21.2 C
Bengaluru
Monday, July 8, 2024

ಮನೆಯಲ್ಲಿ ಪೂಜಾ ಕೋಣೆ ಹೇಗಿರಬೇಕು?: ಇಲ್ಲಿವೆ ವಾಸ್ತು ಟಿಪ್ಸ್

ಭಾರತೀಯರ ಮನೆಗಳಲ್ಲಿ ಪೂಜಾ ಕೋಣೆ ಅತ್ಯಂತ ಮಂಗಳಕರ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದು. ಅನೇಕರು ಮಡಿ ಮೈಲಿಗೆಗಳನ್ನು ಪಾಲಿಸುತ್ತಾ ಪೂಜಾ ಕೋಣೆಯಲ್ಲಿ ಪೂಜೆಗಳನ್ನು ನೆರವೇರಿಸುತ್ತಾರೆ. ಈ ಪೂಜಾ ಕೊಠಡಿಯು ಧನಾತ್ಮಕ ಶಕ್ತಿಯನ್ನು ಹರಡುತ್ತದೆ ಮತ್ತು ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರು ಆರೋಗ್ಯಕರವಾಗಿ, ಆರ್ಥಿಕವಾಗಿ ಸುಖಕರಾವಾಗಿ ಇರುವಂತೆ ಸಹಾಯ ಮಾಡುತ್ತದೆ.

ಕೆಲವರು ಪೂಜಾ ಕೊಠಡಿ ಎಂದರೆ ಅಲ್ಲಿ ದೇವರ ವಿಗ್ರಹಗಳನ್ನುಇಟ್ಟು ಪೂಜಿಸುವುದಕ್ಕೆ ಬಳಸಬಹುದು ಅಥವಾ ಕೆಲವರು ಅದನ್ನು ಧ್ಯಾನದ ಸ್ಥಳವಾಗಿ ಬಳಸುತ್ತಿರಬಹುದು. ಹೀಗೆ ಮನೆಯಲ್ಲಿನ ಪವಿತ್ರ ಸ್ಥಳವೊಂದು ಹೇಗಿರಬೇಕು ಎಂಬುದಕ್ಕೂ ಸಹ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಮನೆಯಲ್ಲಿ ಪೂಜಾ ಕೊಠಡಿಗಳನ್ನು ನಿರ್ಮಿಸಬೇಕಾದರೆ ಅಥವಾ ಹಳೆಯದನ್ನು ನವೀಕರಣ ಮಾಡಬೇಕಾದರೆ ಈ ಅಂಶಗಳನ್ನು ಪಾಲಿಸಬೇಕಾಗುತ್ತದೆ.

* ಮನೆಯಲ್ಲಿ ಪೂಜಾ ಕೊಠಡಿ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇರಬೇಕು. ಏಕೆಂದರೆ ಇದು ಮನೆಯ ಸುತ್ತಲೂ ಧನಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ.

* ನಿಮ್ಮ ಪೂಜಾ ಕೊಠಡಿಯನ್ನು ನೆಲಮಾಳಿಗೆ ಅಥವಾ ಮೇಲಿನ ಮಹಡಿಗಳಿಗಿಂತ ನೆಲ ಮಹಡಿಯಲ್ಲೇ ಇರಿಸಲು ಸೂಚಿಸಲಾಗಿದೆ.

* ಮನೆಯಲ್ಲಿ ಧನಾತ್ಮಕ ವಾತಾವರಣ ಮತ್ತು ಧ್ಯಾನಸ್ಥ ಸ್ಥಿತಿಯನ್ನು ಇರಿಸಿಕೊಳ್ಳಲು ಪೂಜಾ ಕೊಠಡಿಯು ಗೋಪುರದಂತಹ ಮೇಲ್ಭಾಗ ಹೊಂದಿರಬೇಕು.

* ದೇವರ ವಿಗ್ರಹಗಳನ್ನು ಗೋಡೆಯಿಂದ ದೂರ ಇಡಬೇಕು ಮತ್ತು ಪೂಜಾ ಕೋಣೆಯಲ್ಲಿ ಎತ್ತರದಲ್ಲಿರಬೇಕು.

* ಧಾರ್ಮಿಕ ಪುಸ್ತಕಗಳು ಮತ್ತು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಪ್ರತ್ಯೇಕ ಕೋಣೆಯಲ್ಲಿ ಆಗ್ನೇಯಕ್ಕೆ ಅಭಿಮುಖವಾಗಿ ಇಡಬೇಕು. ವಿಗ್ರಹದ ಮೇಲೆ ಪೂಜಾ ಸಾಮಗ್ರಿಗಳನ್ನು ಇಡುವುದನ್ನು ತಪ್ಪಿಸಬೇಕು.

* ಪೂಜಾ ಕೋಣೆಗೆ ಬಳಿದಿರುವ ಬಟ್ಟವೂ ಸಹ ಪ್ರಮುಖವಾಗಿರುತ್ತದೆ. ಧ್ಯಾನಸ್ಥ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುವ ತಿಳಿ ಬಣ್ಣಗಳನ್ನು ಆರಿಸಿಕೊಳ್ಳಿ. ಕೋಣೆಗೆ ಗಾಢ ಬಣ್ಣಗಳನ್ನು ಸಾಧ್ಯವಾದಷ್ಟು ಬಳಿಯಬೇಡಿ.

* ಕೋಣೆಯನ್ನು ಉತ್ಸಾಹಭರಿತವಾಗಿಸಲು ಪ್ರಕಾಶಮಾನವಾದ ದೀಪಗಳು ಮತ್ತು ದೀಪಗಳೊಂದಿಗೆ ಕೋಣೆಯನ್ನು ಬೆಳಗಿಸಿ. ಅಲ್ಲದೆ, ಕೋಣೆಯಲ್ಲಿ ಗಾಳಿ ಇರಲು ಕಿಟಕಿ ಇರುವುದು ಉತ್ತಮ.

* ಪೂಜಾ ಕೋಣೆಗೆ ಬಾಗಿಲು ಹೊಂದಲು ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ಪವಿತ್ರ ಮತ್ತು ಮಂಗಳಕರ ಶಕ್ತಿಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಬಾಗಿಲು ಮರದಿಂದ ಮಾಡಲ್ಪಟ್ಟಿರಬೇಕು ಮತ್ತು ಎರಡು ಕವಾಟುಗಳನ್ನು ಹೊಂದಿರಬೇಕು.

* ಪೂಜೆ ಅಥವಾ ದೇವರಿಗೆ ಸಂಬಂಧಿಸದ ಎಲ್ಲಾ ಅನಗತ್ಯ ವಸ್ತುಗಳನ್ನು ಕೋಣೆಯಿಂದ ತೆಗೆದುಹಾಕಬೇಕು.

Related News

spot_img

Revenue Alerts

spot_img

News

spot_img