28.2 C
Bengaluru
Wednesday, July 3, 2024

ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದರೆ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ?

ಅಪಾರ್ಟ್‌ಮೆಂಟ್‌ಗಳಲ್ಲಿ ವ್ಯಕ್ತಿಯೊಬ್ಬ ಫ್ಲಾಟ್‌ಗಳನ್ನು ಖರೀದಿಸಿದರೆ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ನೋಂದಣಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ಅಥವಾ ಬಹುಮಹಡಿ ವಸತಿ ಕಟ್ಟುವ ಮುನ್ನ ನಿವೇಶನ ಅಥವಾ ಜಮೀನನ್ನು ಖರೀದಿ ಮಾಡುತ್ತಾರೆ.

ಖರೀದಿ ಮಾಡುವ ಮುನ್ನ ನಿವೇಶನ ಅಥವಾ ಜಮೀನಿಗೆ ಸಂಬಂಧಪಟ್ಟಂತೆ ಕಾನೂನು ಅಭಿಪ್ರಾಯ ಲಿಖಿತ ರೂಪದಲ್ಲಿ ಪಡೆಯುವ ಪದ್ಧತಿ ಇದೆ. ಕಾನೂನು ಅಭಿಪ್ರಾಯ ಪಡೆಯುವಾಗ ಕಾನೂನು ಅಭಿಪ್ರಾಯದಲ್ಲಿ ಹೇಳಿರುವಂತೆ ಎಲ್ಲಾ ದಾಖಲೆಗಳು ಎಂದರೆ: ತೆರಿಗೆ ಪಾವತಿ ರಶೀದಿ, ಖಾತಾ, ಆರ್‌ಟಿಸಿ, ಭೂ ಪರಿವರ್ತನೆ ಆದೇಶ, ಪ್ಲಾನ್ ಹಾಗೂ ಇನ್ನಿತರ ಎಲ್ಲಾ ದಾಖಲೆಗಳ ಮೂಲ ಅಥವಾ ಪ್ರಾಮಾಣಿಕೃತ ಪ್ರತಿಯನ್ನು ಒಂದು ಸೆಟ್ ಪಡೆದು, ಇವುಗಳನ್ನು ಕೆಲವು ಬ್ಯಾಂಕ್‌ಗಳಿಗೂ ಸಹ ನೀಡಿ ಸಾಲ ಮಂಜೂರು ಮಾಡಲು ಕೆಲವು ಬ್ಯಾಂಕ್‌ಗಳಿಗೆ ಸಲ್ಲಿಸಿ ಅವರಿಂದಲೂ ಸಹ ಅನುಮೋದನೆಗಳನ್ನು ಪಡೆಯುತ್ತಾರೆ.

ಇದೇ ಪ್ರಕಾರವಾಗಿ ಯಾವುದಾದರೂ ಒಬ್ಬ ವ್ಯಕ್ತಿಗೆ ಈ ಸ್ವತ್ತು ನೋಂದಣಿ ಆಗುತ್ತದೆ. ನೋಂದಣಿಯಾದ ನಂತರ ಆ ವ್ಯಕ್ತಿಯ ಹೆಸರಿಗೆ ಎಲ್ಲಾ ಸರ್ಕಾರಿ ದಾಖಲೆಗಳನ್ನು ಅಪ್‌ಡೇಟ್ ಮಾಡಿಸಿಕೊಂಡು ಕೆಲವು ಪ್ರಕರಣಗಳಲ್ಲಿ ಮಾಲೀಕರು ನೇರವಾಗಿ ಅವರೇ ಪ್ಲಾನ್ ಪಡೆದು ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಸುತ್ತಾರೆ.

ಇನ್ನೂ ಕೆಲವು ಪ್ರಕರಣಗಳಲ್ಲಿ ಬಿಲ್ಡರ್‌ಗಳ ಜೊತೆ ಜಂಟಿ ಅಭಿವೃದ್ಧಿ ಕರಾರು (Joint venture) ಮತ್ತು ಜನರಲ್ ಪವರ್ ಆಫ್ ಅಟಾರ್ನಿ (GPA) ಮಾಡಿಕೊಂಡು ಅಪಾರ್ಟ್‌ಮೆಂಟ್‌ ಕಟ್ಟಲಾಗುತ್ತದೆ. ನಿರ್ಮಾಣ ಮುಗಿದ ನಂತರ ಅಪಾರ್ಟ್‌ಮೆಂಟ್‌ಗಳು ಮಾಲೀಕರಿಗೆ ಎಷ್ಟು, ಬಿಲ್ಡರ್‌ಗಳಿಗೆ ಎಷ್ಟು ಎಂದು ತೀರ್ಮಾನಿಸಿಕೊಂಡು ಅದೇ ಪ್ರಕಾರವಾಗಿ ಹಂಚಿಕೆ ಕರಾರು (Sharing agreement) ಮಾಡಿಕೊಳ್ಳುತ್ತಾರೆ.

ತದನಂತರ ಮಾಲೀಕರಿಗೆ ಬಂದ ಫ್ಲಾಟ್‌ಗಳನ್ನು ನೇರವಾಗಿ ಮಾಲೀಕರು, ಬಿಲ್ಡರ್‌ಗಳಿಗೆ ಬಂದ ಫ್ಲಾಟ್‌ಗಳನ್ನು ಬಿಲ್ಡರ್‌ಗಳು ಖರೀದಿದಾರ ವ್ಯಕ್ತಿಗಳಿಗೆ ನೋಂದಣಿ ಮಾಡಿಸುತ್ತಾರೆ. ಈ ಪ್ರಕ್ರಿಯೆಗಳ ಒಳಗೆ ಸಾಮಾನ್ಯವಾಗಿ ಸ್ವತ್ತಿಗೆ ಒಂದೇ ಖಾತಾ ಇರುತ್ತದೆ. ಅಪಾರ್ಟ್‌ಮೆಂಟ್‌ಗಳ ಬಗ್ಗೆ ಅನುಮೋದನೆ ಆಗಿರುವ ಪ್ಲಾನ್ ಅಧಿಕೃತ ದಾಖಲೆ ಆಗಿರುತ್ತದೆ.

ಮೊದಲನೇ ಕ್ರಯ ಅಪಾರ್ಟ್‌ಮೆಂಟ್ ಪಡೆದವರಿಗೆ ನೋಂದಣಿ ಆದ ನಂತರ ಆಯಾ ಫ್ಲಾಟ್‌ಗಳಿಗೆ ನೋಂದಣಿ ಮಾಡಿಸಿಕೊಂಡವರ ಹೆಸರಿಗೆ ಖಾತಾ ಆಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಹಂಚಿಕೆ ಕರಾರು ಆದ ನಂತರ ಮಾಲೀಕರು ಅವರ ಫ್ಲಾಟ್‌ಗಳನ್ನು ಅವರ ಹೆಸರಿಗೆ, ಬಿಲ್ಡರ್‌ಗಳು ಅವರ ಫ್ಲಾಟ್‌ಗಳನ್ನು ಅವರ ಹೆಸರಿಗೆ ಖಾತಾ ಮಾಡಿಸುವುದು ಉಂಟು. ಹಾಗೂ ಸ್ವಾಧೀನ ಪತ್ರ (ಓಸಿ- ಆಕ್ಯುಪೆನ್ಸಿ ಸರ್ಟಿಫಿಕೇಟ್) ಮತ್ತು ಪೂರ್ಣಮಾಡಿದ ಪ್ರಮಾಣ ಪತ್ರ (ಸಿಸಿ- ಕಂಪ್ಲೀಷನ್ ಸರ್ಟಿಫಿಕೇಟ್) ಪಡೆದುಕೊಳ್ಳುತ್ತಾರೆ.

ಅದಾಗ್ಯೂ ಸಹ ನಿವೇಷನ ಅಥವಾ ಜಮೀನಿಗೆ ಖಾತಾ ಇದ್ದು, ಅನುಮೋದನೆಗೊಂಡ ಪ್ಲಾನ್‌ನ ಪ್ರಕಾರ ಮಾಲೀಕರ ಭಾಗಕ್ಕೆ ಬಂದ ಸ್ವತ್ತುಗಳನ್ನು ಮಾಲೀಕರು ಬಿಲ್ಡರ್‌ಗಳನ್ನು ಒಪ್ಪಿಗೆ ಪಾರ್ಟಿಯಾಗಿ ಕ್ರಯ ಮಾಡಿಕೊಳ್ಳಬಹುದು ಅಥವಾ ಬಿಲ್ಡರ್‌ಗಳು ಅವರಿಗೆ ಬಂದ ಫ್ಲಾಟ್‌ಗಳನ್ನು ಓನರ್‌ಗಳ ಪರವಾಗಿ ಜನರಲ್ ಪವರ್ ಆಫ್ ಅಟಾರ್ನಿಯಾಗಿ ಅಧಿಕಾರವುಳ್ಳ ವ್ಯಕ್ತಿಯಾಗಿ ಕ್ರಯಪತ್ರ ಮಾಡಿಕೊಳ್ಳುವುದು ಹೆಚ್ಚು ಚಾಲ್ತಿಯಲ್ಲಿದೆ. ಮೇಲೆ ತಿಳಿಸಿರುವ ಎಲ್ಲಾ ಅಂಶಗಳೂ ಸಹ ಕಾನೂನಿನ ಪ್ರಕಾರ ಮಾನ್ಯವಾಗಿವೆ.

Related News

spot_img

Revenue Alerts

spot_img

News

spot_img