22.9 C
Bengaluru
Friday, July 5, 2024

ದಸ್ತಾವೇಜು ನೋಂದಣಿ ಮಾಡಿಸುವ ಉದ್ದೇಶವೇನು ? ನೋಂದಣಿ ಮಾಡಿಸದೇ ಇದ್ದರೆ ಆಗುವ ಪರಿಣಾಮಗಳೇನು?

ದಸ್ತಾವೇಜು ನೋಂದಣಿ ಮಾಡಿಸುವ ಉದ್ದೇಶವೇನು ?
ನೋಂದಣಿ ಮಾಡಿಸುವುದರಿಂದ ಆಸ್ತಿ ಹಸ್ತಾಂತರ ಮು೦ತಾದ ವಿಷಯಗಳು ಶಾಶ್ವತವಾದ ಸಾರ್ವಜನಿಕ ದಾಖಲೆಯಾಗುತ್ತದೆ. ಇದು ಸಾರ್ವಜನಿಕರಿಗೆ ಒಂದು ತಿಳುವಳಿಕೆ. ಆಸ್ತಿಯ ಹಸ್ತಾಂತರ
ಪಡೆಯುವವರು ತಾವು ಮಾಡಿಕೊಳ್ಳುವ ಹಸ್ತಾಂತರಕ್ಕೆ ಸಂಬಂಧಿಸಿದ ಸ್ವತ್ತು ಇನ್ನಾವುದೇ ರೀತಿಯಲ್ಲಿ ಈ ಮೊದಲೇ ಬೇರಾರಿಗಾದರೂ ಹಸ್ತಾಂತರವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು.
(ಆ) ಆಸ್ತಿ ಹಸ್ತಾಂತರ ಕಾಯಿದೆ, 1882 ರನ್ವಯ ಆಸ್ತಿಯಲ್ಲಿ ಹಕ್ಕು ಸ್ವಾಮ್ಯ ಹಾಗೂ ಹಿತಾಸಕ್ತಿಯು ದಸ್ತಾವೇಜು ನೋಂದಾದರೆ ಮಾತ್ರ ಸಂಬಂಧಪಟ್ಟವರಿಗೆ ಪ್ರಾಪ್ತವಾಗುತ್ತದೆ.

ದಸ್ತಾವೇಜು ನೋಂದಣಿ ಮಾಡಿಸದೇ ಇದ್ದರೆ ಆಗುವ ಪರಿಣಾಮಗಳೇನು?
ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾದ ದಸ್ತಾವೇಜನ್ನು ನೋಂದಣಿ ಮಾಡಿಸದೇ ಇದ್ದರೆ ಅದು ಕಾನೂನು ಬದ್ಧವಾದ ಹಸ್ತಾಂತರವಾಗುವುದಿಲ್ಲ (ನೋ೦ದಣಿ ಕಾಯಿದೆ, 1908ರ ಪ್ರಕರಣ 49)
ಸ್ಥಿರಾಸ್ತಿ ಹಸ್ತಾಂತರಗಳಲ್ಲದೆ ಇತರ ಕರಾರು, ವ್ಯವಹಾರಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಾಯಿಸುವುದು ಕಡ್ಡಾಯವಲ್ಲದಿದ್ದರೂ ಅವುಗಳನ್ನು ನೋಂದಾಯಿಸುವುದರಿಂದ ಶಾಶ್ವತ
ದಾಖಲೆಗಳನ್ನು ನಿರ್ಮಿಸಿದಂತಾಗುತ್ತದೆ. ನೋಂದಾಯಿತ ದಸ್ತಾವೇಜು ನೋಂದಾಯಿಸದೇ ಇರುವ ದಸ್ತಾವೇಜಿಗಿಂತ ಹೆಚ್ಚಿನ ಪುರಾವೆ ಮಹತ್ವವನ್ನು ಪಡೆದಿರುತ್ತದೆ.

Related News

spot_img

Revenue Alerts

spot_img

News

spot_img