22.9 C
Bengaluru
Friday, July 5, 2024

ಫ್ಲ್ಯಾಟ್ /ಅಪಾರ್ಟ್ ‌ಮೆಂಟ್ ಖರೀದಿ ವ್ಯವಹಾರದಲ್ಲಿ ಹಕ್ಕುಗಳ ವರ್ಗಾವಣೆ ಯಾವ ರೀತಿ ಆಗುತ್ತದೆ?

Apartment Association

ಫ್ಲ್ಯಾಟ್ /ಅಪಾರ್ಟ್‌ಮೆಂಟ್ ಖರೀದಿ ವ್ಯವಹಾರದಲ್ಲಿ ಹಕ್ಕುಗಳ ವರ್ಗಾವಣೆ ಇತರ ಆಸ್ತಿ ಖರೀದಿ ಅಂದರ ನಿವೇಶನ, ಮನೆ,ವ್ಯವಹಾರದಂತೆ ಅತೀ ಸರಳ ವ್ಯವಹಾರವಾಗಿದೆ. ಪ್ರತಿಯೊಬ್ಬ ಖರೀದಿದಾರರು ತಮ್ಮ ಹಕ್ಕನ್ನು ಪ್ರತಿಪಾದಿಸಿ ಖರೀದಿ ಪತ್ರವನ್ನು ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಫ್ಲ್ಯಾಟ್ /ಅಪಾರ್ಟ್ ‌ಮೆಂಟ್ ಖರೀದಿ ವ್ಯವಹಾರದಲ್ಲಿ ಹಕ್ಕುಗಳ ವರ್ಗಾವಣೆ ಇತರ ಆಸ್ತಿ ಖರೀದಿ ಅಂದರೆ ನಿವೇಶನ, ಮನೆ,ವ್ಯವಹಾರದಂತೆ ಇರದೆ ಸ್ವಲ್ಪ ವ್ಯತ್ಯಾಸವಿರುವುದನ್ನು ಖರೀದಿದಾರರು
ಈ ಕೆಳಗಿನ ಅಂಶಗಳಿಂದ ತಿಳಿಯಬಹುದು.

ಫ್ಲ್ಯಾಟ್ /ಅಪಾರ್ಟ್ ‌ಮೆಂಟ್‌ಗಳ ಮಾಲೀಕತ್ವ

ಭೂಮಿಯಲ್ಲಿ ಅವಿಭಾಜ್ಯದ ಹಕ್ಕು.
ಫ್ಲ್ಯಾಟ್ /ಅಪಾರ್ಟ್‌ಮೆಂಟ್ ನ ಕಾರ್ಪೆಟ್ ಏರಿಯಾ(ಕಟ್ಟಡ).
ಬಹುತ್ವದಲ್ಲಿ ಉಪಯೋಗಿಸುವ ಹಕ್ಕು (Proportionate share in common area).
ಈ ಮೂರು ಹಕ್ಕುಗಳನ್ನು ಒಟ್ಟಿಗೆ ಮಾರಾಟ ಮಾಡಿ ಖರೀದಿ ಪತ್ರದಲ್ಲಿ ವಿವರಿಸಿ ಸಬ್‌-ರಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದಲ್ಲಿಖರೀದಿದಾರನು ಫ್ಲ್ಯಾಟ್ / ಅಪಾರ್ಟ್ ‌ಮೆಂಟ್‌ಗೆ ಸಂಪೂರ್ಣ
ಮಾಲೀಕನಾಗುತ್ತಾನೆ.ಮಾರಾಟಗಾರರಿಂದ ಈ ಮೂರು ಅಂಶಗಳ ಹಕ್ಕುಗಳನ್ನೂ ವಿವರಿಸುವ ಖರೀದಿ ಪತ್ರ ಪಡೆಯಬೇಕು.

ಫ್ಲ್ಯಾಟ್ /ಅಪಾರ್ಟ್ ‌ಮೆಂಟ್‌ ಖರೀದಿ ವ್ಯವಹಾರದಲ್ಲಿ ಭೂಮಿಯಲ್ಲಿ ಕೇವಲ ಅವಿಭಾಜ್ಯ ಅಂಗದ ಹಕ್ಕನ್ನು ಖರೀದಿಸಿದರೆ ಮಾಲೀಕರಾಗುವುದಿಲ್ಲವೇ ?
ಫ್ಲ್ಯಾಟ್ /ಅಪಾರ್ಟ್ ‌ಮೆಂಟ್‌ಗಳ ಖರೀದಿ ವ್ಯವಹಾರದಲ್ಲಿ ಭೂಮಿಯಲ್ಲಿ ಕೇವಲ ಅವಿಭಾಜ್ಯ ಅಂಗದ ಹಕ್ಕನ್ನು ಮಾತ್ರ ಮಾರಾಟಮಾಡಲಾಗಿದೆಯೆಂದು ವಿವರಿಸುವ ಪತ್ರ ನೋಂದಾಯಿಸಿಕೊಂಡರೆ
ಫ್ಲ್ಯಾಟ್ /ಅಪಾರ್ಟ್ ‌ಮೆಂಟ್ ಬಗ್ಗೆ ಪೂರ್ಣ ಮಾಲೀಕತ್ವ ಉಂಟಾಗುವುದಿಲ್ಲ.

ಪ್ರತಿ ಗೃಹ ನಿರ್ಮಾಣ ಸಹಕಾರಿ ಸಂಘಗಳು ಹಸ್ತಾಂತರ ಮಾಡುವ ಅಥವಾ ಪಡೆಯುವ ದಸ್ತಾವೇಜುಗಳಿಗೆ ನೋಂದಣಿ ಅವಶ್ಯವಿದೆಯೇ?

ಸಹಕಾರಿ ಸಂಘಗಳ ಕಾಯಿದೆಗೆ ದಿನಾಂಕ: 01-04-2001ರಿಂದ ಜಾರಿಗೆ ಬರುವ೦ತೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಕಲಂ 38ರಲ್ಲಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯ ಪ್ರಕಾರ ಗೃಹ ನಿರ್ಮಾಣ ,ಸಹಕಾರ ಸಂಘಗಳು ತಾವು ಬರೆದು ಕೂಡುವ ಅಥವಾ ಬರೆಸಿಕೊಳ್ಳುವ ಸ್ಥಿರಾಸ್ತಿಗಳಿಗೆ ಸಂಬಂದಿಸಿದ ಸೇವೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ. (Act No.6 of 2001) ಈ ತಿದ್ದುಪಡಿಯು ಗೃಹನಿರ್ಮಾಣ ಸಹಕಾರ ಸಂಘಗಳು ನಿರ್ಮಿಸಿದ ಅಪಾರ್ಟ್ ಮೆಂಟ್,ಫ್ಲ್ಯಾಟ್ ಗಳಿಗೂ ಅನ್ವಯವಾಗುತ್ತದೆ.

ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳ ಒಡೆತನ ಹೊಂದಿದ ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿ ಮಾಡಿಸದೇ ಕೇವಲ ಷೇರ್ ವರ್ಗಾವಣೆ ಮೂಲಕ ಹಸ್ತಾಂತರ ಮಾಡುವುದು ಸರಿಯೇ?

ಕಾನೂನು ಬದ್ದವಲ್ಲ. ಇಂತಹ ಗೃಹ ನಿರ್ಮಾಣ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಹಂಚಿಕೆ ಅಥವಾ ಮಾರಾಟ ಮಾಡಿದ ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳ ಖರೀದಿ ಪತ್ರವನ್ನು ನೋಂದಣಿ ಕಾಯಿದೆ 1908ರಂತೆ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ.

Related News

spot_img

Revenue Alerts

spot_img

News

spot_img