖರೀದಿಸುವ ಮುನ್ನ ಮೊದಲು ಆ ಹೊಲವನ್ನು ಹೋಗಿ ನೋಡಬೇಕು. ಬಳಿಕ ಭೂಮಿಯ ಸರ್ವೇ ಸ್ಕೆಚ್ ನಕ್ಷೆಯನ್ನು ನೋಡಬೇಕು. ಯಾಕೆಂದರೆ, ಭೂಮಿಯ ಆಕಾರಕ್ಕೂ, ಸರ್ವೇ ಸ್ಕೆಚ್ ಗೂ ಬಹಳ ವ್ಯತ್ಯಾಸವಿರುತ್ತದೆ. ಈ ಸರ್ವೆ ಸ್ಕೆಚ್ ನಿಂದ, ಹೊಲಕ್ಕೆ ಹೋಗುವ ಕಾಲು ದಾರಿ ಮತ್ತು ರಸ್ತೆ ಬಗ್ಗೆ ಮಾಹಿತಿ ತಿಳಿಯಬಹುದು. ಇನ್ನು ಖರೀದಿ ಮಾಡುತ್ತಿರುವ ಭೂಮಿಯಲ್ಲಿ ಎಷ್ಟು ಖರಾಬ್ ಜಾಗ ಇದೆ ಎಂದು ತಿಳಿಯಲು ಪಹಣಿಯ ಮೂರನೇ ಕಾಲಂ ಅನ್ನು ತಪ್ಪದೇ ನೋಡಿ.
ಖರೀದಿಸುತ್ತಿರುವ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಲು ಪಹಣಿಯ ಹಿಸ್ಸಾ ಕಾಲಂ ಅಥವಾ ಮ್ಯೂಟೇಷನ್ ಅನ್ನು ನೋಡಿ. ಇದರಿಂದ ಜಮೀನಿನ ಮೇಲಿರುವ ಋಣಗಳನ್ನು ತಿಳಿಯಬಹುದು. ಎಲ್ಲಾ ದಾಖಲೆಗಳನ್ನು ನೋಡಿದ ಬಳಿಕ ಹದ್ದುಬಸ್ತು ಹಾಕಿಸಿಕೊಡಲು ಜಮೀನು ಮಾರಾಟ ಮಾಡುತ್ತಿರುವವರಿಗೆ ಹೇಳಿ. ಜಮೀನು ಮಾರುವವರು ಹದ್ದುಬಸ್ತು ಮಾಡಿಸಿಕೊಡುತ್ತಾರೆ. ನಂತರ ಭೂಮಿ ಖರೀದಿಸುವ ಬಗ್ಗೆ ಕರಾರು ಪತ್ರವನ್ನು ಮಾಡಿಸಿ.
ಇದರಲ್ಲಿ ಭೂಮಿ ಮಾರಾಟ ಮಾಡುವವರು ಹಾಗೂ ಖರೀದಿಸುವವರ ನಡುವೆ ನಡೆಯಲಿದ್ದು, ಜಮೀನಿಗೆ ನೀಡುವ ಹಣದ ಬಗ್ಗೆಯೂ ನಮೂದಿಸಿ. ಇನ್ನು ಸಬ್ ರಿಜಿಸ್ಟರ್ ಆಫಿಸಿನಲ್ಲಿ ಭೂಮಿ ಖರೀದಿ ಬಗ್ಗೆ ಸ್ಟ್ಯಾಂಪ್ ಡ್ಯೂಟಿ. ಹಾಗೂ ರಿಜಿಸ್ಟರ್ ಮಾಡಿಸಿ. ಆದರೆ ಇಷ್ಟಕ್ಕೆ ಜಮೀನು ಖರೀದಿ ಮುಕ್ತಾಯವಾಗುವುದಿಲ್ಲ. ಜಮೀನು ಖರೀದಿ ಮಾಡಿಸಿದವರ ಹೆಸರಲ್ಲಿ ಪಹಣಿ ಬರುತ್ತದೆ. ಪಹಣಿ ಬರಬೇಕು ಎಂದರೆ ಮೊದಲು ಜೆ ಫಾರ್ಮ್ ಅನ್ನು ಮಾಡಿಸಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿ ಪಹಣಿ ಬಂದ ಬಳಿಕವೇ ಜಮೀನು ಖರೀದಿ ಕೆಲಸ ಮುಗಿದಂತೆ ಅರ್ಥ.