20.2 C
Bengaluru
Thursday, December 19, 2024

ಈ ಬಾರಿಯ ಕರ್ನಾಟಕ ಬಜೆಟ್ ವಿಶೇಷತೆ ಏನು, ಕರ್ನಾಟಕ ಬಜೆಟ್ ಮಂಡನೆ ಯಾವಾಗ

ಬೆಂಗಳೂರು;ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಫೆಬ್ರವರಿ 17ರಂದು ಎರಡನೇ ಬಾರಿಗೆ ಬಜೆಟ್ ಮಂಡಿಸಲಿದ್ದು,ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಮಂಡಿಸುವ ಬಜೆಟ್ ಮೇಲೆ ಜನರ ದೃಷ್ಟಿ ನೆಟ್ಟಿದೆ.ಮುಂಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಜನಸಾಮಾನ್ಯರಿಗೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.ಬಿಜೆಪಿ ರಾಜ್ಯದ ಜನರಿಗೆ ಭರ್ಜರಿ ಕೊಡುಗೆ ನೀಡುವ ಸಾಧ್ಯತೆಗಳಿವೆ, ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ 2023-24ನೇ ಸಾಲಿನ ರಾಜ್ಯ ಬಜೆಟ್ ಮಹತ್ವ ಪಡೆದುಕೊಂಡಿದೆ.

ಮಹಿಳೆಯರಿಗೆ,ರೈತರ ಜಮೀನುಗಳಿಗೆ ನೀರಾವರಿ ಯೋಜನೆ,ವಯಸ್ಕರರಿಗೆ,ಅಂಗವಿಕಲರಿಗೆ, ಬಡವರಿಗೆ,ಅನುಕೂಲವಾಗುವಂತೆ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ.ಈ ಬಾರಿಯ ಬಜೆಟ್ ಗಾತ್ರವು ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ.ಇಡೀ ಕರ್ನಾಟಕವೇ ಬಜೆಟ್ ನಿರೀಕ್ಷೆ ಮಾಡಬಹುದು ಕಳೆದ ಬಾರಿ ಜನಪರ ಬಜೆಟ್ ನೀಡಿದಂತೆ ಈ ಬಾರಿಯೂ ಜನಪರ ಆಯವ್ಯಯ ನೀಡಲಾಗುವುದು. ಎಂದು ಸ್ವತ್ವಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಈ ಬಾರಿ ಸೂಕ್ಷ್ಮ ಬಜೆಟ್​ ಮಂಡನೆಯಾಗಲಿದ್ದು, ಕರಾವಳಿಗೆ ಭಾಗಕ್ಕೆ ಸೂಕ್ತ ಅನುದಾನ ನೀಡುವುದಾಗಿ ಸಹ ಈಗಾಗಲೇ ಸಿಎಂ ಘೋಷಣೆ ಮಾಡಿದ್ದಾರೆ.ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡಿನೆ ಮಾಡುತ್ತಿರುವುದು ವಿಶೇಷವಾಗಿದ್ದು, ಮಹತ್ವದ ಯೊಜನೆಗಳು ಘೋಷಣೆಯಾಗು ನಿರೀಕ್ಷೆಗಳಿವೆ. ಮತದಾರರನ್ನು ಸೆಳೆಯಲು ಸಿಎಂ ಬೊಮ್ಮಾಯಿ ಯಾವುದಕ್ಕೆಲ್ಲ ಪ್ರಾಮುಖ್ಯತೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.

ಫೆಬ್ರವರಿ 10 ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು,ರಾಜ್ಯ ಬಜೆಟ್ ಫೆಬ್ರವರಿ 17 ಕ್ಕೆ ಮಂಡನೆ ಆಗಲಿದೆ.ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಬಜೆಟ್‌ ಮಂಡನೆ ಮಾಡುವ ಹಲವು ನಿರೀಕ್ಷೆಗಳಿವೆ.ವಿಧಾನಸಭಾ ಚುನಾವಣೆ ಅಷ್ಟೇಅಲ್ಲದೆ ಬಿಬಿಎಂಪಿ ಚುನಾವಣೆ ಸಹ ಮುಂದೆ (BBMP Elections) ಬರುತ್ತಿದೆ ಮತ್ತು ಬಸವರಾಜ ಬೊಮ್ಮಾಯಿಯವರ ಬಳಿಯಲ್ಲೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಇದೆ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆ ಆಗಿವೆ.ಹೀಗಾಗಿ ರಾಜಧಾನಿ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡುವ ನಿರೀಕ್ಷೆಗಳಿವೆ

Related News

spot_img

Revenue Alerts

spot_img

News

spot_img