20.4 C
Bengaluru
Saturday, November 23, 2024

ಶಿವರಾತ್ರಿ ಹಬ್ಬದ ದಿನ ಉಪವಾಸ ಮಾಡಿ ಜಾಗರಣೆ ಮಾಡಿದರೆ ಏನು ಫಲ..?

ಬೆಂಗಳೂರು, ಫೆ. 18 : ಭಾರತೀಯ ಸಂಸ್ಕೃತಿಯಲ್ಲಿ ಸಾಕಷ್ಟು ಹಬ್ಬಗಳು ಬರುತ್ತವೆ. ಇದರಲ್ಲಿ ಕೆಲ ಮುಖ್ಯ ಹಬ್ಬದ ದಿನ ಉಪವಾಸ ಇದ್ದು ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಹಿಂದೂಗಳು ತಿಂಗಳಿಗೆ ಒಮ್ಮೆಯಾದರೂ ಉಪವಾಸ ಇದ್ದೇ ಇರುತ್ತಾರೆ. ಏಕಾದಶಿ, ಸಂಕಷ್ಟಿ ತಿಂಗಳೀಗೆ ಒಮ್ಮೆ ಬರುತ್ತದೆ. ಇಂಥಹ ದಿನಗಳಲ್ಲಿ ಉಪವಾಸವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾರೆ. ಈ ಉಪವಾಸ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮನಸ್ಸಿಗೂ ಒಳ್ಳೆಯದು ಎಂದು ಹೇಳಲಾಗಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಆದರೆ, ಶಿವರಾತ್ರಿಯಲ್ಲಿ ಮಾತ್ರವೇ ಉಪವಾಸ ಮಾಡಿ ಜಾಗರಣೆ ಕೂಡ ಮಾಡಲಾಗುತ್ತದೆ. ಹಾಗಾದರೆ ಬನ್ನಿ ಯಾಕೆ ಶಿವರಾತ್ರಿಯಲ್ಲಿ ಉಪವಾಸ ಮಾಡಿ ಜಾಗರಣೆಯನ್ನು ಮಾಡುತ್ತಾರೆ ಎಂಬುದನ್ನು ತಿಳಿಯೋಣ.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾ ಶಿವ ರಾತ್ರಿಯಲ್ಲಿ ಜಾಗರಣೆ ಹಾಗೂ ಉಪವಾಸ ವ್ರತಕ್ಕೆ ಬಹಳ ಮಹತ್ವವಿದೆ. ಈ ದಿನ ಶಿವ ಭಕ್ತರು ಉಪವಾಸ ಮಾಡುವಾಗ ಕೆಲ ನಿಯಮಗಳನ್ನು ಪಾಲಿಸುತ್ತಾರೆ. ಶಿವರಾತ್ರಿ ವ್ರತವನ್ನು ಮಾಡುವುದರಿಂದ ಅಶ್ವಮೇಧ ಯಾಗ ಮಾಡುವುದಕ್ಕಿಂತ ಹೆಚ್ಚು ಪುಣ್ಯ ಬರುತ್ತದೆ ಎಂದು ಹೇಳಲಾಗಿದೆ. ಶಿವರಾತ್ರಿಯಂದು ಭಕ್ತರು ಮುಂಜಾನೆ ಎದ್ದು ಸ್ನಾನ ಮಾಡಿ. ಶಿವ ಲಿಂಗಕ್ಕೆ ಪೂಜೆ ಮಾಡಬೇಕು.

ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ, ಬಿಲ್ವಪತ್ರೆಯನ್ನು ಅರ್ಪಿಸಬೇಕು. ಶಿವನ ಮಂತ್ರಗಳನ್ನು ಪಠಿಸಿ, ಇದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಬೆಳಗ್ಗಿನಿಂದಲೇ ಉಪವಾಸ ಇರಬೇಕು. ಕೆಲವರು ಒಂದು ಹನಿ ನೀರನ್ನು ಕೂಡ ಸೇವಿಸುವುದಿಲ್ಲ. ಆದರೆ, ಕೆಲವರು ನೀರು, ಹಾಲು ಸೇವಿಸಿದರೆ ದೋಷವಿಲ್ಲ ಎಂದು ಹೇಳುತ್ತಾರೆ. ಇಡೀ ದಿನ ಉಪವಾಸ ಇದ್ದು, ಮಾರನೇಯ ದಿನ ಸ್ನಾನ ಮಾಡಿದ ನಂತರ ಆಹಾರ ಸೇವಿಸಬೇಕು. ಕೆಟ್ಟ ಆಲೋಚನೆ, ಕೆಟ್ಟ ಸಂಗ, ಕೆಟ್ಟ ಪದಗಳು ಎಲ್ಲವೂ ನಮ್ಮಿಂದ ದೂರವಾಗಲಿ ಎಂದು ಉಪವಾಸ ವ್ರತ ಮಾಡಲಾಗುವುದು. ಎಲ್ಲಾ ಕೆಡಕು ದೂರವಾಗುವಂತೆ ಮಾಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುವುದು.
ವಿವಾಹಿತ ಮಹಿಳೆ ತನ್ನ ಗಂಡ, ಮಕ್ಕಳಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ವ್ರತ ಮಾಡಲಾಗುವುದು. ಇನ್ನು ಅವಾಹಿತ ಹೆಣ್ಣು ಮಕ್ಕಳು ಶಿವನಂಥ ಗಂಡ ಸಿಗಲಿ ಎಂದು ಬಯಸಿ ಉಪವಾಸವಿದ್ದು ಶಿವನ ಆರಾಧಿಸಲಾಗುವುದು. ಇಡೀ ದಿನ ಉಪವಾಸ ಇರುವುದರಿಂದ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ.

Related News

spot_img

Revenue Alerts

spot_img

News

spot_img